ಶ್ರುತಿ ಹಾಸನ್​ಗೆ ಸಾಕಾಯ್ತು ಹುಡುಗರ ಸಹವಾಸ; ಮತ್ತೆ ಲವ್ ಮಾಡಲ್ಲ ಎಂದ ನಟಿ

Updated on: May 24, 2024 | 8:56 AM

ಶ್ರುತಿ ಅವರು ಶಾಂತನು ಹಜಾರಿಕಾ ಜೊತೆ ಡೇಟ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಪ್ರೀತಿ ಬ್ರೇಕಪ್ನಲ್ಲಿ ಕೊನೆ ಆಗಿದೆ. ಈ ವಿಚಾರವನ್ನು ಅವರೇ ಅಧಿಕೃತ ಮಾಡಿದ್ದಾರೆ.

1 / 6
ನಟಿ ಶ್ರುತಿ ಹಾಸನ್ ಅವರು ಡೇಟಿಂಗ್ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ಅವರು ಸಿಂಗಲ್ ಆಗಿ ಇದ್ದಿದ್ದೇ ಕಡಿಮೆ. ಒಬ್ಬಲ್ಲಾ ಒಬ್ಬರ ಜೊತೆ ಡೇಟಿಂಗ್ ಮಾಡುತ್ತಲೇ ಇದ್ದರು. ಈಗ ಅವರಿಗೆ ಹುಡುಗರ ಸಹವಾಸ ಸಾಕಾಗಿದೆ.

ನಟಿ ಶ್ರುತಿ ಹಾಸನ್ ಅವರು ಡೇಟಿಂಗ್ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ಅವರು ಸಿಂಗಲ್ ಆಗಿ ಇದ್ದಿದ್ದೇ ಕಡಿಮೆ. ಒಬ್ಬಲ್ಲಾ ಒಬ್ಬರ ಜೊತೆ ಡೇಟಿಂಗ್ ಮಾಡುತ್ತಲೇ ಇದ್ದರು. ಈಗ ಅವರಿಗೆ ಹುಡುಗರ ಸಹವಾಸ ಸಾಕಾಗಿದೆ.

2 / 6

ಶ್ರುತಿ ಅವರು ಶಾಂತನು ಹಜಾರಿಕಾ ಜೊತೆ ಡೇಟ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಪ್ರೀತಿ ಬ್ರೇಕಪ್​ನಲ್ಲಿ ಕೊನೆ ಆಗಿದೆ. ಈ ವಿಚಾರವನ್ನು ಅವರೇ ಅಧಿಕೃತ ಮಾಡಿದ್ದಾರೆ.

3 / 6

ಸೋಶಿಯಲ್ ಮೀಡಿಯಾದಲ್ಲಿ ‘ಆಸ್ಕ್​ ಮಿ ಅನಿಥಿಂಗ್’ ಸೆಷನ್ ನಡೆಸಲಾಗಿತ್ತು. ಈ ವೇಳೆ ಶ್ರುತಿ ಅವರಿಗೆ ‘ಸಿಂಗಲ್ ಅಥವಾ ಕಮಿಟೆಡ್’ ಎಂದು ಕೇಳಲಾಗಿದೆ. ಇದಕ್ಕೆ ಅವರು ಉತ್ತರಿಸಿದ್ದಾರೆ.

4 / 6

‘ನಾನು ಸಿಂಗಲ್. ಮಿಂಗಲ್ ಆಗೋಕೆ ಇಷ್ಟ ಇಲ್ಲ. ಕೆಲಸ ಮಾತ್ರ. ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ’ ಎಂದಿದ್ದಾರೆ ಶ್ರುತಿ.

5 / 6

ಶ್ರುತಿ ಅವರು ಶಾಂತನು ಜೊತೆ ಸುತ್ತಾಡುವುದಕ್ಕೂ ಮೊದಲು ಕೆಲವು ಹೀರೋಗಳ ಜೊತೆ ಸುತ್ತಾಡಿದ್ದರು. ಇದನ್ನು ಅವರು ಅಲ್ಲಗಳೆಯುತ್ತಾ ಬಂದಿದ್ದರು.

6 / 6

ಶ್ರುತಿ ಹಾಸನ್ ಅವರು ಶಾಂತನು ಜೊತೆ ಸುತ್ತಾಡಿದ್ದನ್ನು ಮುಚ್ಚಿಟ್ಟಿಲ್ಲ. ಅವರು ಈ ವಿಚಾರದ ಬಗ್ಗೆ ಅವರು ಓಪನ್ ಆಗಿದ್ದರು.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us