Tech Tips: ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿಗಳನ್ನು ಹೈಡ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್

|

Updated on: Jun 24, 2023 | 2:14 PM

ಇನ್​ಸ್ಟಾಗ್ರಾಮ್​ನಲ್ಲಿ ನೀವು ಅನೇಕ ಸ್ನೇಹಿತರನ್ನು ಒಳಗೊಂಡಿದ್ದರೆ ಇದರಲ್ಲಿ ಆಯ್ದ ಫಾಲೋವರ್ಸ್​ಗೆ ಮಾತ್ರ ಇನ್​ಸ್ಟಾಗ್ರಾಮ್​ ಸ್ಟೋರಿಗಳನ್ನು ಹಂಚಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಟ್ರಿಕ್.

1 / 7
ಪ್ರಸಿದ್ಧ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್ ಅನ್ನು ಇಂದು ಬಳಕೆ ಮಾಡುವವರ ಸಂಖ್ಯೆ ಕೋಟಿಗಟ್ಟಲೆ ಇದೆ. ಬಳಕೆದಾರರ ನೆಚ್ಚಿನ ವಿಡಿಯೋ ಶೇರಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿರುವ ಇನ್‌ಸ್ಟಾಗ್ರಾಮ್‌ ಬಳಕೆದಾರರ ಅನುಕೂಲಕ್ಕಾಗಿ ಹಲವು ಪ್ರೈವೆಸಿ ಆಯ್ಕೆಯನ್ನು ಕೂಡ ನೀಡಿದೆ.

2 / 7
ಇದರಲ್ಲಿ ಕೆಲವೇ ಜನರೊಂದಿಗೆ ಅಂದರೆ ನಿಮಗೆ ಇಷ್ಟವಿರುವ ಜನರೊಂದಿಗೆ ಮಾತ್ರ ನಿಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಗಳನ್ನು ಹಂಚಿಕೊಳ್ಳುವ ಆಯ್ಕೆ ಕೂಡ ಇದೆ.

3 / 7
ಹಾಗಾದರೆ, ಇನ್​ಸ್ಟಾಗ್ರಾಮ್​ನಲ್ಲಿ ನೀವು ಅನೇಕ ಸ್ನೇಹಿತರನ್ನು ಒಳಗೊಂಡಿದ್ದರೆ ಇದರಲ್ಲಿ ಆಯ್ದ ಫಾಲೋವರ್ಸ್​ಗೆ ಮಾತ್ರ ಇನ್​ಸ್ಟಾಗ್ರಾಮ್​ ಸ್ಟೋರಿಗಳನ್ನು ಹಂಚಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಟ್ರಿಕ್.

4 / 7
ಮೊದಲು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನದಲ್ಲಿ ಇನ್​ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ. ನಂತರ ಸ್ಕ್ರೀನ್​ನ ಕೆಳಗಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.

5 / 7
ಪ್ರೊಫೈಲ್ ಪುಟದಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಮೂರು ಅಡ್ಡ ಸಾಲುಗಳು ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕಾಣಿಸಿಕೊಳ್ಳುವ ಆಯ್ಕೆಗಳ ಪಟ್ಟಿಯಿಂದ, ನಿಕಟ ಸ್ನೇಹಿತರ ಮೇಲೆ ಟ್ಯಾಪ್ ಮಾಡಿ.

6 / 7
ಇಲ್ಲಿ ಕ್ಲೋಸ್ ಫ್ರೆಂಡ್ಸ್ ಪುಟದಲ್ಲಿ, ಆಪ್ತ ಸ್ನೇಹಿತರ ಲಿಸ್ಟ್​ನಲ್ಲಿ ನಿಮಗೆ ಬೇಕಾದ ಸ್ನೇಹಿತರನ್ನು ಮಾತ್ರ ಆಯ್ಕೆ ಮಾಡಿ. ಈಗ ನೀವು ಸ್ಟೋರಿ ಹಂಚಿಕೊಂಡರೆ ಆಯ್ದ ಬಳಕೆದಾರರಿಗೆ ಮಾತ್ರ ಕಾಣಿಸುತ್ತದೆ.

7 / 7
ಲಾಸ್ಟ್‌ ಸೀನ್‌ ನೋಡುವುದು ಹೇಗೆ?: ಮೊದಲು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನದಲ್ಲಿ ಇನ್​ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ. ನಂತರ ಮೇಲಿನ ಬಲ ಮೂಲೆಯಲ್ಲಿರುವ ಪೇಪರ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಇದು ಇನ್‌ಸ್ಟಾಗ್ರಾಮ್‌ನ ಡಿಎಂ ವಿಭಾಗವಾಗಿದ್ದು, ಇದರಲ್ಲಿ ನೀವು ಚಾಟ್‌ ಮಾಡಿದವರ ಲಾಸ್ಟ್‌ ಸೀನ್‌ ಅನ್ನು ನೋಡಬಹುದು.