
ಕ್ರಿಕೆಟ್ನಲ್ಲಿ ಒಂದೊಂದೇ ಯಶಸ್ವಿ ಮೆಟ್ಟಿಲೇರುತ್ತಿರುವ ರಿಷಬ್ ಪಂತ್ ವೈಯಕ್ತಿಕ ಜೀವನದ ಬಗ್ಗೆಯೂ ಅಭಿಮಾನಿಗಳಿಗೆ ತುಂಬ ಕುತೂಹಲ ಇದೆ. ರಿಷಬ್ ಇಶಾ ನೇಗಿಯವರನ್ನು ಪ್ರೀತಿಸುತ್ತಿರುವ ವಿಷಯ ಈಗಾಗಲೇ ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರು ಹಲವು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. ಈ ಜೋಡಿ ತಮ್ಮ ಪ್ರೀತಿಯನ್ನು ಮೊದಲು ತಿಳಿಸಿದ್ದು 2019ರಲ್ಲಿ. ಇಶಾ ತಮ್ಮ ಪಾಲಿಗೆ ವಿಶೇಷ ವ್ಯಕ್ತಿ ಎಂಬುದನ್ನು ಪಂತ್ ಈಗಾಗಲೇ ಹೇಳಿಕೊಂಡಿದ್ದಾರೆ.

ಮೊಟ್ಟ ಮೊದಲಿಗೆ 2019ರ ಜನವರಿ 16ರಂದು ರಿಷಬ್ ಪಂತ್ ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ನಾನು ಸಂತೋಷವಾಗಿರಲು ಕಾರಣಳಾದ ನಿನ್ನನ್ನು ಸದಾ ಸಂತೋಷವಾಗಿ ಇಡಬೇಕು ಎಂಬುದು ನನ್ನ ಇಚ್ಛೆ ಎಂದು ಕ್ಯಾಪ್ಷನ್ ಬರೆದಿದ್ದರು. ಹಾಗೇ, ಇಶಾ ನೇಗಿ ಕೂಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಇದೇ ಫೋಟೋ ಶೇರ್ ಮಾಡಿಕೊಂಡು, ನೀನು ನನ್ನ ಹುಡುಗ, ನನ್ನ ಸೌಲ್ಮೇಟ್, ನನ್ನ ಬೆಸ್ಟ್ ಫ್ರೆಂಡ್, ನನ್ನ ಜೀವನದ ಪ್ರೀತಿ ಎಂದು ಬರೆದುಕೊಂಡಿದ್ದರು. ಈ ಮೂಲಕ ತಾವಿಬ್ಬರೂ ಪ್ರೀತಿಸುತ್ತಿರುವುದನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದರು.

ಇಶಾ ನೇಗಿ ಉದ್ಯಮಿ..ಇಂಟೀರಿಯರ್ ಡಿಸೈನರ್ ಕೂಡ ಹೌದು. ಮೂಲತಃ ಉತ್ತರಾಖಂಡದ ಡೆಹ್ರಾಡೂನ್ನವರು. ಇವರ ಕುಟುಂಬ ಉದ್ಯಮ ನಡೆಸುತ್ತಿದೆ. ಪ್ರಾಥಮಿಕ ಶಿಕ್ಷಣವನ್ನು ಡೆಹ್ರಾಡೂನ್ನ ಜೀಸಸ್ ಮತ್ತು ಮೇರಿ ಕಾನ್ವೆಂಟ್ನಲ್ಲಿ ಪಡೆದಿದ್ದಾರೆ. ಅದಾದ ನಂತರ ದೆಹಲಿಯ ಅಮೈಟಿ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪಂತ್ ಜತೆಗೆ ನಾನು ಡೇಟಿಂಗ್ ಮಾಡುತ್ತಿರುವ ವಿಷಯ ಬಹಿರಂಗ ಆಗುತ್ತಿದ್ದಂತೆ ನನ್ನನ್ನು ತುಂಬ ಜನ ಅವರಾಗೇ ಬಂದು ಮಾತಾಡಿಸುತ್ತಿದ್ದರು. ಕಾಲೇಜಿನಲ್ಲಿ ಕೂಡ ನನ್ನ ತರಗತಿಯನ್ನು ಹುಡುಕಿಕೊಂಡು ಬರುತ್ತಿದ್ದರು ಎಂದು ಇಶಾ ಹೇಳಿಕೊಂಡಿದ್ದಾರೆ.

ಇಶಾ ನೇಗಿ ತಾನು ಹೈಡ್ರೋಫೋಬಿಕ್ ಎಂದು ಹೇಳಿಕೊಂಡಿದ್ದಾರೆ. ಸ್ವಿಮ್ಮಿಂಗ್ ಫೂಲ್ ಬಳಿ ನಿಂತ ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ವೇಳೆ, ನನಗೆ ನೀರೆಂದರೆ ಭಯ. ಆದರೂ ಹೀಗೆ ಸ್ವಿಮ್ಮಿಂಗ್ ಫೂಲ್ ಬಳಿ ನಿಂತು ಫೋಟೋ ತೆಗೆಸಿಕೊಳ್ಳಲು ಇಷ್ಟ ಎಂದು ಹೇಳಿಕೊಂಡಿದ್ದಾರೆ. ಇವರಿಬ್ಬರೂ ರಿಲೇಶನ್ ಶಿಪ್ನಲ್ಲಿ ಇರುವುದು ಗೊತ್ತಾದ ಬಳಿಕ ಅಭಿಮಾನಿಗಳು ಇವರಿಬ್ಬರ ಲವ್ ಲೈಫ್ ಬಗ್ಗೆಯೂ ಇಂಟರೆಸ್ಟ್ ತೋರಿಸುತ್ತಿದ್ದಾರೆ.

ಇಶಾ ನೇಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತುಂಬ ಹಾಟ್, ಮಾಡರ್ನ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಇಶಾ ನೇಗಿಯವರು 2020ರ ಲಾಕ್ಡೌನ್ ವೇಳೆ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಒಳ್ಳೆಯ ನೆನಪುಗಳು ಎಂದಿಗೂ ಮಾಸುವುದಿಲ್ಲ ಎಂದು ಹೇಳಿದ್ದಲ್ಲದೆ, ಲಾಕ್ಡೌನ್ ಕಾರಣದಿಂದ ಇವರನ್ನೆಲ್ಲ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದರು.
Published On - 3:56 pm, Thu, 1 April 21