Mussoorie Tourism: ಮುಸ್ಸೂರಿಯಲ್ಲಿ ನೀವು ಭೇಟಿ ನೀಡಬಹುದಾದ ಸುಂದರ ತಾಣಗಳ ಮಾಹಿತಿ ಇಲ್ಲಿದೆ
ಮುಸ್ಸೂರಿಯು ಉತ್ತರಾಖಂಡ ರಾಜ್ಯದ ಒಂದು ಸುಂದರವಾದ ಗಿರಿಧಾಮವಾಗಿದೆ. ದೆಹಲಿಯಿಂದ ಕೆಲವು ಕಿಲೋಮೀಟರ್‌ಗಳ ದೂರದಲ್ಲಿರುವ ಮುಸ್ಸೂರಿಗೆ ನೀವು ನಿಮ್ಮ ಸಂಗಾತಿ ಅಥವಾ ಸ್ನೇಹಿತರು, ಕುಟುಂಬದವರೊಂದಿಗೆ ಪ್ರಯಾಣ ಬೆಳೆಸಬಹುದಾಗಿದೆ.
1 / 7
ಈ ರಮಣೀಯ ಸ್ಥಳವು ಗರ್ವಾಲ್ ಹಿಮಾಲಯ ಶ್ರೇಣಿಗಳ ತಪ್ಪಲಿನಲ್ಲಿದ್ದು, "ದಿ ಕ್ವೀನ್ ಆಫ್ ಹಿಲ್ಸ್" ಎಂಬ ಹೆಸರು ಕೂಡ ಇದೆ. ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಾರ್ಚ್ ಮಧ್ಯದಿಂದ ನವೆಂಬರ್ ಮಧ್ಯದವರೆಗೆ. ಜಲಪಾತಗಳಿಂದ ಹಿಡಿದು ಸುಂದರವಾದ ಕಣಿವೆಗಳವರೆಗೆ ನೀವಿಲ್ಲಿ ಕಣ್ತುಂಬಿಕೊಳ್ಳಬಹುದು.
2 / 7
ಕೆಂಪ್ಟಿ ಜಲಪಾತ: ಇದು ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ. ಈ ಪ್ರಶಾಂತ ಜಲಪಾತವು ಬೆಟ್ಟಗಳ ನಡುವಿನಿಂದ ಬೀಳುವ ನೀರಿನ ಶಬ್ದದೊಂದಿಗೆ ಹಿತವಾದ ಅನುಭವವನ್ನು ನೀಡುತ್ತದೆ. ನೀವು ಮಸ್ಸೂರಿಗೆ ಭೇಟಿ ನೀಡಿದಾಗ ಈ ತಾಣವನ್ನು ಮರೆಯದಿರಿ.
3 / 7
ಗನ್ ಹಿಲ್: ಮಸ್ಸೂರಿಯಲ್ಲಿರುವ ಈ ಪ್ರವಾಸಿ ತಾಣವು ಬ್ರಿಟಿಷರ ವಸಾಹತುಶಾಹಿಯ ಸಮಯದಲ್ಲಿ ಕ್ಯಾನನ್‌ಗಳ ಗುಂಡಿನ ದಾಳಿಯಿಂದ ಈ ಹೆಸರನ್ನು ಪಡೆದುಕೊಂಡಿದೆ. ಸುತ್ತಮುತ್ತಲಿನ ಪ್ರದೇಶದ ಅದ್ಭುತ ನೋಟಗಳನ್ನು ನೀವಿಲ್ಲಿ ಕಣ್ತುಂಬಿಸಿಕೊಳ್ಳಬಹುದು.
4 / 7
ಸರ್ ಜಾರ್ಜ್ ಎವರೆಸ್ಟ್ ಹೌಸ್: ಮಸ್ಸೂರಿಯಲ್ಲಿರುವ ಈ ಪ್ರವಾಸಿ ಆಕರ್ಷಣೆಯು ತನ್ನ ಇತಿಹಾಸ, ಪ್ರಕೃತಿ ಮತ್ತು ಚಾರಣಕ್ಕೆ ಹೆಸರುವಾಸಿಯಾಗಿದೆ. ಇದು 18 ನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು ಸುಮಾರು 30 ವರ್ಷಗಳ ಕಾಲ ಮಸ್ಸೂರಿಯಲ್ಲಿ ತಂಗಿದ್ದ ಸರ್ವೇಯರ್ ಮತ್ತು ಭೂಗೋಳಶಾಸ್ತ್ರಜ್ಞ ಸರ್ ಜಾರ್ಜ್ ಎವರೆಸ್ಟ್ ಅವರಿಗೆ ಸೇರಿತ್ತು ಎಂದು ಹೇಳಲಾಗಿದೆ.
5 / 7
ಲಾಲ್ ಟಿಬ್ಬಾ: ಮಸ್ಸೂರಿಯಲ್ಲಿರುವ ಈ ಪ್ರಸಿದ್ಧ ಶಿಖರವು ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿದೆ ಮತ್ತು ಪರ್ವತಗಳು, ಕೇದಾರನಾಥ ಮತ್ತು ಬದರಿನಾಥಗಳ ಸುಂದರ ನೋಟಗಳನ್ನು ನಿಮಗಿಲ್ಲಿ ಒದಗಿಸುತ್ತದೆ.
6 / 7
ಮಸ್ಸೂರಿ ಸರೋವರ: ಮಸ್ಸೂರಿಯಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಈ ಸರೋವರವು ಸುತ್ತಮುತ್ತಲಿನ ಪ್ರಸಿದ್ಧ ತಾಣವಾಗಿದೆ. ಸರೋವರವು ನೈಸರ್ಗಿಕ ಜಲಪಾತಗಳಿಂದ ರಚಿಸಲ್ಪಟ್ಟಿದೆ. ನೀವಿಲ್ಲಿ ದೋಣಿ ಸವಾರಿ ಮಾಡಬಹುದು.
7 / 7
ಕ್ರೈಸ್ಟ್ ಚರ್ಚ್: ಮಸ್ಸೂರಿಯಲ್ಲಿರುವ ಈ ಪ್ರಸಿದ್ಧ ಚರ್ಚ್ 18 ನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು ಇದು ಬ್ರಿಟಿಷರ ಕಾಲದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ. ಚರ್ಚ್‌ನ ಗೋಥಿಕ್ ವಾಸ್ತುಶಿಲ್ಪ ಮತ್ತು ರಚನೆಗಳು ಭೇಟಿ ನೀಡಲು ಯೋಗ್ಯವಾಗಿದೆ.
Published On - 3:57 pm, Fri, 10 February 23