ಒಂದು ಸಿಮ್​ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಲು ಸಾಧ್ಯ?; ಈ ಬಗ್ಗೆ ಟ್ರಾಯ್ ನಿಯಮ ಏನು ಹೇಳುತ್ತೆ?

|

Updated on: Aug 07, 2023 | 6:55 AM

Tech Tips: ದೇಶದಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಹೊಸ ಎಂಎನ್‌ಪಿ, ಅಂದರೆ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಇದರಿಂದಾಗಿ ಗ್ರಾಹಕರು ಯಾವುದೇ ಸಮಸ್ಯೆಯಿಲ್ಲದೆ ಸುಲಭದಲ್ಲಿ ಮೊಬೈಲ್ ನಂಬರ್ ಪೋರ್ಟ್ ಮಾಡಿಕೊಳ್ಳಬಹುದು.

1 / 8
ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕ ಕೆಲಸಗಳು ಫೋನ್ ಮೂಲಕವೇ ನಡೆಯುವುದರಿಂದ ಮೊಬೈಲ್​ನಲ್ಲಿ ಸಿಮ್, ನೆಟ್​ವರ್ಕ್, ಡೇಟಾ ಬಹುಮುಖ್ಯ. ಆದರೆ, ಕೆಲವು ಸಿಮ್​ಗಳಲ್ಲಿ ನಿಧಾನಗತಿಯ ವೇಗ, ಕೆಲವೊಂದು ಪ್ರದೇಶದಲ್ಲಿ ಅಸಮರ್ಪಕ ನೆಟ್‌ವರ್ಕ್ ಕವರೇಜ್ ಅಥವಾ ಇತರೆ ಕಾರಣಗಳಿಗಾಗಿ ಬಳಕೆದಾರರು ಮೊಬೈಲ್‌ ನಂಬರ್ ಪೋರ್ಟ್‌ ಮಾಡಲು ಮುಂದಾಗುತ್ತಾರೆ.

2 / 8
ಅಂದರೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಒಂದು ನೆಟ್​​ ವರ್ಕ್‌ನಿಂದ ಮತ್ತೊಂದು ನೆಟ್​​ವರ್ಕ್‌ಗೆ ಸೇವೆಯನ್ನು ಬದಲಾಯಿಸುವ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಸೌಲಭ್ಯ.

3 / 8
ಅನೇಕರಿಗೆ ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು?, ಈ ಬಗ್ಗೆ ಟ್ರಾಯ್ ನಿಯಮ ಏನು ಹೇಳುತ್ತೆ?, ಪೋರ್ಟ್ ಮಾಡಲು ಸುಲಭ ದಾರಿ ಯಾವುದು? ಎಂಬ ಬಗ್ಗೆ ತಿಳಿದಿರುವುದಿಲ್ಲ. ಹಾಗಿದ್ರೆ ಈ ಸ್ಟೋರಿ ಓದಿ.

4 / 8
ದೇಶದಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಹೊಸ ಎಂಎನ್‌ಪಿ, ಅಂದರೆ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಇದರಿಂದಾಗಿ ಗ್ರಾಹಕರು ಯಾವುದೇ ಸಮಸ್ಯೆಯಿಲ್ಲದೆ ಸುಲಭದಲ್ಲಿ ಮೊಬೈಲ್ ನಂಬರ್ ಪೋರ್ಟ್ ಮಾಡಿಕೊಳ್ಳಬಹುದು.

5 / 8
ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು? ಎಂಬ ಗೊಂದಲ ಅನೇಕರಿಗೆ ಇರುತ್ತದೆ. ಇದಕ್ಕೆ ಉತ್ತರ, ಒಂದು ಮೊಬೈಲ್ ಸಂಖ್ಯೆಯನ್ನು ನೀವು ಎಷ್ಟು ಬಾರಿ ಬೇಕಾದರೂ ಪೋರ್ಟ್ ಮಾಡಬಹುದು. ಇದಕ್ಕೆ ಯಾವುದೇ ನಿರ್ದಿಷ್ಟ ತಡೆಯಿಲ್ಲ.

6 / 8
ಆದರೆ, ನಿಮ್ಮ ಮೊಬೈಲ್ ನಂಬರ್ ಪೋರ್ಟ್ ಆಗಬೇಕು ಎಂದರೆ ಕೆಲವು ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಮೊಬೈಲ್ ನಂಬರ್ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಮಾಡಿಕೊಳ್ಳಲು ಬಯಸಿದ್ದರೆ, ಅದಕ್ಕೂ ಮುಂಚೆ ಹಳೆಯ ಕಂಪನಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಬಿಲ್ ಮೊತ್ತವನ್ನು ಪಾವತಿಸಿರಬೇಕು.

7 / 8
ಅಂದರೆ ವಿಶೇಷವಾಗಿ, ಪೋಸ್ಟ್ ಪೋಯ್ಡ್ ಗ್ರಾಹಕರು, ತಿಂಗಳ ಬಿಲ್ ಮೊತ್ತ ಬಾಕಿ ಉಳಿಸಿಕೊಂಡಿದ್ದರೆ, ಅದನ್ನು ಟೆಲಿಕಾಂ ಸೇವಾದಾರ ಕಂಪನಿಗೆ ಪಾಲಿಸುವುದು ಕಡ್ಡಾಯ. ಬಾಕಿ ಉಳಿಸಿಕೊಂಡಿದ್ದರೆ, ಪೋರ್ಟಿಂಗ್ ಸಾಧ್ಯವಾಗುವುದಿಲ್ಲ.

8 / 8
ಯಾವುದೇ ನೆಟ್‌ವರ್ಕ್‌ಗೆ ಪೋರ್ಟ್ ಆಗಬೇಕಾದರೂ, ಪ್ರಸ್ತುತ ಇರುವ ನೆಟ್‌ವರ್ಕ್‌ನಲ್ಲಿ ಕನಿಷ್ಟ 90 ದಿನ ಪೂರೈಸಬೇಕು. ಅದಕ್ಕೂ ಮುಂಚೆ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಸಾಧ್ಯವಿಲ್ಲ. ಅಲ್ಲದೆ, ಸಿಮ್ ಕಾರ್ಡ್ ಹೊಂದಿರುವ ವ್ಯಕ್ತಿ ಮತ್ತೋರ್ವ ವ್ಯಕ್ತಿಗೆ ಮಾಲಿಕತ್ವ ಹಸ್ತಾಂತರಿಸುವ ಪ್ರಕ್ರಿಯೆ ಜಾರಿಯಲ್ಲಿದ್ದರೆ, ಅಂತಹ ಸಂದರ್ಭದಲ್ಲಿ ಎಂಎನ್‌ಪಿ ಸಾಧ್ಯವಾಗುವುದಿಲ್ಲ.