
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್-2022 ರ ಅಪೇಕ್ಷಿತ ಆರಂಭವನ್ನು ಮಾಡಲು ಸಾಧ್ಯವಾಗಲಿಲ್ಲ. ಮಂಗಳವಾರ ಪುಣೆ-ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 61 ರನ್‌ಗಳಿಂದ ಸೋಲನುಭವಿಸಿತು. ರಾಜಸ್ಥಾನ್ 211 ರನ್ಗಳ ಗುರಿ ನೀಡಿತ್ತು.

ರಾಜಸ್ಥಾನ್ ನೀಡಿದ 211 ರನ್ಗಳ ಗುರಿಯನ್ನು ಬೆಂಬತ್ತಿದ ಸನ್ರೈಸರ್ಸ್ಗೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. ಪವರ್‌ಪ್ಲೇಯಲ್ಲಿ ಕೇವಲ 14 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಪವರ್‌ಪ್ಲೇನಲ್ಲಿ ಗಳಿಸಿದ ಕಡಿಮೆ ಸ್ಕೋರ್ ಆಗಿ ದಾಖಲಾಯಿತು.

ಈ ಮೊದಲು ಈ ದಾಖಲೆ ರಾಜಸ್ಥಾನದ ಹೆಸರಿನಲ್ಲಿತ್ತು. 2009 ರಲ್ಲಿ ಕೇಪ್ ಟೌನ್‌ನಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪವರ್‌ಪ್ಲೇಯ ಮೊದಲ ಆರು ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ಕೇವಲ 14 ರನ್ ಗಳಿಸಿತ್ತು.

ಮೂರನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದ್ದು, 2011 ರಲ್ಲಿ ಕೋಲ್ಕತ್ತಾದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪವರ್‌ಪ್ಲೇನಲ್ಲಿ ಎರಡು ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿತ್ತು.

ನಾಲ್ಕು ಮತ್ತು ಐದನೇ ಸ್ಥಾನದಲ್ಲಿಯೂ ಚೆನ್ನೈ ತಂಡವೇ ಇದೆ. 2015ರಲ್ಲಿ ರಾಯ್‌ಪುರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪವರ್‌ಪ್ಲೇಯಲ್ಲಿ ಚೆನ್ನೈ ಒಂದು ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿತ್ತು. 2019 ರಲ್ಲಿ ಸಿಎಸ್ಕೆ ಬೆಂಗಳೂರು ವಿರುದ್ಧ ಪವರ್‌ಪ್ಲೇನಲ್ಲಿ ಮತ್ತೆ ಇಷ್ಟೇ ಸ್ಕೋರ್ ಗಳಿಸಿತ್ತು.