ಮೋಹನ್​ಲಾಲ್​ ಜೊತೆ ಊಟ ಸವಿದ ರಾಗಿಣಿ ದ್ವಿವೇದಿ; ಕಾದಿದೆ ಸರ್ಪ್ರೈಸ್

Updated on: Feb 25, 2025 | 8:48 PM

ಮಾಲಿವುಡ್ ಸ್ಟಾರ್​ ನಟ ಮೋಹನ್​ ಲಾಲ್ ಅವರು ರಾಗಿಣಿ ದ್ವಿವೇದಿ ಹಾಗೂ ಅವರ ತಂಡಕ್ಕೆ ಔತಣ ಕೂಟ ಏರ್ಪಡಿಸಿದ್ದಾರೆ. ಮೋಹನ್​ ಲಾಲ್ ತೋರಿಸಿದ ಪ್ರೀತಿಗೆ ರಾಗಿಣಿ ಫಿದಾ ಆಗಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಇಲ್ಲಿದೆ ಫೋಟೋ ಗ್ಯಾಲರಿ.

1 / 5
ನಟಿ ರಾಗಿಣಿ ದ್ವಿವೇದಿ ಅವರು ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಮಲಯಾಳಂ ಸೂಪರ್​ ಸ್ಟಾರ್​ ಮೋಹನ್​ಲಾಲ್​ ಜೊತೆ ನಟಿಸುವ ಅವಕಾಶ ಕೂಡ ರಾಗಿಣಿ ಅವರಿಗೆ ಸಿಕ್ಕಿದೆ.

ನಟಿ ರಾಗಿಣಿ ದ್ವಿವೇದಿ ಅವರು ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಮಲಯಾಳಂ ಸೂಪರ್​ ಸ್ಟಾರ್​ ಮೋಹನ್​ಲಾಲ್​ ಜೊತೆ ನಟಿಸುವ ಅವಕಾಶ ಕೂಡ ರಾಗಿಣಿ ಅವರಿಗೆ ಸಿಕ್ಕಿದೆ.

2 / 5

ಈಗಾಗಲೇ ‘ವೃಷಭ’ ಸಿನಿಮಾದಲ್ಲಿ ಮೋಹನ್​ಲಾಲ್ ಮತ್ತು ರಾಗಿಣಿ ದ್ವಿವೇದಿ ಅವರು ಒಟ್ಟಿಗೆ ಅಭಿನಯಿಸಿದ್ದಾರೆ. ಆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇನ್ನೊಂದು ಸುದ್ದಿ ಕೂಡ ಕಾದಿದೆ.

3 / 5

ರಾಗಿಣಿ ದ್ವಿವೇದಿ ಮತ್ತು ಅವರ ಟೀಮ್​ ಸದಸ್ಯರಿಗೆ ಮೋಹನ್​ಲಾಲ್ ಅವರು ಔತಣ ನೀಡಿದ್ದಾರೆ. ಎಲ್ಲರೂ ಜೊತೆಯಾಗಿ ಕುಳಿತು ಬಗೆಬಗೆಯ ಆಹಾರ ಸವಿದಿದ್ದಾರೆ. ರಾಗಿಣಿ ಖುಷಿಯಿಂದ ಫೋಟೋ ಶೇರ್​ ಮಾಡಿದ್ದಾರೆ.

4 / 5

‘ಅದು ದೊಡ್ಡ ಅಚ್ಚರಿಗಾಗಿ ಕಾದಿರಿ’ ಎಂದು ಅಭಿಮಾನಿಗಳಿಗೆ ರಾಗಿಣಿ ದ್ವಿವೇದಿ ಅವರು ಹೇಳಿದ್ದಾರೆ. ಆ ಮೂಲಕ ಅವರು ಕೌತುಕ ಮೂಡಿಸಿದ್ದಾರೆ. ಮತ್ತೊಮ್ಮೆ ಮೋಹನ್​ಲಾಲ್ ಜೊತೆ ಅವರು ಕೈ ಜೋಡಿಸಿದ್ದಾರೆ.

5 / 5

ಸೋಶಿಯಲ್ ಮೀಡಿಯಾದಲ್ಲಿ ರಾಗಿಣಿ ಅವರು ತುಂಬ ಆ್ಯಕ್ಟೀವ್ ಆಗಿರುತ್ತಾರೆ. ಅಭಿಮಾನಿಗಳಿಗೆ ತಮ್ಮ ದಿನಚರಿ ಬಗ್ಗೆ ಮಾಹಿತಿ ನೀಡುತ್ತಾರೆ. ಮೋಹನ್​ಲಾಲ್ ಜತೆ ರಾಗಿಣಿ ನಟಿಸಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us