ಸೇಲ್ ಅಲರ್ಟ್: ಭಾರತದಲ್ಲಿ ಪೋಕೋ X6-ಪೋಕೋ X6 ಪ್ರೊ ಮಾರಾಟ ಇಂದಿನಿಂದ ಆರಂಭ

Updated on: Jan 16, 2024 | 6:55 AM

Poco X6-Poco X6 Pro First Sale: ಪೋಕೋ X6-ಪೋಕೋ X6 ಪ್ರೊ ಫೋನ್‌ಗಳು ಇಂದಿನಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಗ್ರಾಹಕರು ICICI ಬ್ಯಾಂಕ್ ಕ್ರೆಡಿಟ್, ಡೆಬಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 2,000 ರೂ. ತ್ವರಿತ ರಿಯಾಯಿತಿ ಪಡೆಯಬಹುದು.

1 / 7
ಪ್ರಸಿದ್ಧ ಪೋಕೋ ಕಂಪನಿ ಇತ್ತೀಚೆಗಷ್ಟೆ ಭಾರತದಲ್ಲಿ ಪೋಕೋ X6 ಮತ್ತು ಪೋಕೋ X6 ಪ್ರೊ ಎಂಬ ಎರಡು ಹೊಸ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿತ್ತು. ಉತ್ತಮ ಡಿಸ್​ಪ್ಲೇ ಬಲಿಷ್ಠ ಬ್ಯಾಟರಿ ಆಯ್ಕೆ ಇರುವ ಈ ಎರಡೂ ಫೋನುಗಳು ಇಂದಿನಿಂದ ದೇಶದಲ್ಲಿ ಮಾರಾಟ ಕಾಣಲಿದೆ.

ಪ್ರಸಿದ್ಧ ಪೋಕೋ ಕಂಪನಿ ಇತ್ತೀಚೆಗಷ್ಟೆ ಭಾರತದಲ್ಲಿ ಪೋಕೋ X6 ಮತ್ತು ಪೋಕೋ X6 ಪ್ರೊ ಎಂಬ ಎರಡು ಹೊಸ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿತ್ತು. ಉತ್ತಮ ಡಿಸ್​ಪ್ಲೇ ಬಲಿಷ್ಠ ಬ್ಯಾಟರಿ ಆಯ್ಕೆ ಇರುವ ಈ ಎರಡೂ ಫೋನುಗಳು ಇಂದಿನಿಂದ ದೇಶದಲ್ಲಿ ಮಾರಾಟ ಕಾಣಲಿದೆ.

2 / 7

ಭಾರತದಲ್ಲಿ ಪೋಕೋ X6 ಪ್ರೊ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 8GB RAM + 256GB ಸ್ಟೋರೇಜ್ ಕಾನ್ಫಿಗರೇಶನ್‌ಗೆ 24,999ರೂ. ಇದೆ. ಅಂತೆಯೆ 12GB RAM + 512GB ರೂಪಾಂತವನ್ನು 26,999 ರೂ. ಗೆ ಖರೀದಿಸಬಹುದು. ಇದು ಹಳದಿ, ರೇಸಿಂಗ್ ಗ್ರೇ ಮತ್ತು ಸ್ಪೆಕ್ಟರ್ ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

3 / 7

ಮತ್ತೊಂದೆಡೆ, ಪೋಕೋ X6 ಫೋನ್ 8GB RAM + 256GB ಮತ್ತು 12GB RAM + 256GB ಸ್ಟೋರೇಜ್ ಮಾದರಿಗಳಲ್ಲಿ ಲಭ್ಯವಿದೆ. ಇದರ ಬೆಲೆ ಕ್ರಮವಾಗಿ ರೂ. 18,999 ಮತ್ತು 21,999 ರೂ. ಆಗಿದೆ. ಅಂತೆಯೆ 12GB RAM ಮತ್ತು 512GB ಅಂತರ್ಗತ ಸಂಗ್ರಹಣೆಯೊಂದಿಗೆ ಟಾಪ್-ಆಫ್-ಲೈನ್ ರೂಪಾಂತರವೂ ಲಭ್ಯವಿದೆ, ಇದರ ಬೆಲೆ ರೂ. 22,999 ಆಗಿದೆ.

4 / 7

ಪೋಕೋ X6-ಪೋಕೋ X6 ಪ್ರೊ ಫೋನ್‌ಗಳು ಇಂದಿನಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಗ್ರಾಹಕರು ICICI ಬ್ಯಾಂಕ್ ಕ್ರೆಡಿಟ್, ಡೆಬಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 2,000 ರೂ. ತ್ವರಿತ ರಿಯಾಯಿತಿ ಪಡೆಯಬಹುದು.

5 / 7

ಪೋಕೋ X6 ಪ್ರೊ ಮತ್ತು ಪೋಕೋ X6 ಫೋನ್ ಆಂಡ್ರಾಯ್ಡ್ 14-ಆಧಾರಿತ HyperOS ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. 6.67-ಇಂಚಿನ 1.5K (1,220×2,712 ಪಿಕ್ಸೆಲ್‌ಗಳು) ಡಿಸ್‌ಪ್ಲೇಗಳನ್ನು 120Hz ರಿಫ್ರೆಶ್ ರೇಟ್ ನಿಂದ ನೀಡಿದೆ. ಪೋಕೋ X6 ಪ್ರೊ ಡೈಮನ್ಸಿಟಿ 8300-Ultra SoC ಯಲ್ಲಿ ಕಾರ್ಯನಿರ್ವಹಿಸುತ್ತದೆ. ಪೋಕೋ X6 ಸ್ನಾಪ್​ಡ್ರಾಗನ್ 7s Gen 2 ಚಿಪ್‌ನಿಂದ ಚಾಲಿತವಾಗಿದೆ.

6 / 7

ಫೋಟೋಗಳು ಮತ್ತು ವಿಡಿಯೋಗಳಿಗಾಗಿ, ಪೋಕೋ X6 ಮತ್ತು X6 ಪ್ರೊ OIS ಜೊತೆಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ, ಎರಡೂ ಫೋನ್‌ಗಳು 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ.

7 / 7

ಕನೆಕ್ಟಿವಿಟಿ ಆಯ್ಕೆಗಳು 5G, 4G LTE, ಬ್ಲೂಟೂತ್, NFC, GPS ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿವೆ. 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ. ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿವೆ. ಪೋಕೋ X6 ಪ್ರೊ ಮತ್ತು ಪೋಕೋ X6 ಕ್ರಮವಾಗಿ 5,000mAh ಮತ್ತು 5,100mAh ಬ್ಯಾಟರಿಗಳನ್ನು ಹೊಂದಿದೆ. ಇವುಗಳನ್ನು 67W ನಲ್ಲಿ ಚಾರ್ಜ್ ಮಾಡಬಹುದು.

Loading...
Unable to load recommendations.
Follow Us