Pooja Hegde: ‘ನಾನು ಸಿಂಗಲ್​’; ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಪೂಜಾ ಹೆಗ್ಡೆ

Updated on: Apr 14, 2023 | 11:39 AM

ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾದಲ್ಲಿ ಇವರ ಕೆಮಿಸ್ಟ್ರಿ ಕೆಲಸ ಮಾಡುವ ಸೂಚನೆ ಸಿಕ್ಕಿದೆ.

1 / 5
ಸಲ್ಮಾನ್ ಖಾನ್ ಜೊತೆ ಸಾಕಷ್ಟು ನಟಿಯರು ಹೆಸರು ತಳುಕು ಹಾಕಿಕೊಂಡಿದೆ. ಅನೇಕ ಹೀರೋಯಿನ್​ಗಳ ಜೊತೆ ಅವರು ಡೇಟ್ ಮಾಡಿದ್ದಾರೆ. ಆದರೆ, ಯಾರ ಜೊತೆಯೂ ಅವರು ಮದುವೆ ಆಗಿಲ್ಲ. ಇದಕ್ಕೆ ಕಾರಣ ನಿಗೂಢ. ಈಗ ಪೂಜಾ ಹೆಗ್ಡೆ ಸರದಿ.

ಸಲ್ಮಾನ್ ಖಾನ್ ಜೊತೆ ಸಾಕಷ್ಟು ನಟಿಯರು ಹೆಸರು ತಳುಕು ಹಾಕಿಕೊಂಡಿದೆ. ಅನೇಕ ಹೀರೋಯಿನ್​ಗಳ ಜೊತೆ ಅವರು ಡೇಟ್ ಮಾಡಿದ್ದಾರೆ. ಆದರೆ, ಯಾರ ಜೊತೆಯೂ ಅವರು ಮದುವೆ ಆಗಿಲ್ಲ. ಇದಕ್ಕೆ ಕಾರಣ ನಿಗೂಢ. ಈಗ ಪೂಜಾ ಹೆಗ್ಡೆ ಸರದಿ.

2 / 5

ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾದಲ್ಲಿ ಇವರ ಕೆಮಿಸ್ಟ್ರಿ ಕೆಲಸ ಮಾಡುವ ಸೂಚನೆ ಸಿಕ್ಕಿದೆ.

3 / 5

ಈ ಮಧ್ಯೆ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಪೂಜಾ ಹೆಗ್ಡೆ ಸಹೋದರನ ಮದುವೆಯಲ್ಲಿ ಭಾಗಿ ಆಗಿದ್ದರು. ಇದು ಸಾಕಷ್ಟು ಅನುಮಾನ ಹುಟ್ಟುಹಾಕಿತ್ತು.

4 / 5

ಆದರೆ, ಈ ವಿಚಾರವನ್ನು ಪೂಜಾ ಹೆಗ್ಡೆ ತಳ್ಳಿ ಹಾಕಿದ್ದಾರೆ. ‘ನಾನು ಸಿಂಗಲ್. ನನ್ನ ಕರಿಯರ್ ಮೇಲೆ ಸಂಪೂರ್ಣ ಗಮನ ಹರಿಸುತ್ತಿದ್ದೇನೆ’ ಎಂದಿದ್ದಾರೆ ಪೂಜಾ.

5 / 5

ಪೂಜಾ ಹೆಗ್ಡೆ ಸಾಲು ಸಾಲು ಸೋಲು ಕಂಡಿದ್ದಾರೆ. ಹೀಗಾಗಿ ಅವರಿಗೆ ಒಂದು ಗೆಲುವಿನ ಅವಶ್ಯಕತೆ ಇದೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us