Tech Tips: 5G ಬಳಸುವಾಗ ಡೇಟಾ ಬೇಗನೆ ಖಾಲಿ ಆಗುತ್ತಾ?: ಹಾಗಿದ್ರೆ ಈ ಟ್ರಿಕ್ ಟ್ರೈ ಮಾಡಿ

|

Updated on: Oct 24, 2023 | 6:55 AM

5G data Saver: ನೀವು 5G ನೆಟ್​ವರ್ಕ್ ಉಪಯೋಗಿಸುತ್ತೀರಿ ಎಂದಾದರೆ ಡೇಟಾ 4ಜಿಗಿಂತ ಅಧಿಕ ಬಳಕೆಯಾಗುತ್ತದೆ. 5ಜಿಯಲ್ಲಿ ಡೌನ್​ಲೋಡ್ ಸೇರಿದಂತೆ ಎಲ್ಲ ಕೆಲಸ ವೇಗವಾಗಿ ನಡೆಯುವುದರಿಂದ ಡೇಟಾ ಹೆಚ್ಚು ಖಾಲಿಯಾಗುತ್ತದೆ. ಇದರಲ್ಲಿ ಸಿನಿಮಾ, ಹಾಡುಗಳನ್ನು ನಿಮಿಷಗಳಲ್ಲಿ ಡೌನ್​ಲೋಡ್ ಮಾಡಬಹುದು.

1 / 7
ಭಾರತದಲ್ಲಿ 5G ಸೇವೆ ಆರಂಭವಾಗಿ ಕೆಲ ತಿಂಗಳುಗಳಾಗಿವೆ. ಜಿಯೋ ಮತ್ತು ಏರ್ಟೆಲ್ ಟೆಲಿಕಾಂ ಕಂಪನಿಗಳು ಹೆಚ್ಚಿನ ನಗರಗಳಲ್ಲಿ ತನ್ನ  ಬಳಕೆದಾರರಿಗೆ 5ಜಿ ಸೇವೆ ನೀಡುತ್ತಿದೆ. ಈ ಮೂಲಕ ಕೆಲವರು ಹೈ-ಸ್ಪೀಡ್ ಇಂಟರ್ನೆಟ್ ಅನುಭವವನ್ನು ಆನಂದಿಸುತ್ತಿದ್ದಾರೆ. ಹೈ-ಸ್ಪೀಡ್ ಇಂಟರ್ನೆಟ್ ಅಂದಮೇಲೆ ಅಲ್ಲಿ ಡೇಟಾ ಕೂಡ ನೀರಿನಂತೆ ಹರಿಯುತ್ತದೆ. ಹಾಗಾದರೆ 5ಜಿ ಸೇವೆಯಲ್ಲಿ ಡೇಟಾವನ್ನು ಸೇವ್ ಮಾಡುವುದು ಹೇಗೆ?.

2 / 7
ಏರ್ಟೆಲ್ 5G ಸದ್ಯ 3000ಕ್ಕೂ ಅಧಿಕ ನಗರಗಳಲ್ಲಿ ಲಭ್ಯವಿದೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಗುರುಗ್ರಾಮ್, ಗುವಾಹಟಿ, ಪಾಣಿಪತ್, ಪುಣೆ, ನಾಗ್ಪುರ ಮತ್ತು ವಾರಣಾಸಿ. ಜಿಯೋ 5G ಕೂಡ ಮುಂಬೈ, ದೆಹಲಿ, ಹೈದರಾಬಾದ್, ಚೆನ್ನೈ, ವಾರಣಾಸಿ, ಕೋಲ್ಕತ್ತಾ,  ಪುಣೆ, ಗುರುಗ್ರಾಮ್, ನೋಯ್ಡ, ಘಜಿಬಾದ್, ಬೆಂಗಳೂರು ಮತ್ತು ಫರಿಹಾಬಾದ್​ನಲ್ಲಿ ಲಭ್ಯವಿದೆ.

3 / 7
ಏರ್ಟೆಲ್ 5ಜಿ ಸೇವೆಯನ್ನು ಬಳಸಬೇಕಾದರೆ ನಿಮ್ಮ ಸ್ಮಾರ್ಟ್​ಫೋನ್​ ಅನ್ನು ಇತ್ತೀಚಿನ ಆವೃತ್ತಿಗೆ ಇನ್​​ಸ್ಟಾಲ್ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್​ಗೆ 5ಜಿ ಸಪೋರ್ಟ್ ಆಗುತ್ತದೆ ಎಂದಾದರೆ ಅಟೋಮೆಟಿಕ್ ಆಗಿ ಕನೆಕ್ಟ್ ಆಗುತ್ತದೆ. ಇತ್ತ ಜಿಯೋ ಬಳಕೆದಾರರಿಗಾಗಿ ಬೇಟಾ ವರ್ಷನ್​ನಲ್ಲಿ ಲಭ್ಯವಿದೆ. ನಿಮಗೆ ಜಿಯೋ ಕಂಪನಿಯಿಂದ 5ಜಿ ಕನೆಕ್ಷನ್ ಕುರಿತ ಲಿಂಕ್ ಬಂದರೆ ಉಪಯೋಗಿಸಬಹುದು.

4 / 7
5G ಸೇವೆಯನ್ನು ಪಡೆಯಲು ಇದುವರೆಗೆ ಏರ್ಟೆಲ್ ಅಥವಾ ಜಿಯೋ ಯಾವುದೇ ಹೊಸ ಪ್ಲಾನ್ ಪರಿಚಯಿಸಿಲ್ಲ. 4ಜಿ ಯೋಜನೆಯಲ್ಲಿ 5ಜಿ ಕೂಡ ಲಭ್ಯವಾಗುತ್ತಿದೆ. ಜಿಯೋ 239 ರೂ. ಪ್ಲಾನ್​ನಲ್ಲಿ 5ಜಿ ಸೇವೆಯನ್ನು ಪಡೆಯಬಹುದು.

5 / 7
ನೀವು 5G ನೆಟ್​ವರ್ಕ್ ಉಪಯೋಗಿಸುತ್ತೀರಿ ಎಂದಾದರೆ ಡೇಟಾ 4ಜಿಗಿಂತ ಅಧಿಕ ಬಳಕೆಯಾಗುತ್ತದೆ. 5ಜಿಯಲ್ಲಿ ಡೌನ್​ಲೋಡ್ ಸೇರಿದಂತೆ ಎಲ್ಲ ಕೆಲಸ ವೇಗವಾಗಿ ನಡೆಯುವುದರಿಂದ ಡೇಟಾ ಹೆಚ್ಚು ಖಾಲಿಯಾಗುತ್ತದೆ. ಇದರಲ್ಲಿ ಸಿನಿಮಾ, ಹಾಡುಗಳನ್ನು ನಿಮಿಷಗಳಲ್ಲಿ ಡೌನ್​ಲೋಡ್ ಮಾಡಬಹುದು. ಜೊತೆಗೆ ಡೇಟಾ ಕೂಡ ಅಷ್ಟೇ ವೇಗದಲ್ಲಿ ಮುಗಿದು ಹೋಗುತ್ತದೆ.

6 / 7
4ಜಿ ಹೋಲಿಕೆ ಮಾಡಿದರೆ 5ಜಿಯಲ್ಲಿ ಡೇಟಾ ಹೆಚ್ಚು ಖಾಲಿಯಾಗುತ್ತದೆ. ಆದರೆ, 5ಜೆಯಲ್ಲಿ ಡೇಟಾ ಸೇವ್ ಮಾಡಲು ಕೆಲ ಟ್ರಿಕ್​ಗಳಿವೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಡೇಟಾ ಸೇವರ್ ಆನ್ ಮಾಡಬೇಕು. ಹೀಗೆ ಮಾಡಿದಾಗ ನಿಗದಿ ಮಾಡಿದ್ದಕ್ಕಿಂತ ಅಧಿಕ ಡೇಟಾ ಖಾಲಿಯಾದರೆ ನಿಮಗೆ ಸೂಚನೆ ನೀಡುತ್ತದೆ.

7 / 7
2023 ಅಂತ್ಯದ ಹೊತ್ತಿಗೆ ಭಾರತದ ಎಲ್ಲ ಕಡೆಗಳಲ್ಲಿ 5ಜಿ ಸೇವೆಯನ್ನು ಗ್ರಾಹಕರು ಪಡೆಯಬಹುದು. ಏರ್ಟೆಲ್ ಹಾಗೂ ಜಿಯೋ ಈಗಾಗಲೇ ಈ ಕೆಲಸವನ್ನು ಆರಂಭಿಸಿದ್ದು, ವೊಡಾಫೋನ್ ಐಡಿಯಾ ಕೂಡ 5ಜಿ ಪರಿಚಯಿಸಲು ಮುಂದಾಗಿದೆ.