ಅಜಾತಶತ್ರು ಅಟಲ್​ ಜೀ ಜನ್ಮದಿನ; ಅಗಲಿದ ನಾಯಕನಿಗೆ ಗೌರವ ಸಮರ್ಪಣೆಯ ಚಿತ್ರಗಳು

|

Updated on: Dec 25, 2020 | 6:57 PM

ಇಂದು ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿಯವರ 96ನೇ ಜನ್ಮದಿನ. ತನ್ನಿಮಿತ್ತ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ ಸೇರಿ ಹಲವು ರಾಜಕೀಯ ಗಣ್ಯರು ಅಜಾತಶತ್ರುವಿಗೆ ನಮನ ಸಲ್ಲಿಸಿದ್ದಾರೆ. ಅಟಲ್ ಜೀ ಸ್ಮಾರಕ ಸದೈವ ಅಟಲ್​ನಲ್ಲಿ ಮತ್ತು ಸಂಸತ್ತಿನ ಕೇಂದ್ರೀಯ ಸಭಾಂಗಣದಲ್ಲಿ ಗೌರವ ಸಮರ್ಪಿಸಲಾಯಿತು. ಅಗಲಿದ ನಾಯಕನ ಸ್ಮರಣೆಯ ಹೊತ್ತಿನ ಚಿತ್ರಣ ಇಲ್ಲಿದೆ..  

1 / 9
ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಜನ್ಮದಿನದ ನಿಮಿತ್ತ ಅವರ ಸ್ಮಾರಕ ಸದೈವ ಅಟಲ್​ನಲ್ಲಿ ತಮ್ಮ ನೆಚ್ಚಿನ ಗುರುವಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

2 / 9
ಸದೈವ ಅಟಲ್​ನಲ್ಲಿ ಅಜಾತಶತ್ರುವಿಗೆ ನಮನ ಸಲ್ಲಿಸಿದ ಗೃಹ ಸಚಿವ ಅಮಿತ್ ಷಾ

3 / 9
ಸದೈವ ಅಟಲ್​ನಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ರಿಂದ ವಾಜಪೇಯಿಯವರಿಗೆ ಗೌರವ ಸಲ್ಲಿಕೆ

4 / 9
ಸದೈವ ಅಟಲ್​ನಲ್ಲಿ ವಾಜಪೇಯಿಯವರಿಗೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾರಿಂದ ಗೌರವ ನಮನ.

5 / 9
ಅಟಲ್​ ಜೀಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಸದೈವ ಅಟಲ್ ಸ್ಮಾರಕದ ಬಳಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ, ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್​

6 / 9
ಸದೈವ ಅಟಲ್​ನಲ್ಲಿ ಸ್ಮಾರಕಕ್ಕೆ ನಮನ ಸಲ್ಲಿಸಿದ ಬಳಿಕ ಅಲ್ಲಿಂದ ತೆರಳುತ್ತಿರುವ ಪ್ರಧಾನಿ, ರಾಷ್ಟ್ರಪತಿ ಮತ್ತು ಗೃಹಸಚಿವ

7 / 9
ಅಟಲ್​ ಬಿಹಾರಿ ವಾಜಪೇಯಿಯವರಿಗೆ ಗೌರವ ಸಲ್ಲಿಸಲು ಸಂಸತ್ತಿನ ಕೇಂದ್ರೀಯ ಸಭಾಂಗಣಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ

8 / 9
ಸಂಸತ್ತಿನ ಕೇಂದ್ರೀಯ ಸಭಾಂಗಣದಲ್ಲಿ ರಾಜ್ಯಸಭಾ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್​, ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿಯವರಿಗೆ ಗೌರವ ಸಲ್ಲಿಸಿದರು.

9 / 9
ಪ್ರಧಾನಿ ಮೋದಿ ಮತ್ತು  ಗುಲಾಂ ನಬಿ ಆಜಾದ್​ ‘ಅಟಲ್ ಬಿಹಾರಿ ವಾಜಪೇಯಿ: ಸಂಸ್ಮರಣೆಯ ಸಂಪುಟ(Atal Bihari Vajpayee in Parliament: A Commemorative Volume) ಪುಸ್ತಕ ಬಿಡುಗಡೆ ಮಾಡಿದರು, ಓಂ ಬಿರ್ಲಾ ಇದ್ದರು

Published On - 6:39 pm, Fri, 25 December 20