ಮೋದಿ ಅವರನ್ನು ಭೇಟಿ ಮಾಡಲಿರುವ ಮೆಸ್ಸಿ; ಭಾರತ ಪ್ರವಾಸದ ಪೂರ್ಣ ವಿವರ ಇಲ್ಲಿದೆ

Updated on: Aug 15, 2025 | 7:03 PM

Lionel Messi India Visit: ಲಿಯೋನೆಲ್ ಮೆಸ್ಸಿ ಅವರ ಭಾರತ ಪ್ರವಾಸಕ್ಕೆ ಅಂತಿಮ ಅನುಮೋದನೆ ದೊರೆತಿದೆ. ಡಿಸೆಂಬರ್ 12, 2025 ರಿಂದ ಪ್ರಾರಂಭವಾಗುವ ಈ ಮೂರು ದಿನಗಳ ಪ್ರವಾಸದಲ್ಲಿ, ಮೆಸ್ಸಿ ಕೋಲ್ಕತ್ತಾ, ಅಹಮದಾಬಾದ್, ಮುಂಬೈ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ. ಅವರು 'ಗೋಟ್ ಕಪ್' ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ ಮತ್ತು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದಾರೆ. ಪ್ರಧಾನಿ ಮೋದಿಯವರೊಂದಿಗಿನ ಸಭೆ ಈ ಪ್ರವಾಸದ ಹೈಲೈಟ್ ಆಗಿರುತ್ತದೆ. ಈ ಪ್ರವಾಸವು ಭಾರತೀಯ ಯುವಕರಿಗೆ ಸ್ಫೂರ್ತಿಯನ್ನು ನೀಡುವ ನಿರೀಕ್ಷೆಯಿದೆ.

1 / 8
ಅರ್ಜೆಂಟೀನಾದ ಫುಟ್ಬಾಲ್ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಅವರ ಭಾರತ ಪ್ರವಾಸಕ್ಕೆ ಅಂತಿಮ ಅನುಮೋದನೆ ದೊರೆತಿದ್ದು, ಮೂರು ದಿನಗಳ ಪ್ರವಾಸ ಡಿಸೆಂಬರ್ 12, 2025 ರಂದು ಕೋಲ್ಕತ್ತಾದಿಂದ ಪ್ರಾರಂಭವಾಗಲಿದೆ. ಮೆಸ್ಸಿ ಅವರ ಪ್ರವಾಸಕ್ಕೆ 'ಗೋಟ್ ಟೂರ್ ಆಫ್ ಇಂಡಿಯಾ 2025' ಎಂದು ಹೆಸರಿಡಲಾಗಿದೆ. ಈ ಪ್ರವಾದಲ್ಲಿ ಅವರು ಕೋಲ್ಕತ್ತಾ ನಂತರ ಅಹಮದಾಬಾದ್, ಮುಂಬೈ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ.

2 / 8
2011 ರ ನಂತರ ಲಿಯೋನೆಲ್ ಮೆಸ್ಸಿ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಕೊನೆಯ ಬಾರಿ ಅವರು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ವಿರುದ್ಧ ಸೌಹಾರ್ದ ಪಂದ್ಯವನ್ನು ಆಡಿದ್ದರು. ಈ ಬಾರಿ ಅವರ ಉದ್ದೇಶ ಫುಟ್ಬಾಲ್ ಅಭಿಮಾನಿಗಳನ್ನು ಭೇಟಿ ಮಾಡುವುದು ಮಾತ್ರವಲ್ಲದೆ ಭಾರತೀಯ ಯುವಕರಿಗೆ ಸ್ಫೂರ್ತಿ ನೀಡುವುದು.

3 / 8
ಡಿಸೆಂಬರ್ 15 ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಭೆಯೊಂದಿಗೆ ಮೆಸ್ಸಿಯ ಪ್ರವಾಸ ಕೊನೆಗೊಳ್ಳಲಿದ್ದು, ಇದು ಈ ಪ್ರವಾಸದ ಅತಿದೊಡ್ಡ ಕ್ಷಣವಾಗಿರುತ್ತದೆ. ಆಗಸ್ಟ್ 28 ಮತ್ತು ಸೆಪ್ಟೆಂಬರ್ 1 ರ ನಡುವೆ ಮೆಸ್ಸಿ ತಮ್ಮ ಅಧಿಕೃತ ಪೋಸ್ಟರ್ ಮತ್ತು ಪ್ರವಾಸದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಿದ್ದಾರೆ.

4 / 8
ಮೆಸ್ಸಿ ಡಿಸೆಂಬರ್ 12 ರ ರಾತ್ರಿ ಕೋಲ್ಕತ್ತಾಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 13 ರಂದು ಮೀಟ್ ಅಂಡ್ ಗ್ರೀಟ್ ಕಾರ್ಯಕ್ರಮದೌ ಭಾಗಿಯಾಗಲಿದ್ದಾರೆ. ಅಲ್ಲದೆ ಅದೇ ದಿನ ಈಡನ್ ಗಾರ್ಡನ್ಸ್ ಅಥವಾ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವ 'ಗೋಟ್ ಕನ್ಸರ್ಟ್' ಮತ್ತು 'ಗೋಟ್ ಕಪ್’ ನಲ್ಲಿ ಮೆಸ್ಸಿ ಏಳು ಆಟಗಾರರ ತಂಡದೊಂದಿಗೆ ಸಾಫ್ಟ್ ಟಚ್ ಪಂದ್ಯವನ್ನು ಆಡಲಿದ್ದಾರೆ.

5 / 8
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಲಿಯಾಂಡರ್ ಪೇಸ್, ಜಾನ್ ಅಬ್ರಹಾಂ ಮತ್ತು ಬೈಚುಂಗ್ ಭುಟಿಯಾ ಅವರಂತಹ ದಂತಕಥೆಗಳು ಸಹ ಭಾಗವಹಿಸಲಿದ್ದಾರೆ. ಟಿಕೆಟ್‌ನ ಆರಂಭಿಕ ಬೆಲೆಯನ್ನು 3500 ರೂ.ಗಳಿಗೆ ನಿಗಧಿಪಡಿಸಲಾಗಿದೆ.

6 / 8
ಆ ಬಳಿಕ ಡಿಸೆಂಬರ್ 13 ರ ಸಂಜೆ ಅಹಮದಾಬಾದ್‌ನಲ್ಲಿ ಮೆಸ್ಸಿ ಅದಾನಿ ಫೌಂಡೇಶನ್‌ನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಾದ ನಂತರ, ಡಿಸೆಂಬರ್ 14 ರಂದು ಮುಂಬೈ ತಲುಪಲಿರುವ ಮೆಸ್ಸಿ ಅಲ್ಲಿ ಮಧ್ಯಾಹ್ನ 3:45 ಕ್ಕೆ CCI ಬ್ರಬೋರ್ನ್‌ನಲ್ಲಿ 'ಮೀಟ್ ಅಂಡ್ ಗ್ರೀಟ್' ಮತ್ತು ಸಂಜೆ 5:30 ಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ 'ಗೋಟ್ ಕಪ್' ಮತ್ತು ಸಂಗೀತ ಕಚೇರಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

7 / 8
ಇದೇ ವೇಳೆ ಮುಂಬೈನಲ್ಲಿ ವಿಶೇಷ ಮುಂಬೈ ಪ್ಯಾಡಲ್ ಗೋಟ್ ಕಪ್ ಅನ್ನು ಸಹ ಆಯೋಜಿಸಲಾಗುವುದು, ಇದರಲ್ಲಿ ಶಾರುಖ್ ಖಾನ್ ಮತ್ತು ಲಿಯಾಂಡರ್ ಪೇಸ್‌ರಂತಹ ತಾರೆಯರು ಮೆಸ್ಸಿಯೊಂದಿಗೆ 5-10 ನಿಮಿಷಗಳ ಕಾಲ ಆಡುವುದನ್ನು ಕಾಣಬಹುದು. ಅಲ್ಲದೆ 'ಗೋಟ್ ಕ್ಯಾಪ್ಟನ್ಸ್ ಮೊಮೆಂಟ್'ನಲ್ಲಿ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ರೋಹಿತ್ ಶರ್ಮಾ ರಣವೀರ್ ಸಿಂಗ್, ಅಮೀರ್ ಖಾನ್ ಮತ್ತು ಟೈಗರ್ ಶ್ರಾಫ್, ಮೆಸ್ಸಿ ಅವರೊಂದಿಗೆ ಆಡುವುದನ್ನು ಕಾಣಬಹುದು.

8 / 8
ಡಿಸೆಂಬರ್ 15 ರಂದು ಮೆಸ್ಸಿ ನವದೆಹಲಿಯಲ್ಲಿ ಇರಲಿದ್ದು, ಅಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ನಂತರ ಮಧ್ಯಾಹ್ನ 2:15 ಕ್ಕೆ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ 'ಗೋಟ್ ಕಪ್' ಮತ್ತು ಸಂಗೀತ ಕಚೇರಿಯಲ್ಲಿ ಭಾಗವಹಿಸಲಿದ್ದಾರೆ. ಈ ಕಚೇರಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಕೂಡ ಭಾಗವಹಿಸಬಹುದು. ಇದೆಲ್ಲದರ ಹೊರತಾಗಿ ಈ ಪ್ರವಾಸದ ಸಮಯದಲ್ಲಿ, ಮೆಸ್ಸಿ ಪ್ರತಿ ನಗರದಲ್ಲಿ ಮಕ್ಕಳೊಂದಿಗೆ ಮಾಸ್ಟರ್ ತರಗತಿಗಳನ್ನು ನಡೆಸಲಿದ್ದಾರೆ, ಇದು ಭಾರತೀಯ ಫುಟ್‌ಬಾಲ್‌ಗೆ ಹೊಸ ನಿರ್ದೇಶನ ನೀಡುವ ನಿರೀಕ್ಷೆಯಿದೆ.