ಐಪಿಎಲ್ ಟ್ರೋಪಿ
ಪ್ರಸಿದ್ಧ ದೆಹಲಿ ಕ್ಯಾಪಿಟಲ್ಸ್ ಬೌಲರ್ ಆರ್ ಅಶ್ವಿನ್ ಕೂಡ ಐಪಿಎಲ್ ತೊರೆಯಲು ನಿರ್ಧರಿಸಿದ್ದಾರೆ. 'ನಾನು ನಾಳೆಯಿಂದ ಐಪಿಎಲ್ನಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ' ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ. ನನ್ನ ಕುಟುಂಬ ಕೋವಿಡ್ -19 ವಿರುದ್ಧ ಹೋರಾಡುತ್ತಿದೆ ಮತ್ತು ಈ ಕಷ್ಟದ ಸಮಯದಲ್ಲಿ ನಾನು ಅವರನ್ನು ಬೆಂಬಲಿಸಲು ಬಯಸುತ್ತೇನೆ. ಸಂದರ್ಭಗಳು ಸರಿಯಾಗಿದ್ದರೆ, ನಾನು ಐಪಿಎಲ್‌ಗೆ ಮರಳಲು ಆಶಿಸುತ್ತೇನೆ ಎಂದಿದ್ದಾರೆ.
* ಬೆನ್ ಸ್ಟೋಕ್ಸ್ (ರಾಜಸ್ಥಾನ್ ರಾಯಲ್ಸ್)
* ಆ್ಯಡಂ ಝಂಪಾ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
* ಕೇನ್ ರಿಚರ್ಡ್ಸನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಬಯೋ ಬಬಲ್‌ನಲ್ಲಿ ಸುರಕ್ಷಿತ ವಾತಾವರಣದಲ್ಲಿ ವಾಸಿಸುವುದು ತೀರ ಕಷ್ಟವೆಂದು ರಾಜಸ್ಥಾನ್ ರಾಯಲ್ಸ್‌ನ ಇಂಗ್ಲೆಂಡ್ ಕ್ರಿಕೆಟಿಗ ಲಿಯಾಮ್ ಲಿವಿಂಗ್‌ಸ್ಟೋನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿದರು. ರಾಯಲ್ಸ್ ತಂಡ ಮಂಗಳವಾರ ಇದನ್ನು ಪ್ರಕಟಿಸಿದೆ.
ವೈಯಕ್ತಿಕ ಕಾರಣಗಳಿಗಾಗಿ ಆಂಡ್ರ್ಯೂ ಟೈ ಆಸ್ಟ್ರೇಲಿಯಾಕ್ಕೆ ಹಿಂದಿರುಗುತ್ತಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ಭಾನುವಾರ ಪ್ರಕಟಿಸಿದೆ. ದೋಹಾದಿಂದ ಸೇನ್ ರೇಡಿಯೊ ಜೊತೆ ಮಾತನಾಡುತ್ತಾ, 34 ವರ್ಷದ ಆಂಡ್ರ್ಯೂ ಟೈ ಐಪಿಎಲ್ ಮಿಡ್ವೇ ತೊರೆಯಲು ಕಾರಣವನ್ನು ವಿವರಿಸಿದರು. ಆಂಡ್ರ್ಯೂ ಟೈ ಅವರು ಮನೆಗೆ ಮರಳಲು ಹಲವು ಕಾರಣಗಳಿವೆ ಎಂದು ಒಪ್ಪಿಕೊಂಡರೆ, ಮುಖ್ಯ ಕಾರಣ ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವುದು.