ಜಾತ್ರೆ ಅಂದರೆ ತೇರು, ಮೆರವಣಿಗೆ ಅಷ್ಟೇ ಅಲ್ಲ! ಕಾರವಾರದಲ್ಲಿ ನಡೆಯಿತು ರಂಗುರಂಗಿನ ರಂಗೋಲಿ ಜಾತ್ರೆ! ಒಮ್ಮೆ ನೀವೂ ಕಣ್ಣಾಡಿಸಿ

Edited By: ಸಾಧು ಶ್ರೀನಾಥ್​

Updated on: Dec 23, 2022 | 1:48 PM

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾರುತಿ ಗಲ್ಲಿಯಲ್ಲಿ ನಡೆಯುವ ಮಾರುತಿ ದೇವರ ಜಾತ್ರೆ ತನ್ನದೇ ಆದ ವಿಶೇಷತೆಗಳಿಂದ ಪ್ರಸಿದ್ಧಿ ಪಡೆದಿದೆ. ಜಾತ್ರೆ ಎಂದಾಕ್ಷಣ ತೇರು ಎಳೆಯುವುದು, ಮೆರವಣಿಗೆ ಎಲ್ಲಾ ಇರುತ್ತೆ ಆದ್ರೆ ಈ ಜಾತ್ರೆ ರಂಗೋಲಿ ಮೂಲಕವೇ ಪ್ರಸಿದ್ಧಿ ಪಡೆದಿದ್ದು ತರಹೇವಾರು ರಂಗೂಲಿ ಬಣ್ಣಗಳಿಂದ ಜನರನ್ನ ತನ್ನತ್ತ ಸೆಳೆಯುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ...

1 / 26
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾರುತಿ ಗಲ್ಲಿಯಲ್ಲಿ ನಡೆಯುವ ಮಾರುತಿ ದೇವರ ಜಾತ್ರೆ ತನ್ನದೇ ಆದ ವಿಶೇಷತೆಗಳಿಂದ ಪ್ರಸಿದ್ಧಿ ಪಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾರುತಿ ಗಲ್ಲಿಯಲ್ಲಿ ನಡೆಯುವ ಮಾರುತಿ ದೇವರ ಜಾತ್ರೆ ತನ್ನದೇ ಆದ ವಿಶೇಷತೆಗಳಿಂದ ಪ್ರಸಿದ್ಧಿ ಪಡೆದಿದೆ.

2 / 26

ಜಾತ್ರೆ ಎಂದಾಕ್ಷಣ ತೇರು ಎಳೆಯುವುದು, ಮೆರವಣಿಗೆ ಎಲ್ಲಾ ಇರುತ್ತೆ ಆದ್ರೆ ಈ ಜಾತ್ರೆ ರಂಗೋಲಿ ಮೂಲಕವೇ ಪ್ರಸಿದ್ಧಿ ಪಡೆದಿದ್ದು ತರಹೇವಾರು ರಂಗೂಲಿ ಬಣ್ಣಗಳಿಂದ ಜನರನ್ನ ತನ್ನತ್ತ ಸೆಳೆಯುತ್ತಿದೆ.

3 / 26

ಕಾರವಾರದಲ್ಲೊಂದು ಅಪರೂಪದ ರಂಗೋಲಿ ಜಾತ್ರೆ.

4 / 26

ರಂಗೋಲಿ ಮೂಲಕವೇ ವಿಶಿಷ್ಟವಾಗಿ ಆಚರಣೆ ಮಾಡುವ ಮಾರುತಿ ದೇವರ ರಂಗೋಲಿ ಜಾತ್ರೆ ರಂಗೋಲಿ ಮೂಲಕವೇ ಜನರನ್ನ ತನ್ನತ್ತ ಸೆಳೆಯುತಿದ್ದು ನೋಡುಗರನ್ನ ಮಂತ್ರ ಮುಗ್ದರನ್ನಾಗಿಸುತ್ತಿದೆ

5 / 26

ರಂಗೋಲಿ ಎಂದರೇ ಮಹಿಳೆಯರಿಗೆ ಪಂಚಪ್ರಾಣ. ಆದ್ರೆ ಕಾರವಾರದಲ್ಲಿರುವ ಮಾರುತಿ ದೇವರಿಗೆ ರಂಗೋಲಿಯೇ ಪ್ರಿಯ.

6 / 26

ರಂಗೋಲಿಯಲ್ಲಿ ಅರಳಿದ ವಿವಿಧ ಚಿತ್ತಾರಗಳು. ಮತ್ತೊಂದೆಡೆ ರಂಗೋಲಿಯಲ್ಲಿ ಅರಳಿದ ಚಿತ್ತಾರವನ್ನು ತಮ್ಮ ಮೊಬೈಲ್ ಮೂಲಕ ಸೆರೆಹಿಡಿಯುತ್ತಿರುವ ಜನರು.

7 / 26

ಪ್ರತಿ ವರ್ಷ ಡಿಸೆಂಬರ್ ನಲ್ಲಿ ಕಾರವಾರ ನಗರದ ಮಾರುತಿ ದೇವರ ಜಾತ್ರೆ ನಡೆಯುತ್ತದೆ.

8 / 26

ಪುಷ್ಪಾ ಸಿನಿಮಾದ ಅಲ್ಲು ಅರ್ಜುನ್ ರಂಗೋಲಿ

9 / 26

ಎಲ್ಲಾ ಜಾತ್ರೆಗಳು ಬೆಳಗ್ಗೆ ಪ್ರಾರಂಭವಾದ್ರೆ ಈ ಜಾತ್ರೆ ಸೂರ್ಯಾಸ್ತದ ನಂತರ ಪ್ರಾರಂಭವಾಗುತ್ತದೆ.

10 / 26

ರಂಗೋಲಿಯಲ್ಲಿ ಅರಳಿದ ಪುನೀತ್ ರಾಜ್ ಕುಮಾರ್, ಕಾಂತಾರ ಸಿನಿಮಾ ದೃಶ್ಯಗಳು.

11 / 26

ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ​

12 / 26

ಈ ಬಾರಿ ಕಾಂತಾರ ಸಿನಿಮಾದ ದೃಶ್ಯಗಳು, ಪುನಿತ್ ರಾಜ್ ಕುಮಾರ್ ಭಾವಚಿತ್ರಗಳು, ರಾಷ್ಟ್ರಪತಿ ದ್ರೌಪದಿ ಮುರ್ಮು ಚಿತ್ರಗಳು ಜನರನ್ನು ನಿಬ್ಬೆರಗುಗೊಳಿಸಿತು.

13 / 26

ಇಡೀ ಗಲ್ಲಿಯೇ ರಂಗೋಲಿಯಿಂದ ಅಲಂಕೃತ.

14 / 26

ದೇವರ ಉತ್ಸವ ಮೂರ್ತಿ ಮೆರವಣಿಗೆ ಹೋಗುವ ಸಂದರ್ಭದಲ್ಲಿ ಸ್ವಾಗತಕ್ಕಾಗಿ ರಂಗೋಲಿ ಹಾಕುವ ಈ ಪರಂಪರೆ 80 ವರ್ಷಕ್ಕೂ ಹೆಚ್ಚು ಹಳೆಯದು.

15 / 26

ರಂಗೋಲಿ ಮೂಲಕವೇ ವಿಶಿಷ್ಟವಾಗಿ ಆಚರಣೆ ಮಾಡುವ ಮಾರುತಿ ದೇವರ ರಂಗೋಲಿ ಜಾತ್ರೆ ರಂಗೋಲಿ ಮೂಲಕವೇ ಜನರನ್ನ ತನ್ನತ್ತ ಸೆಳೆಯುತಿದ್ದು ನೋಡುಗರನ್ನ ಮಂತ್ರ ಮುಗ್ದರನ್ನಾಗಿಸುತ್ತಿದೆ (ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ)

16 / 26

ಇದೀಗ ಕಾಲ ಬದಲಾದಂತೆ ರಂಗೋಲಿಯ ಚಿತ್ತಾರದ ಸೊಬಗೂ ಬದಲಾಗಿದ್ದು ರಂಗೋಲಿ ಮೂಲಕ ತಮಗೆ ಇಷ್ಟವಾದ ನಟರು, ಕಲಾವಿದರು, ರಾಜಕಾರಿಣಿಗಳ ಭಾವಚಿತ್ರಗಳು ರಂಗೋಲಿ ಮೂಲಕ ಜೀವ ಕಳೆ ಕಟ್ಟುತ್ತಿದೆ.

17 / 26

ಮಹಿಳೆಯರು, ಪುರುಷರೆನ್ನದೇ ಈ ರಂಗೋಲಿ ಜಾತ್ರೆಗೆ ಸೆಳೆಯುತ್ತಿದೆ.

18 / 26

ಎರಡು ದಿನ ನಡೆಯುವ ಈ ಜಾತ್ರೆಗೆ ಕೇವಲ ಕಾರವಾರದ ಜನರು ಮಾತ್ರವಲ್ಲದೇ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಸಹ ರಂಗೋಲಿ ಚಿತ್ರ ವೀಕ್ಷಣೆಗೆ ಜನ ಮುಗಿಬಿದ್ದಿದ್ದರು.

19 / 26

ಮಾರುತಿ ದೇವರ ಜಾತ್ರೆ ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧಿ.

20 / 26

ಈ ಜಾತ್ರೆಯಲ್ಲಿ ಸುಮಾರು 400ಕ್ಕೂ ಹೆಚ್ಚು ವಿವಿಧ ರಂಗೋಲಿ ಚಿತ್ರಗಳು ಮಾರುತಿ ಗಲ್ಲಿಯ ರಸ್ತೆಯನ್ನು ಅಲಂಕರಿಸಿದ್ದವು.

21 / 26

ರಂಗೋಲಿಯಲ್ಲಿ ಅರಳಿದ ಪುನೀತ್ ರಾಜ್ ಕುಮಾರ್, ಕಾಂತಾರ ಸಿನಿಮಾ ದೃಶ್ಯಗಳು.

22 / 26

ರಂಗೋಲಿಯಲ್ಲಿ ಅರಳಿದ ಪುನೀತ್ ರಾಜ್ ಕುಮಾರ್, ಕಾಂತಾರ ಸಿನಿಮಾ ದೃಶ್ಯಗಳು.

23 / 26

ಅಪ್ಪು, ರಿಷಬ್, ದ್ರೌಪದಿ ಮುರ್ಮು ಅವರನ್ನ ನೋಡಲು ಮುಗಿಬಿದ್ದ ಜನರು.

24 / 26

ಅಪ್ಪು, ರಿಷಬ್, ದ್ರೌಪದಿ ಮುರ್ಮು ಅವರನ್ನ ನೋಡಲು ಮುಗಿಬಿದ್ದ ಜನರು.

25 / 26

ಕೇವಲ ರಂಗೋಲಿಯಲ್ಲಲ್ಲದೇ ತರಕಾರಿ, ಹೂವು, ಹಣ್ಣು ಹೀಗೆ ಹಲವು ವಸ್ತುಗಳಿಂದಲೂ ಸಹ ರಂಗೋಲಿ ಮೂಡಿಬಂದಿತ್ತು.

26 / 26

ಸ್ಥಳೀಯರಷ್ಟೇ ಅಲ್ಲ; ಗೋವಾ, ಮಹಾರಾಷ್ಟ್ರದ ರಂಗೋಲಿ ಕಲಾವಿದರು ರಂಗೋಲಿಗೆ ಜೀವ ತುಂಬಿದ್ದಾರೆ.

Published On - 1:48 pm, Fri, 23 December 22

Loading...
Unable to load recommendations.
Follow Us