Shiva Rajkumar: ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರುಗಳು ಗಾಜನೂರಿಗೆ ಹೋಗಿ ಅಲ್ಲಿ ದೀಪಾವಳಿ ಆಚರಣೆ ಮಾಡಿದ್ದಾರೆ. ಶಿವಣ್ಣ, ಅಲ್ಲಿ ತಮ್ಮ ಸಂಬಂಧಿಗಳನ್ನು ಭೇಟಿಯಾಗಿದ್ದಾರೆ.
Ad
Follow us on
ಶಿವರಾಜ್ ಕುಮಾರ್ ಅವರು ನಗರದ ಜಂಜಾಟಗಳಿಂದ ದೂರಾಗಿ ತಮ್ಮ ಮೂಲ ಊರಾದ ಗಾಜನೂರಿಗೆ ಹೋಗಿ ಅಲ್ಲಿ ದೀಪಾವಳಿ ಆಚರಣೆ ಮಾಡಿದ್ದಾರೆ.
ಗಾಜನೂರಿಗೆ ಹೋಗಿ ಅಲ್ಲ ತಮ್ಮ ಅಜ್ಜಿಯನ್ನು ಭೇಟಿ ಮಾಡಿದ್ದಾರೆ. ಅಜ್ಜಿಯೊಟ್ಟಿಗೆ ಮಾತನಾಡಿದ್ದಾರೆ. ಅವರನ್ನು ಅಪ್ಪಿಕೊಂಡು ಅವರಿಂದ ಆಶೀರ್ವಾದ ಪಡೆದಿದ್ದಾರೆ.
ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಗಾಜನೂರಿನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿದ್ದಾರೆ. ಗಾಜನೂರಿಗೆ ಹೋದಾಗಲೆಲ್ಲ ದೇವಾಲಯಕ್ಕೆ ಹೋಗುವುದು ತಪ್ಪಿಸಿಕೊಳ್ಳಲ್ಲ ಶಿವಣ್ಣ.
ಗಾಜನೂರಿನ ತಮ್ಮ ಹಳೆಯ ಮನೆಯಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ ಶಿವರಾಜ್ ಕುಮಾರ್, ಅಲ್ಲಿ ತಮ್ಮ ಹಿರಿಕರ ಫೋಟೊಗಳಿಗೆ ಪೂಜೆ ಮಾಡಿದ್ದಾರೆ.
ಗಾಜನೂರಿನ ಹಳೆಯ ಮನೆಯಲ್ಲಿರುವ ತಮ್ಮ ಅಪ್ಪಾಜಿಯವರ ಚಿತ್ರಗಳು, ಚಿಕ್ಕಪ್ಪನ ಚಿತ್ರಗಳು. ತಾತನ ಚಿತ್ರಗಳು ಎಲ್ಲವನ್ನೂ ನೋಡಿ ಖುಷಿ ಪಟ್ಟಿದ್ದಾರೆ.
ಗಾಜನೂರಿನಲ್ಲಿ ತಮ್ಮ ಕೆಲವು ಹಳೆ ಗೆಳೆಯರನ್ನು ಸಹ ಭೇಟಿ ಆಗಿದ್ದಾರೆ. ತಮ್ಮ ಸಂಬಂಧಿಗಳನ್ನು, ಅವರ ಮಕ್ಕಳನ್ನು ಸಹ ಭೇಟಿ ಆಗಿದ್ದಾರೆ ಶಿವಣ್ಣ.
ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಆಗಾಗ್ಗೆ ಗಾಜನೂರಿಗೆ ಹೋಗುತ್ತಲೇ ಇರುತ್ತಾರೆ. ಇಂದಿಗೂ ಸಹ ದೊಡ್ಮನೆಯ ಮಂದಿಗೆ ಗಾಜನೂರಿನ ಮೇಲೆ ವಿಶೇಷ ಪ್ರೀತಿ.