ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ತಲುಪಬಹುದು! ಅದು ಹೇಗೆ ಗೊತ್ತಾ?

Updated on: Jan 01, 2026 | 2:50 PM

ದಕ್ಷಿಣ ಕನ್ನಡ ಜನರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! ಬಹುನಿರೀಕ್ಷಿತ ವಂದೇ ಭಾರತ್ ರೈಲು ಬೆಂಗಳೂರು ಮತ್ತು ಮಂಗಳೂರು ನಡುವೆ ಶೀಘ್ರದಲ್ಲೇ ಸಂಚರಿಸಲಿದೆ. ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಈ ಅರೆ-ಹೈ-ಸ್ಪೀಡ್ ರೈಲು ಸೇವೆ ಆರಂಭವಾಗಲಿದ್ದು, 9-10 ಗಂಟೆಗಳ ಪ್ರಯಾಣವನ್ನು 5 ಗಂಟೆಗೆ ಇಳಿಸಲಿದೆ. ಇದು ಕರಾವಳಿ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.

1 / 7
ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ ವಂದೇ ಭಾರತ್ ರೈಲು ಬೆಂಗಳೂರು ಮತ್ತು ಮಂಗಳೂರು ಸಂಚಾರಿಸಲಿದೆ. ಈ ಮೂಲಕ ಕರಾವಳಿ ಪ್ರದೇಶಗಳ ಪುಣ್ಯಕ್ಷೇತ್ರಕ್ಕೆ ಹೋಗುವವರಿಗೆ ಇದು ಒಳ್ಳೆಯ ಪ್ರಯಾಣ ನೀಡಲಿದೆ.

2 / 7
ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ  55 ಕಿ.ಮೀ ಘಾಟ್ ವಿಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಯೋಜನೆಗೆ  ಚಾಲನೆ ನೀಡಲಾಗುವುದು. ಈಗಾಗಲೇ ಈ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿದೆ. ಅದಷ್ಟು ಬೇಗ ಈ ರೈಲು ಸಂಚಾರ ಮಾಡಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

3 / 7
ಸೆಮಿ ಹೈ-ಸ್ಪೀಡ್  ರೈಲು ಸಂಪೂರ್ಣವಾಗಿ ವಿದ್ಯುತ್ ಶಕ್ತಿಯಿಂದ ಚಲಿಸುವ ಕಾರಣ, ಇದು  ಪ್ರಯಾಣದ ವೇಗವನ್ನು ಹೆಚ್ಚಿಸುತ್ತದೆ. ಜತೆಗೆ, ಸ್ವಚ್ಛವಾದ ಗಾಳಿ, ಮಾಲಿನ್ಯರಹಿತ ಪರಿಸರವನ್ನು ಉಂಟು ಮಾಡುತ್ತದೆ. ಜತೆಗೆ ಇಂಧನ ಬಳಕೆಯನ್ನು ಕಡಿಮೆ ಮಾಡುತ್ತದೆ.

4 / 7
ಮಂಗಳೂರು ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾಗಿರುವ ವಂದೇ ಭಾರತ್ ರೈಲು ಓಡಾಟ ಆರಂಭಿಸುವ ಸಮಯ ಹತ್ತಿರವಾಗಿದೆ ಎಂದು ಅವರು ಎಕ್ಸ್​​ನಲ್ಲಿ ಪೋಸ್ಟ್​​​ ಮಾಡಿದ್ದಾರೆ.

5 / 7
ಸಾಮಾನ್ಯ ರೈಲುಗಳು ಈ ಮಾರ್ಗವನ್ನು ಕ್ರಮಿಸಲು ಸರಿಸುಮಾರು 9 ರಿಂದ 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ವಂದೇ ಭಾರತ್ ರೈಲು ಅದನ್ನು ಕೇವಲ 5 ಗಂಟೆಗಳವರೆಗೆ ಕಡಿಮೆ ಮಾಡಬಹುದು, ಇದು ವ್ಯಾಪಾರ ಪ್ರಯಾಣಿಕರು ಮತ್ತು ರಜಾದಿನಗಳಲ್ಲಿ ಈ ರೈಲು ಹೆಚ್ಚು ಸಹಾಯವಾಗಲಿದೆ.

6 / 7
ಸೆಮಿ ಹೈ-ಸ್ಪೀಡ್ ಸೇವೆಯು ದೈನಂದಿನ ಪ್ರಯಾಣಿಕರಿಗೆ ಹೆಚ್ಚು  ಪ್ರಯೋಜನವನ್ನು ನೀಡುತ್ತದೆ, ಪ್ರವಾಸೋದ್ಯಮ, ವ್ಯಾಪಾರ ಪ್ರವಾಸಗಳಿಗೆ ಇದೊಂದು ಉತ್ತಮ ಆಯ್ಕೆಯಾಗಿರುತ್ತದೆ

7 / 7
ಬೆಂಗಳೂರು, ತುಮಕೂರು, ಹಾಸನ ಮತ್ತು ಮಂಗಳೂರು ಎಂಬ ನಾಲ್ಕು ಜಿಲ್ಲೆಗಳಿಗೆ ಇದು ಅನುಕೂಲವಾಗಲಿದೆ. ಇದಕ್ಕೆ  50,000 ಕೋಟಿ ರೂ. ಬಜೆಟ್ ನೀಡಲಾಗಿದೆ

Published On - 11:32 am, Thu, 1 January 26