ಎಲಾನ್ ಮಸ್ಕ್ ಮತ್ತು ಮಾರ್ಕ್ ಜುಕರ್‌ಬರ್ಗ್ ಕೇಜ್ ಫೈಟ್: ಎಕ್ಸ್‌ನಲ್ಲಿ ಪ್ರಸಾರ
Elon Musk vs Mark Zuckerberg: ಟ್ವಿಟ್ಟರ್ "X" ನಲ್ಲಿ ಲೈವ್ ಸ್ಟ್ರೀಮಿಂಗ್‌ನ ಮಸ್ಕ್‌ನ ದೃಢೀಕರಣಕ್ಕೆ ಮಾರ್ಕ್ ಜುಕರ್‌ಬರ್ಗ್ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ, ಜುಕರ್‌ಬರ್ಗ್ ಅವರೊಂದಿಗೆ ಕೇಜ್ ಫೈಟ್ ಆಡಲು ತಾವು ಸಿದ್ಧವಿರುವುದಾಗಿ ಮಸ್ಕ್ ಜೂನ್ನಲ್ಲಿ ಕೂಡ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದರು.
1 / 8
ಟೆಕ್ ಜಗತ್ತಿನಲ್ಲಿ ಮಹತ್ವದ ಬೆಳವಣಿಗೆ ಎಂಬಂತೆ, ಎಲಾನ್ ಮಸ್ಕ್ ಅವರು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ವಿರುದ್ಧ ಮುಂಬರುವ ಕೇಜ್ ಫೈಟ್ ಅನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಜೊತೆಗೆ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ "ಎಕ್ಸ್"ನಲ್ಲಿ (ಹಿಂದೆ ಟ್ವಿಟ್ಟರ್ ಎಂದು ಕರೆಯಲಾಗುತ್ತಿತ್ತು), ಈ ಪಂದ್ಯವನ್ನು ಲೈವ್-ಸ್ಟ್ರೀಮ್ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
2 / 8
ಟ್ವಿಟ್ಟರ್ "X" ನಲ್ಲಿ ಲೈವ್ ಸ್ಟ್ರೀಮಿಂಗ್‌ನ ಮಸ್ಕ್‌ನ ದೃಢೀಕರಣಕ್ಕೆ ಮಾರ್ಕ್ ಜುಕರ್‌ಬರ್ಗ್ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ, ಜುಕರ್‌ಬರ್ಗ್ ಅವರೊಂದಿಗೆ ಕೇಜ್ ಫೈಟ್ ಆಡಲು ತಾವು ಸಿದ್ಧವಿರುವುದಾಗಿ ಮಸ್ಕ್ ಜೂನ್ನಲ್ಲಿ ಕೂಡ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದರು.
3 / 8
"ಜುಕ್ ವರ್ಸಸ್ ಮಸ್ಕ್ ಫೈಟ್ ಅನ್ನು ಎಕ್ಸ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇದರಿಂದ ಬರುವ ಎಲ್ಲಾ ಆದಾಯವನ್ನು ಹಿರಿಯರಿಗಾಗಿ ಚಾರಿಟಿಗೆ ನೀಡಲಾಗುವುದು" ಎಂದು ಮಸ್ಕ್ ಭಾನುವಾರ ಬೆಳಿಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಮಸ್ಕ್ ಮತ್ತು ಜುಕರ್‌ಬರ್ಗ್ ಅವರು ನಿಜವಾಗಿಯೂ ಕೇಜ್ ಮ್ಯಾಚ್‌ನಲ್ಲಿ ಸೆಣಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
4 / 8
ಎಲಾನ್ ಮಸ್ಕ್ ಪ್ರತಿದಿನ ಭಾರ ಎತ್ತುವ ಅಭ್ಯಾಸ ವ್ಯಾಯಾಮಗಳನ್ನು ಮಾಡುತ್ತಿದ್ದಾರಂತೆ. ಕೆಲಸದ ನಡುವೆ ವ್ಯಾಯಾಮ ಮಾಡಲು ಸಮಯ ಸಿಗುತ್ತಿಲ್ಲ, ಹೀಗಾಗಿ ವ್ಯಾಯಾಮ ಉಪಕರಣಗಳನ್ನು ಆಫೀಸಿಗೂ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಮಸ್ಕ್ ಹೇಳಿದ್ದರು.
5 / 8
ಅತ್ತ ಜುಕರ್ ಬರ್ಗ್ ಜುಲೈನಲ್ಲಿ ಯುಎಫ್ಸಿ ಚಾಂಪಿಯನ್ಗಳಾದ ಇಸ್ರೇಲ್ ಅಡೆಸಾನ್ಯಾ ಮತ್ತು ಅಲೆಕ್ಸಾಂಡರ್ ವೊಲ್ಕನೋವ್ಸ್ಕಿ ಅವರೊಂದಿಗೆ ಮಿಕ್ಸೆಡ್ ಮಾರ್ಶಲ್ ಆರ್ಟ್ಗಳ ಸಮರ ಕಲೆಗಳಲ್ಲಿ ತರಬೇತಿ ಪಡೆಯಲು ಪ್ರಾರಂಭಿಸಿದ್ದರು.
6 / 8
ತಮ್ಮ ಮನೆ ಬಳಿಯೇ ಅಖಾಡ ನಿರ್ಮಿಸಿಕೊಂಡಿರುವ ಮೆಟಾ ಮುಖ್ಯಸ್ಥ ಮಾರ್ಕ್, ಪ್ರತಿದಿನ 4000 ಕ್ಯಾಲೋರಿಯಷ್ಟುಆಹಾರ ಸೇವಿಸುತ್ತಿದ್ದಾರೆ. ಕಳೆದ ತಿಂಗಳಷ್ಟೇ ಅವರು ಜಿಯು-ಜಿಟ್ಸು ಟೂರ್ನಮೆಂಟ್‌ನಲ್ಲಿ ಮೊದಲ ಬಾರಿಗೆ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿದ್ದರು.
7 / 8
UFC ಅಧ್ಯಕ್ಷ ಡಾನಾ ವೈಟ್, ಈ ಹೋರಾಟವು ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ಇತಿಹಾಸದಲ್ಲಿ ಅತಿದೊಡ್ಡ ಹೋರಾಟವಾಗಿದೆ ಎಂದಿದ್ದಾರೆ.
8 / 8
ಟೆಕ್ ಮೊಗಲ್‌ಗಳ ನಡುವಿನ ಕಾದಾಟವು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಅಭಿಮಾನಿಗಳು ಇವರಿಬ್ಬರನ್ನು ವೇದಿಕೆಯ ಮೇಲೆ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ವಿಶ್ವದ ಇಬ್ಬರು ಪ್ರಭಾವಿ ವ್ಯಕ್ತಿಗಳ ನಡುವಿನ ಘರ್ಷಣೆಯು ಐತಿಹಾಸಿಕ ಘಟನೆಯಾಗಲಿದೆ ಎಂದು ಅನೇಕರು ಹೇಳುತ್ತಿದ್ದಾರೆ.