Quit Caffeine: ಆರೋಗ್ಯದ ದೃಷ್ಟಿಯಿಂದ… ಒಂದು ತಿಂಗಳು ಕಾಫಿ, ಚಹಾ ಸೇವನೆ ಖಡಕ್ಕಾಗಿ ನಿಲ್ಲಿಸಿಬಿಡಿ, ನಿಮ್ಮ ದೇಹಕ್ಕೆ ಅದೇನು ಆಗುತ್ತೋ ನೋಡೋಣಾ!

|

Updated on: Jul 15, 2023 | 4:58 PM

ಆರೋಗ್ಯದ ದೃಷ್ಟಿಯಿಂದ... ಒಂದು ತಿಂಗಳು ಕಾಫಿ, ಚಹಾ ಸೇವನೆ ಖಡಕ್ಕಾಗಿ ನಿಲ್ಲಿಸಿಬಿಡಿ, ನಿಮ್ಮ ದೇಹಕ್ಕೆ ಅದೇನು ಆಗುತ್ತೋ ನೋಡೋಣಾ!

1 / 5
ಕೆಫೀನ್ ತ್ಯಜಿಸುವುದು: ಪ್ರಪಂಚದಾದ್ಯಂತದ ಕೋಟ್ಯಾಂತರ ಜನರು ಬೆಳಿಗ್ಗೆ ಒಂದು ಕಪ್ ಚಹಾ ಅಥವಾ ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಈ ಬಿಸಿ ಬಿಸಿ ಪಾನೀಯವನ್ನು ಇಷ್ಟಪಡದವರೇ ಇಲ್ಲ. ಕಿರಿಕಿರಿಯೆನಿಸಿದರೆ... ಸಿಟ್ಟು ಬಂದರೂ.. ಬೇಸರವಾದರೆ..? ನೋವು ಅನುಭವಿಸಿದರೆ... ತಲೆನೋವು, ಸುಸ್ತು ಇದ್ದರೆ ಚಿಂತಿಸಬೇಕಾಗಿಲ್ಲ ಅದರಿಂದ ಪರಿಹಾರ ಪಡೆಯಲು ಜನ ಒಂದು ಕಪ್ ಕಾಫಿ/ ಚಹಾ ಕುಡಿದು ಹಾಯ್​ ಆಗಿದೆ ಅಂತಾರೆ.   ದಿನಕ್ಕೆ ಹಲವಾರು ಬಾರಿ ತೆಗೆದುಕೊಳ್ಳುವವರೂ ಇದಾರೆ. ಇದು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಮತ್ತು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಎನ್ನುತ್ತಾರೆ.

2 / 5
ಆದರೆ ತಿಳ್ಕೊಳ್ಳಿ, ಟೀ-ಕಾಫಿ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿ ಕೆಫೀನ್ ಇರುತ್ತದೆ. ಇವುಗಳಿಂದ ದೇಹಕ್ಕೆ ಹಲವಾರು ತೊಂದರೆ ಉಂಟಾಗುತ್ತವೆ. ಈ ಪಾನೀಯವನ್ನು ಸ್ವಲ್ಪ ದಿನ ಬಿಟ್ಟುಬಿಡಿ ಎಂದು ಹೇಳಿದರೆ.. ಯಾರೂ ಕೇಳುವುದಿಲ್ಲ.. ಮತ್ತು ಅದು ಅಸಾಧ್ಯ ಅಂದುಬಿಡುತ್ತಾರೆ. ಏಕೆಂದರೆ ಅದು ಚಟವಾಗಿ ಪರಿಣಮಿಸಿಬಿಟ್ಟಿರುತ್ತದೆ. ಒಬ್ಬ ವ್ಯಕ್ತಿಯು ಒಂದು ತಿಂಗಳು ಚಹಾ ಮತ್ತು ಕಾಫಿಯನ್ನು ತ್ಯಜಿಸಿದರೆ ಅವನ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎಂಬುದನ್ನು ಈಗ ತಿಳಿಯೋಣ.

3 / 5
ರಕ್ತದೊತ್ತಡ ನಿಯಂತ್ರಣ: ಟೀ - ಕಾಫಿ ನಮ್ಮನ್ನು ಆಯಾಸದಿಂದ ಮುಕ್ತಿಗೊಳಿಸುತ್ತದೆ. ಆದರೆ.. ಇವು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಈ ಪಾನೀಯಗಳಲ್ಲಿ ಕೆಫೀನ್ ಇರುತ್ತದೆ. ಹಾಗಾಗಿ ಒಂದು ತಿಂಗಳ ಕಾಲ ಟೀ-ಕಾಫಿ ಕುಡಿಯುವುದನ್ನು ನಿಲ್ಲಿಸಿದರೆ ನಿಮ್ಮ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ ಅಧಿಕ ರಕ್ತದೊತ್ತಡದ ದೂರು ದುಮ್ಮಾನ ದೂರವಾಗುತ್ತದೆ.

4 / 5
ಶಾಂತ ನಿದ್ರೆ: ಚಹಾ ಮತ್ತು ಕಾಫಿಯನ್ನು ತ್ಯಜಿಸುವುದು ನಿಮ್ಮ ನಿದ್ರೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಬಾಲ್ಯದಲ್ಲಿ ನೀವು ಎಷ್ಟು ಹೊತ್ತು ಮಲಗುತ್ತಿದ್ದಿರಿ.. ವಯಸ್ಕರಾದ ನೀವು ಎಷ್ಟು ಸಮಯ ಮಲಗಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ.. ನೀವು ಕೆಫೀನ್ ಹೊಂದಿರುವ ಪಾನೀಯಗಳನ್ನು ಬಳಸಿದ ನಂತರ ನಿದ್ರೆಯ ಸಮಸ್ಯೆಗಳು ಪ್ರಾರಂಭವಾದವು. ಚಹಾ-ಕಾಫಿ ತ್ಯಜಿಸಿದ ಒಂದು ವಾರದಲ್ಲಿ ನಿಮ್ಮ ನಿದ್ರೆಯಲ್ಲಿ ಗಮನಾರ್ಹ ಸುಧಾರಣೆಯನ್ನು ನೀವು ನೋಡುತ್ತೀರಿ. ಇನ್ನು ಒಂದು ತಿಂಗಳಲ್ಲಿ ದೊಡ್ಡ ವ್ಯತ್ಯಾಸವನ್ನು ಕಾಣಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

5 / 5
ಹಲ್ಲಿನ ಆರೋಗ್ಯ: ಟೀ-ಕಾಫಿಯಂತಹ ಬಿಸಿ ಪದಾರ್ಥಗಳು ನಮ್ಮ ಹಲ್ಲುಗಳಿಗೆ ತುಂಬಾ ಹಾನಿಕಾರಕ. ಇದು ಹಲ್ಲುಗಳ ಬಣ್ಣವನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಅವುಗಳನ್ನು ದುರ್ಬಲಗೊಳಿಸುತ್ತದೆ. ನೀವು ಒಂದು ತಿಂಗಳು ಚಹಾ ಮತ್ತು ಕಾಫಿ ಕುಡಿಯುವುದನ್ನು ನಿಲ್ಲಿಸಿದರೆ, ನಿಮ್ಮ ಹಲ್ಲುಗಳನ್ನು ದೊಡ್ಡ ಹಾನಿಯಿಂದ ರಕ್ಷಿಸಬಹುದು. ಫಳಫಳ ಬಿಳುಪು ಕೂಡ ಬರುತ್ತದೆ. ಟೀ-ಕಾಫಿಯಲ್ಲಿ ಆಮ್ಲ ಇದೆ. ಇದು ಹಲ್ಲಿನ ದಂತಕವಚವನ್ನು ಹಾನಿಗೊಳಿಸುತ್ತದೆ ಮತ್ತು ದುರ್ಬಲಗೊಳಿಸುತ್ತದೆ.