ಇದೇ ಕಾರಣಕ್ಕೆ ನೋಡಿ ಗಂಡಸರು ತನಗೆ ಹೆಣ್ಣು ಮಗಳೇ ಬೇಕೆಂದು ಬಯಸೋದು

Updated on: May 12, 2025 | 4:47 PM

ಹೆಣ್ಣು ಮಕ್ಕಳಿಗೆ ತಂದೆಯೆಂದರೆ ಎಲ್ಲಿಲ್ಲದ ಪ್ರೀತಿ, ಅದೇ ರೀತಿ ತಂದೆಗೂ ಅಷ್ಟೇ ಹೆಣ್ಣು ಮಗಳೆಂದರೆ ಪಂಚಪ್ರಾಣ ಅಂತಾನೇ ಹೇಳಬಹುದು. ಬಹುತೇಕ ಎಲ್ಲಾ ಅಪ್ಪಂದಿರು ತಮ್ಮ ಮಗನಿಗಿಂತ ಮಗಳನ್ನೇ ಅತಿ ಹೆಚ್ಚು ಪ್ರೀತಿಸುತ್ತಾರೆ. ಅಪ್ಪ ಮತ್ತು ಮಗಳ ಈ ಸುಂದರ ಸಂಬಂಧ ಒಂಥರಾ ಚೆಂದ. ಒಟ್ಟಾರೆಯಾಗಿ ತಂದೆ ಮತ್ತು ಮಗಳ ಸಂಬಂಧವು ತುಂಬಾ ಪವಿತ್ರವಾದದ್ದು ಅಂತಾನೇ ಹೇಳಬಹುದು. ಮಗಳೆಂಬ ಮುತ್ತು ಅಪ್ಪನ ಪಾಲಿನ ಸಂಪತ್ತು ಎಂದರೆ ತಪ್ಪಾಗಲಾರದು. ಹೀಗೆ ತಂದೆಯಂದಿರಿಗೆ ಮಗಳೆಂದರೆ ಏಕೆ ಅಷ್ಟು ಇಷ್ಟ ಎಂಬುದನ್ನು ನೋಡೋಣ ಬನ್ನಿ.

1 / 7
ತಂದೆ ಅಂದ್ರೆ ಹೆಣ್ಣು ಮಕ್ಕಳ ಪಾಲೀನ ಸೇಫ್‌ ಪ್ಲೇಸ್‌ ಅಂತಾನೇ ಹೇಳಬಹುದು. ತಂದೆಗೂ ಅಷ್ಟೆ ತನ್ನ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಪ್ರತಿಯೊಬ್ಬ ಗಂಡಸು ಕೂಡಾ ತನಗೆ ಹೆಣ್ಣು ಮಗುವೇ ಬೇಕೆಂದು ಬಯಸುತ್ತಾನೆ. ಹೀಗೆ ಗಂಡಸರು ನನಗೆ ಹೆಣ್ಣು ಮಗುವೇ ಆಗ್ಲಪ್ಪಾ ದೇವ್ರೇ ಎಂದು ಬೇಡಿಕೊಳ್ಳುವುದನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಅಷ್ಟಕ್ಕೂ ಗಂಡಸರಿಗೆ ಹೆಣ್ಣು ಮಗಳೆಂದರೆ ಯಾಕೆ ಅಷ್ಟು ಇಷ್ಟ ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

2 / 7
ಮಗಳೊಂದಿಗಿನ ತಂದೆಯ ಸಂಬಂಧವು ಭಾವನಾತ್ಮಕವಾಗಿ ಹೆಚ್ಚು  ನಿಕಟವಾಗಿರುತ್ತದೆ. ತಂದೆ ಆಕೆಯನ್ನು ತನ್ನ ಪಾಲಿನ ರಾಜ ಕುಮಾರಿಯೆಂದು ಭಾವಿಸುತ್ತಾನೆ. ಇದೇ ಕಾರಣಕ್ಕೆ ಪ್ರತಿಯೊಬ್ಬ ತಂದೆಗೂ ತನ್ನ ಮಗಳು ಹೆಚ್ಚು ಇಷ್ಟವಾಗೋದು. ತಂದೆ ಮಗಳ ಈ ಸುಂದರ ಬಾಂಧವ್ಯವವನ್ನು ನೋಡಿ ಹೆಚ್ಚಿನ ಪುರುಷರು ನನಗೂ ಇಂತಹದ್ದೊಂದು ಪುಟ್ಟ ರಾಜಕುಮಾರಿ ಬೇಕೆಂದು ಬಯಸುತ್ತಾರೆ.

3 / 7
ತಂದೆಯಾದವನು ತನ್ನ ಮಗಳಲ್ಲಿ ತಾಯಿಯ ಪ್ರೀತಿಯನ್ನು ಕಾಣುತ್ತಾನೆ. ಮಗಳನ್ನೇ ತನ್ನ ಎರಡನೇ ತಾಯಿಯೆಂದು ಭಾವಿಸುತ್ತಾನೆ. ಆತ ಏನೇ ತಪ್ಪು ಮಾಡಿದರೂ ಹೆಂಡತಿ ಸೇರಿದಂತೆ ಬೇರೆಯವರು ಕೋಪಗೊಳ್ಳಬಹುದು. ಆದರೆ ಮಗಳು ತಂದೆಯ ಮೇಲೆ ಯಾವತ್ತೂ ಕೋಪ ಮಾಡಿಕೊಳ್ಳುವುದಿಲ್ಲ. ತನ್ನ ತಂದೆಯ ತಪ್ಪನ್ನು ಬೇಗನೇ ಕ್ಷಮಿಸುತ್ತಾಳೆ. ಈ ಕಾರಣಕ್ಕೂ ಪುರುಷರು ಹೆಚ್ಚಾಗಿ ಹೆಣ್ಣು ಮಗಳೇ ಬೇಕೆಂದು ಬಯಸೋದು.

4 / 7
ನೀವು ಕೂಡಾ ಹೆಣ್ಣು ಮಕ್ಕಳು ತಮ್ಮ ತಂದೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವುದನ್ನು, ಕೇರ್‌ ಮಾಡುವುದನ್ನು ನೋಡಿರುತ್ತೀರಿ ಅಲ್ವಾ. ಮಗಳು ತಂದೆಯನ್ನು ಕೇರ್‌ ಮಾಡುವ ರೀತಿ ಬಹಳಷ್ಟು ಜನರ ಮನಸ್ಸು ಗೆಲ್ಲುತ್ತದೆ. ಈ ಒಂದು ಅಂಶ ಕೂಡಾ ಪುರುಷರು ತಮಗೆ ಹೆಣ್ಣು ಮಗಳೇ ಬೇಕೆಂದು ಬಯಸಲು ಒಂದು ಕಾರಣವಾಗಿದೆ.

5 / 7
ಅಪ್ಪ ಮಗಳ ಬಾಂಧವ್ಯ ತುಂಬಾನೇ ಆತ್ಮೀಯವಾಗಿರುತ್ತದೆ. ಅಪ್ಪ ಏನಾದರೂ ದುಃಖದಲ್ಲಿದ್ದರೆ ಆತನನ್ನು ತಾಯಿಯಂತೆ ಸಮಧಾನ ಪಡಿಸುವ ಜೀವವೆಂದರೆ ಅದು ಮಗಳು. ತನ್ನ ತಂದೆಗೆ ಸಣ್ಣ ನೋವಾದರೂ ಮಗಳು ಅದನ್ನು ಸಹಿಸುವುದಿಲ್ಲ. ಹೀಗೆ ಮಗಳು ತನ್ನ ತಂದೆಯನ್ನು ನಿಷ್ಕಲ್ಮಶವಾಗಿ ಪ್ರೀತಿಸುವ ಈ ಗುಣ ಪುರುಷರಿಗೆ ಇಷ್ಟವಾಗುತ್ತದೆ.

6 / 7
ಹೆಣ್ಣು ಮಕ್ಕಳಿಗೆ ತಂದೆಯೇ ಸೂಪರ್‌ ಹೀರೋ. ಮಗಳಾದವಳು ತನ್ನ ಖುಷಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧನಿರುವ ತಂದೆಗೆ ಚೂರು ನೋವಾದರೂ ಆಕೆ ಸಹಿಸುವುದಿಲ್ಲ. ತಂದೆಗೆ ತಾಯಿ ಬೈದ್ರೂ ಮಗಳು ತಾಯಿಯ ಮೇಲೆ ಗದರುತ್ತಾಳೆ.  ತಂದೆ ಮಗಳನ್ನು ಎಷ್ಟು ಜೋಪಾನ ಮಾಡುತ್ತಾನೋ ಅದೇ ರೀತಿ ಮಗಳು ಎಲ್ಲರಿಗಿಂತ ಹೆಚ್ಚಾಗಿ ತನ್ನ ತಂದೆಯನ್ನು ಕೇರ್‌ ಮಾಡುತ್ತಾಳೆ.  ಇದೇ ಕಾರಣಕ್ಕೆ ಗಂಡಸರಿಗೆ ಹೆಣ್ಣು ಮಗುವೆಂದರೆ ಬಲು ಇಷ್ಟವಂತೆ.

7 / 7
ಒಟ್ಟಾರೆಯಾಗಿ ಹೆಣ್ಣು ಮಗಳು ತನ್ನ ತಂದೆಯ ಮೇಲೆ ತೋರುವ ಅಪಾರವಾದ ಪ್ರೀತಿ, ತಂದೆಯ ಬಗ್ಗೆ ಆಕೆಗಿರುವ ಸಹಾನುಭೂತಿ, ತಂದೆಗೆ ಪ್ರತಿ ಹೆಜ್ಜೆಯಲ್ಲೂ ಆಕೆ ಸಪೋರ್ಪ್‌ ಮಾಡುವ ಗುಣ ಈ ಎಲ್ಲವೂ ಪ್ರತಿಯೊಬ್ಬ ಪುರುಷನು ನನಗೆ ಹೆಣ್ಣು ಮಗುವೇ ಬೇಕೆಂದು ಬಯಸಲು ಕಾರಣವಂತೆ.