Kannada News Photo gallery Motorola and Xiaomi is all set to expand its budget smartphone Moto G14 and Redmi 12 5G in India Today
Moto G14 vs Redmi 12 5G: ಮೋಟೋ G14 vs ರೆಡ್ಮಿ 12 5G: ಇಂದು ಒಂದೇ ದಿನ ಬಿಡುಗಡೆ ಆಗಲಿದೆ ಎರಡು ಸ್ಮಾರ್ಟ್ಫೋನ್ಸ್
ಮೋಟೋರೊಲಾ ಕಂಪನಿ ಇಂದು ಭಾರತದಲ್ಲಿ ಹೊಸ ಮೋಟೋ G14 ಎಂಬ ಮೊಬೈಲ್ ರಿಲೀಸ್ ಮಾಡುತ್ತಿದೆ. ಇದರ ಜೊತೆಗೆ ಶವೋಮಿ ಸಂಸ್ಥೆ ತನ್ನ ರೆಡ್ಮಿ ಬ್ರ್ಯಾಂಡ್ನ ಅಡಿಯಲ್ಲಿ ಇಂದು ಹೊಸ ರೆಡ್ಮಿ 12 ಫೋನ್ ಲಾಂಚ್ ಮಾಡಲು ಸಿದ್ದವಾಗಿದೆ.
1 / 8
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇಂದು ಒಂದೇ ದಿನ ಎರಡು ಸ್ಮಾರ್ಟ್ಫೋನ್ಗಳು ಅನಾವರಣಗೊಳ್ಳಲಿದೆ. ಚೀನಾ ಮೂಲದ ಪ್ರಸಿದ್ಧ ಶವೋಮಿ ಸಂಸ್ಥೆ ತನ್ನ ರೆಡ್ಮಿ ಬ್ರ್ಯಾಂಡ್ನ ಅಡಿಯಲ್ಲಿ ಇಂದು ಹೊಸ ರೆಡ್ಮಿ 12 ಫೋನ್ ಲಾಂಚ್ ಮಾಡಲು ಸಿದ್ದವಾಗಿದೆ.
2 / 8
ಇದರ ಜೊತೆಗೆ ಮೋಟೋರೊಲಾ ಕಂಪನಿ ಇಂದು ಭಾರತದಲ್ಲಿ ಹೊಸ ಮೋಟೋ G14 ಎಂಬ ಮೊಬೈಲ್ ರಿಲೀಸ್ ಮಾಡುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್ಕಾರ್ಟ್ನಲ್ಲಿ ಇದು ಅನಾವರಣಗೊಳ್ಳಲಿದೆ.
3 / 8
ಮೋಟೋ G14 ಫೋನ್ ನೀಲಿ ಮತ್ತು ಬೂದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಹಿಂಬದಿ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಎಲ್ಇಡಿ ಫ್ಲ್ಯಾಶ್ ಇರುವುದು ಖಚಿತವಾಗಿದೆ. ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮೋಟೋ G13 ಸ್ಮಾರ್ಟ್ಫೋನಿನ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗಳಿಗೆ 9,999 ರೂ. ಇತ್ತು.
4 / 8
ಮೋಟೋ G14 ಸ್ಮಾರ್ಟ್ಫೋನ್ನ ಫೀಚರ್ಸ್ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಮೂಲಗಳ ಪ್ರಕಾರ ಇದು 6.5-ಇಂಚಿನ ಪೂರ್ಣ HD+ ಡಿಸ್ ಪ್ಲೇಯನ್ನು ಹೊಂದಿರಬಹುದು ಎನ್ನಲಾಗಿದೆ. ಈ ಫೋನ್ 4GB RAM ಮತ್ತು 128GB UFS 2.2 ಸ್ಟೋರೇಜ್ ಜೊತೆಗೆ ಆಕ್ಟಾ-ಕೋರ್ Unisoc T616 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ.
5 / 8
ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್ ಮೂಲಕ ಬರಲಿದೆ. ಇದರ ಜೊತೆಗೆ ಮೋಟೋರೊಲಾ ಈ ಸ್ಮಾರ್ಟ್‌ಫೋನ್ ಅನ್ನು ಆಂಡ್ರಾಯ್ಡ್ 14 ಗೆ ಅಪ್‌ಗ್ರೇಡ್ ಮಾಡುವುದಾಗಿ ಭರವಸೆ ನೀಡಿದೆ, ಅಲ್ಲದೆ 3 ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ನೀಡುತ್ತದೆ.
6 / 8
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಮೋಟೋ G14 ಫೋನಿನ ಹಿಂಬದಿಯಲ್ಲಿ ಡ್ಯುಯೆಲ್ ಕ್ಯಾಮೆರಾ ಸೆಟಪ್ ಇದೆ. ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ ಸೆಲ್ಫಿ ಕ್ಯಾಮರಾ ಕೂಡ ನೀಡಲಾಗಿದೆ. ಇದನ್ನು ವಾಟರ್‌ಡ್ರಾಪ್ ಶೈಲಿಯ ನಾಚ್‌ನಲ್ಲಿ ಇರಿಸಲಾಗಿದೆ.
7 / 8
ಹೆಚ್ಚುವರಿಯಾಗಿ ಇದು 20W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 34 ಗಂಟೆಗಳ ಟಾಕ್ ಟೈಮ್ ಮತ್ತು 16 ಗಂಟೆಗಳ ವಿಡಿಯೋ ಸ್ಟ್ರೀಮಿಂಗ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
8 / 8
ಈ ಹೊಸ ಸ್ಮಾರ್ಟ್‌ಫೋನ್ ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಬಯೋಮೆಟ್ರಿಕ್ ಸೆನ್ಸಾರ್, ಡ್ಯುಯಲ್ ಸಿಮ್ 4G ಸಂಪರ್ಕವನ್ನು ಒಳಗೊಂಡಿವೆ. ಈ ಫೋನಿನ ಬೆಲೆ ಎಷ್ಟು ಎಂಬುದು ಇನ್ನೂ ತಿಂದುಬಂದಿಲ್ಲ.