ಮತ್ತೆ ಬಿಗ್ ಬಾಸ್ ಮನೆಗೆ ಬಂದ ವರ್ತೂರು ಸಂತೋಷ್​; ಸಾಥ್ ನೀಡಿದ ತುಕಾಲಿ

Updated on: Dec 10, 2024 | 10:27 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋಗೆ ಕೆಲವು ಮಾಜಿ ಸ್ಪರ್ಧಿಗಳು ಕೂಡ ಬಂದಿದ್ದಾರೆ. ಡಿಸೆಂಬರ್ 10ರ ಸಂಚಿಕೆಯಲ್ಲಿ ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್ ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್​ 10’ ಮೂಲಕ ಭಾರಿ ಮನರಂಜನೆ ನೀಡಿದ ಅವರಿಬ್ಬರು ಈಗ ಅತಿಥಿಗಳಾಗಿ ಬಂದು ಹೋಗಿದ್ದಾರೆ.

1 / 5
ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸಿದ್ದರು. ಈಗ 11ನೇ ಸೀಸನ್​ಗೆ ಅವರು ಬಂದಿದ್ದಾರೆ. ಆದರೆ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ. ಬದಲಿಗೆ, ಗೆಸ್ಟ್ ಆಗಿ ಬಂದಿದ್ದಾರೆ. ಖುಷಿಯಾಗಿ ಕಾಲ ಕಳೆದಿದ್ದಾರೆ.

ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸಿದ್ದರು. ಈಗ 11ನೇ ಸೀಸನ್​ಗೆ ಅವರು ಬಂದಿದ್ದಾರೆ. ಆದರೆ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ. ಬದಲಿಗೆ, ಗೆಸ್ಟ್ ಆಗಿ ಬಂದಿದ್ದಾರೆ. ಖುಷಿಯಾಗಿ ಕಾಲ ಕಳೆದಿದ್ದಾರೆ.

2 / 5

10ನೇ ಸೀಸನ್​ನಲ್ಲಿ ತುಕಾಲಿ ಸಂತೋಷ್​ ಅವರು ವರ್ತೂರು ಸಂತೋಷ್​ ಜೊತೆ ಹೆಚ್ಚು ಕಾಲ ಕಳೆದಿದ್ದರು. ಅವರಿಬ್ಬರು ಜೋಡಿಯಾಗಿಯೇ ಇರುತ್ತಿದ್ದರು. ಈಗ ಗೆಸ್ಟ್​ ಆಗಿ ಕೂಡ ಜೋಡಿಯಾಗಿ ಬಂದಿದ್ದಾರೆ. ಅವರ ಉಪಸ್ಥಿತಿಯಿಂದ 11ನೇ ಸೀಸನ್​ ಸ್ಪರ್ಧಿಗಳಿಗೆ ಜೋಶ್ ಬಂದಿದೆ.

3 / 5

ಬಿಗ್ ಬಾಸ್ ಎಂದರೆ ಏನು ಎಂದು ಎಲ್ಲ ಸ್ಪರ್ಧಿಗಳಿಗೆ ವರ್ತೂರು ಸಂತೋಷ್ ವಿವರಿಸಿದ್ದಾರೆ. ಟಾಸ್ಕ್ ಯಾವ ರೀತಿ ಆಡಬೇಕು ಎಂದು ಕೂಡ ಅವರು ತಿಳಿಸಿ ಹೇಳಿದ್ದಾರೆ. ಬಳಿಕ ದೊಡ್ಮನೆಯ ಸದಸ್ಯರಿಂದ ನಾಮಿನೇಷನ್​ ಪ್ರಕ್ರಿಯೆಯನ್ನು ವರ್ತೂರು ಸಂತೋಷ್​ ಮಾಡಿಸಿದ್ದಾರೆ.

4 / 5

ಸ್ವಲ್ಪ ಸಮಯ ಮಾತ್ರ ಬಿಗ್ ಬಾಸ್ ಮನೆಯಲ್ಲಿ ಇರುವ ಅವಕಾಶವನ್ನು ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​ ಅವರಿಗೆ ನೀಡಲಾಗಿತ್ತು. ಸಮಯ ಮುಗಿದ ಬಳಿಕ ದೊಡ್ಮನೆಯಿಂದ ಹೊರಗೆ ತೆರಳುವಂತೆ ಅವರಿಗೆ ಬಿಗ್ ಬಾಸ್​ ಕಡೆಯಿಂದ ಆದೇಶ ಬಂತು.

5 / 5

‘ಪೇಮೆಂಟ್​ ಕೊಡದೇ ಇದ್ದರೂ ಪರವಾಗಿಲ್ಲ, ಇಲ್ಲೇ ಇರುತ್ತೇವೆ. ಅವಕಾಶ ಕೊಡಿ’ ಎಂದು ತುಕಾಲಿ ಸಂತೋಷ್​ ಮನವಿ ಮಾಡಿಕೊಂಡರು. ಅದಕ್ಕೆ ಬಿಗ್ ಬಾಸ್ ಒಪ್ಪಲಿಲ್ಲ. ಈ ಮನೆಯನ್ನು ತುಂಬ ಮಿಸ್​ ಮಾಡಿಕೊಳ್ಳುವುದಾಗಿ ವರ್ತೂರು ಸಂತೋಷ್​ ಅವರು ತಿಳಿಸಿದರು.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us