
ಕವಿತಾ ಗೌಡ ಅವರು ಪ್ರೇಗ್ನೆಂಟ್. ಈ ಖುಷಿ ಸುದ್ದಿಯನ್ನು ಕೆಲ ತಿಂಗಳ ಹಿಂದೆ ಅವರು ರಿವೀಲ್ ಮಾಡಿದ್ದರು. ಈಗ ಕವಿತಾ ಗೌಡ ಅವರು ಬೇಬಿ ಬಂಪ್ ಫೋಟೋ ತೋರಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕವಿತಾ ಗೌಡ ಅವರ ಪತಿ ಚಂದನ್ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕವಿತಾ ಅವರ ಬೇಬಿ ಬಂಪ್ ಗಮನ ಸೆಳೆದಿದೆ. ಅವರಿಗೆ ಶೀಘ್ರವೇ ಮಗು ಜನಿಸಲಿದೆ.

ಕವಿತಾ ಗೌಡ ಅವರು ಕಿರುತೆರೆ ಮೂಲಕ ಗಮನ ಸೆಳೆದವರು. ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತು. ಬಿಗ್ ಬಾಸ್ಗೂ ಅವರು ಕಾಲಿಟ್ಟಿದ್ದರು. ಚಂದನ್ ಅವರನ್ನು ಪ್ರೀತಿಸಿ ಮದುವೆ ಆದರು.

ಚಂದನ್ ಹಾಗೂ ಕವಿತಾ ಗೌಡ ಕೊವಿಡ್ ಸಂದರ್ಭದಲ್ಲಿ ಮದುವೆ ಆಗಿದ್ದಾರೆ. ಸಿಂಪಲ್ ಆಗಿ ಅವರು ವಿವಾಹ ಆಗಿದ್ದಾರೆ. ಅವರು ಪತ್ನಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಚಂದನ್ ಹಾಗೂ ಕವಿತಾ ಹೋಟೆಲ್ ಉದ್ಯಮವನ್ನು ಹೊಂದಿದ್ದಾರೆ. ಈ ಮೂಲಕ ಅವರು ಹಣ ಗಳಿಕೆ ಮಾಡುತ್ತಾ ಇದ್ದಾರೆ.