Updated on: Mar 30, 2022 | 12:36 PM
ದಿನಕ್ಕೆ ಕನಿಷ್ಠ 3ರಿಂದ 4 ಲೀಟರ್ ನೀರು ಕುಡಿಯಬೇಕು ಅಂತ ವೈದ್ಯರು ಸಲಹೆ ನೀಡುತ್ತಾರೆ. ಅದರಲ್ಲೂ ಬೇಸಿಗೆ ಹೊತ್ತಿಗೆ ನೀರು ಹೆಚ್ಚಾಗಿ ಕುಡಿಯಬೇಕು.
ಬಿರು ಬೇಸಿಗೆಯಲ್ಲಿ ಮೊಸರು ಸೇವಿಸಬೇಕು. ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಹೆಚ್ಚು ಪೌಷ್ಟಿಕಾಂಶ ಇದೆ. ಕೆಲ ಆರೋಗ್ಯ ಸಮಸ್ಯೆಗಳನ್ನ ನಿವಾರಿಸುತ್ತದೆ.
ಎಳನೀರು ಕುಡಿದಾಗ ಒಂಥರಾ ಖುಷಿ. ದೇಹವನ್ನು ತಂಪಾಗಿಸುವ ಎಳನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ರಕ್ತ ಸಂಚನವನ್ನು ಸಮತೋಲನದಲ್ಲಿ ಇಡುತ್ತದೆ.
ಬಾಯಾರಿಕೆ ಎಂದಾಗ ತಕ್ಷಣ ನೆನಪಾಗುವುದು ಕಲ್ಲಂಗಡಿ. ಕಲ್ಲಂಗಡಿ ಹಣ್ಣು ಸೇವಿಸಿ. ಇದರಲ್ಲಿ ಹೆಚ್ಚು ನೀರಿನಾಂಶ ಇರುವುದರಿಂದ ಬೇಸಿಗೆಯಲ್ಲಿ ದೇಹಕ್ಕೆ ಒಳ್ಳೆಯದು.
ಮೆಣಸಿನಕಾಯಿ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಬೇಸಿಗೆಯಲ್ಲಿ ಮೆಣಸಿನಕಾಯಿ ಸೇವಿಸಿ. ರಕ್ತಸಂಚಲನ ಚೆನ್ನಾಗಿ ಆಗುತ್ತದೆ. ಬೆವರಲು ಇದು ಸಹಕಾರಿಯಾಗಿದ್ದರಿಂದ ದೇಹ ತಂಪಾಗುತ್ತದೆ.