Bones Health: ಈ ಹಣ್ಣುಗಳ ಸೇವನೆ ಮೂಳೆಗಳ ಬಲವರ್ಧನೆಗೆ ಸಹಕಾರಿ

|

Updated on: Apr 21, 2022 | 9:57 AM

Bones Health: ಹಿಂದೆಲ್ಲಾ ಕೀಲು ನೋವು ಅಥವಾ ಸ್ನಾಯು ಸೆಳೆತ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಈ ಸಮಸ್ಯೆಗಳು ಎಲ್ಲರನ್ನೂ ಕಾಡುತ್ತಿವೆ. ಕೆಲವೊಂದು ಹಣ್ಣುಗಳ ಸೇವನೆಯಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು. ಸೇಬು, ಅನಾನಸ್, ಸ್ಟ್ರಾಬೆರಿ ಹಾಗೂ ಬಾಳೆಹಣ್ಣು ಮೂಳೆಗಳ ಬಲವರ್ಧನೆಗೆ ಸಹಕಾರಿಯಾಗಿವೆ.

1 / 5
Bones Health: ಹಿಂದೆಲ್ಲಾ ಕೀಲು ನೋವು ಅಥವಾ ಸ್ನಾಯು ಸೆಳೆತ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಈ ಸಮಸ್ಯೆಗಳು ಎಲ್ಲರನ್ನೂ ಕಾಡುತ್ತಿವೆ. ಯುವ ಜನಾಂಗವೂ ಇದಕ್ಕೆ ಹೊರತಾಗಿಲ್ಲ. ಆದರೆ ಕೆಲವೊಂದು ಹಣ್ಣುಗಳ ಸೇವನೆಯಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು. ಮೂಳೆಗಳನ್ನು ಹಣ್ಣುಗಳ ಸೇವನೆಯಿಂದ ದೃಢವಾಗಿಸಬಹುದು.

2 / 5
ಸೇಬು: ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಅದಕ್ಕಾಗಿಯೇ ದಿನಕ್ಕೆ ಒಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುತ್ತಾರೆ. ಹೆಚ್ಚಿನ ಕ್ಯಾಲ್ಸಿಯಂ ಹೊಂದಿರುವ ಸೇಬುಗಳನ್ನು ತಿನ್ನುವುದು ಮೂಳೆಗಳನ್ನು ಬಲಪಡಿಸಲು ಉತ್ತಮ ಮಾರ್ಗವಾಗಿದೆ ಎನ್ನುತ್ತಾರೆ ತಜ್ಞರು.

3 / 5
ಅನಾನಸ್: ಇದರಲ್ಲಿರುವ ಪೊಟ್ಯಾಶಿಯಂ ದೇಹದಲ್ಲಿನ ಆಸಿಡ್ ಲೋಡ್ ಅನ್ನು ತಟಸ್ಥಗೊಳಿಸುತ್ತದೆ. ಇದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚುತ್ತದೆ. ಬೇಸಿಗೆಯಲ್ಲಿ ಇವುಗಳನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ.

4 / 5
ಸ್ಟ್ರಾಬೆರಿ: ಮ್ಯಾಂಗನೀಸ್ ದೇಹಕ್ಕೆ ಬಹಳ ಮುಖ್ಯ. ಪೊಟ್ಯಾಸಿಯಮ್ ಮತ್ತು ವಿಟಮಿನ್-ಸಿ ಜತೆಗೆ, ಈ ಹಣ್ಣಿನಲ್ಲಿ ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಕೂಡ ಇದೆ. ಬೇಸಿಗೆಯಲ್ಲಿ ನೀವು ಸ್ಟ್ರಾಬೆರಿ ಮತ್ತು ಹಾಲಿನೊಂದಿಗೆ ಮಾಡಿದ ಮಿಲ್ಕ್​ಶೇಕ್  ಕುಡಿಯಬಹುದು. ಹಾಲು ಕೂಡ ಮೂಳೆಗಳ ಬಲವರ್ಧನೆಗೆ ಸಹಕಾರಿ.

5 / 5
ಬಾಳೆಹಣ್ಣು: ಸಂಧಿವಾತ ಅಥವಾ ಸ್ನಾಯುಗಳ ಸೆಳೆತ ಹೊಂದಿರುವವರು ಪ್ರತಿದಿನ ಬಾಳೆಹಣ್ಣುಗಳನ್ನು ತಿನ್ನಬಹುದು. ತಜ್ಞರ ಪ್ರಕಾರ ಇದರಲ್ಲಿರುವ ಪೋಷಕಾಂಶಗಳು ಮೂಳೆ ಮತ್ತು ಹಲ್ಲುಗಳ ಬಲವರ್ಧನೆಗೆ ಪ್ರಮುಖ ಪಾತ್ರ ವಹಿಸುತ್ತವೆ.