Valentine’s Day: ವಾಲೆಂಟೈನ್ಸ್​ ಡೇಗೆ ಐಫೋನ್ ಗಿಫ್ಟ್ ಕೊಡಿ: ಫ್ಲಿಪ್​ಕಾರ್ಟ್​ನಿಂದ ಹಿಂದೆಂದೂ ನೀಡದ ಆಫರ್

Edited By:

Updated on: Feb 11, 2023 | 12:03 PM

Apple iPhone 14 Plus Offer: ವಾಲೆಂಟೈನ್ಸ್​ ಡೇಗೆ ಐಫೋನ್ ಗಿಫ್ಟ್ ಆಗಿ ನೀಡಬೇಕು ಎಂದುಕೊಂಡಿದ್ದರೆ ಇದಕ್ಕಿಂತ ಉತ್ತಮ ಸಮಯ ಮತ್ತೆ ಬರಲ್ಲ. ಆ್ಯಪಲ್ ಕಂಪನಿ ಕಳೆದ ವರ್ಷ ಅನಾವರಣಗೊಳಿಸಿದ ಐಫೋನ್ 14 ಪ್ಲಸ್ ಸ್ಮಾರ್ಟ್​ಫೋನ್ ಇದೀಗ ಆಕರ್ಷಕ ಡಿಸ್ಕೌಂಟ್​ನಲ್ಲಿ ಫ್ಲಿಪ್​ಕಾರ್ಟ್ ಮೂಲಕ ಮಾರಾಟ ಆಗುತ್ತಿದೆ.

1 / 8
ವಾಲೆಂಟೈನ್ಸ್​ ಡೇ ಪ್ರೇಮಿಗಳ ದಿನಾಚರಣೆಗೆ ಎರಡು ದಿನಗಳಷ್ಟೇ ಬಾಕಿಯಿದೆ. ಈ ಸಂದರ್ಭ ನೀವು ಪ್ರೀತಿಯನ್ನು ವ್ಯಕ್ತಪಡಿಸುವ ಜೊತೆಗೆ ವಿಶೇಷ ಉಡುಗೊರೆಯನ್ನೂ ನೀಡಿದರೆ ನಿಮ್ಮನ್ನು ಪ್ರೀತಿಸುವವರು ಮತ್ತಷ್ಟು ಖುಷಿ ಪಡಬಹುದು. ಇದಕ್ಕಾಗಿಯೇ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ‘ಫ್ಲಿಪ್ ಹಾರ್ಟ್ ಡೇಸ್’ ಎಂಬ ವಿಶೇಷ ಮೇಳ ಶುರು ಮಾಡಿದ್ದು, ಇದರಲ್ಲಿ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ.

ವಾಲೆಂಟೈನ್ಸ್​ ಡೇ ಪ್ರೇಮಿಗಳ ದಿನಾಚರಣೆಗೆ ಎರಡು ದಿನಗಳಷ್ಟೇ ಬಾಕಿಯಿದೆ. ಈ ಸಂದರ್ಭ ನೀವು ಪ್ರೀತಿಯನ್ನು ವ್ಯಕ್ತಪಡಿಸುವ ಜೊತೆಗೆ ವಿಶೇಷ ಉಡುಗೊರೆಯನ್ನೂ ನೀಡಿದರೆ ನಿಮ್ಮನ್ನು ಪ್ರೀತಿಸುವವರು ಮತ್ತಷ್ಟು ಖುಷಿ ಪಡಬಹುದು. ಇದಕ್ಕಾಗಿಯೇ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ‘ಫ್ಲಿಪ್ ಹಾರ್ಟ್ ಡೇಸ್’ ಎಂಬ ವಿಶೇಷ ಮೇಳ ಶುರು ಮಾಡಿದ್ದು, ಇದರಲ್ಲಿ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ.

2 / 8

ಮುಖ್ಯವಾಗಿ ನಿಮ್ಮ ಪ್ರೀತಿಪಾತ್ರರರಿಗೆ ಐಫೋನ್ ಗಿಫ್ಟ್ ಆಗಿ ನೀಡಬೇಕು ಎಂದುಕೊಂಡಿದ್ದರೆ ಇದಕ್ಕಿಂತ ಉತ್ತಮ ಸಮಯ ಮತ್ತೆ ಬರಲ್ಲ. ಆ್ಯಪಲ್ ಕಂಪನಿ ಕಳೆದ ವರ್ಷ ಅನಾವರಣಗೊಳಿಸಿದ ಐಫೋನ್ 14 ಪ್ಲಸ್ ಸ್ಮಾರ್ಟ್​ಫೋನ್ ಇದೀಗ ಆಕರ್ಷಕ ಡಿಸ್ಕೌಂಟ್​ನಲ್ಲಿ ಫ್ಲಿಪ್​ಕಾರ್ಟ್ ಮೂಲಕ ಮಾರಾಟ ಆಗುತ್ತಿದೆ.

3 / 8

ಐಫೋನ್‌ 14 ಪ್ಲಸ್‌ ಬೆಲೆಯಲ್ಲಿ ಬರೋಬ್ಬರಿ 14,901 ರೂಪಾಯಿ ಡಿಸ್ಕೌಂಟ್ ಮಾಡಲಾಗಿದೆ. ಇದಲ್ಲದೆ ಫ್ಲಿಪ್‌ಕಾರ್ಟ್‌ನಲ್ಲಿ ಬ್ಯಾಂಕ್‌ ಆಫರ್‌ಗಳು ಮತ್ತು ಎಕ್ಸ್‌ಚೇಂಜ್‌ ಆಫರ್‌ ಅನ್ನು ಅನ್ವಯಿಸಿದರೆ ಇನ್ನಷ್ಟು ಕಡಿಮೆ ಬೆಲೆಗೆ ಐಫೋನ್‌ 14 ಪ್ಲಸ್‌ ಅನ್ನು ಖರೀದಿಸಬಹುದು.

4 / 8

89,900ರೂ. ಮೂಲ ಬೆಲೆ ಹೊಂದಿರುವ ಐಫೋನ್‌ 14 ಪ್ಲಸ್‌ ಬೆಲೆ ಕಡಿತಗೊಂಡು ಇದೀಗ ಕೇವಲ 74,999ರೂ. ಬೆಲೆಯಲ್ಲಿ ಫ್ಲಿಪ್‌ಕಾರ್ಟ್​ನಲ್ಲಿ ಮಾರಾಟ ಕಾಣುತ್ತಿದೆ. ಇದರ ಜೊತೆಗೆ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 5 ರಷ್ಟು ಡಿಸ್ಕೌಂಟ್‌ ಸಿಗಲಿದೆ. ಐಸಿಐಸಿಐ ಕಾರ್ಡ್ ಮೂಲಕ ಪಡೆದುಕೊಂಡರೆ 1,000 ರೂ. ಗಳ ರಿಯಾಯಿತಿ ಸಿಗುತ್ತದೆ. 20,000ರೂ. ವರೆಗೆ ಎಕ್ಸ್‌ಚೇಂಜ್‌ ಆಫರ್‌ ಕೂಡ ನೀಡಲಾಗಿದೆ.

5 / 8

ಐಫೋನ್ 14 ಪ್ಲಸ್‌ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಈ ಫೋನ್ 6.7 ಇಂಚಿನ OLED ಡಿಸ್‌ಪ್ಲೇ ಹೊಂದಿದೆ. ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗ ಕೂಡ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

6 / 8

ಈ ಫೋನ್ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೆ ತುರ್ತು ಸಂದರ್ಭಕ್ಕೆ Emergency SOS via satellite ಫೀಚರ್ಸ್‌ ನೀಡಲಾಗಿದೆ. ಈ ಆಯ್ಕೆ ತುಂಬಾನೆ ಉಪಯುಕ್ತವಾಗಿದ್ದು ಕಷ್ಟದ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತದೆ.

7 / 8

ಇದರ ಜೊತೆಗೆ ಐಫೋನ್ 14 ಕೂಡ ಬಂಪರ್ ಡಿಸ್ಕೌಂಟ್​ನಲ್ಲಿ ಮಾರಾಟ ಆಗುತ್ತಿದೆ. ಐಫೋನ್ 14 128GB ಸ್ಟೋರೇಜ್ ಮಾಡೆಲ್ 79,900 ರೂಪಾಯಿಗೆ ಬಿಡುಗಡೆ ಆಗಿತ್ತು. ಇದೀಗ ಈ ಫೋನ್ 66,999 ರೂ. ಗೆ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಸಬಹುದು. ಶೇ. 16 ರಷ್ಟು ರಿಯಾಯಿತಿ ಘೋಷಿಸಲಾಗಿದೆ.

8 / 8

ಬ್ಯಾಂಕ್ ಆಫರ್ ಜೊತೆಗೆ 20,000 ರೂ. ವರೆಗಿನ ಎಕ್ಸ್​ಚೇಂಜ್ ಆಫರ್ ಕೂಡ ಘೋಷಿಸಲಾಗಿದೆ. ನೀವು ಐಫೋನ್ 11, ಐಫೋನ್ XR ಅಥವಾ ಐಫೋನ್ 12 ಉಪಯೋಗಿಸುತ್ತಿದ್ದರೆ ಬದಲಾಯಿಸಲು ಉತ್ತಮ ಸಮಯ. ಅಥವಾ ವಾಲೆಂಟೈನ್ಸ್​ ಡೇ ಪ್ರಯುಕ್ತ ಪ್ರೀತಿ ಪಾತ್ರರಿಗೆ ಸರ್​ಪ್ರೈಸ್ ಉಡುಗೊರೆ ನೀಡಬಹುದು.

Published On - 12:03 pm, Sat, 11 February 23

Loading...
Unable to load recommendations.
Follow Us