
ಟಾಲಿವುಡ್‌ನ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಜಪಾನ್ ಪ್ರವಾಸ ತೆರಳಿದ್ದಾರೆ. ತಮ್ಮ ಕುಟುಂಬದವರೊಂದಿಗೆ ಜಪಾನ್ ಪ್ರವಾಸಕ್ಕೆ ತೆರಳಿರುವ ಈ ಜೋಡಿ, ಅಲ್ಲಿನ ಸುಂದರ ನೆನಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿಪಾತ್ರರ ಜೊತೆ ಕಾಲ ಕಳೆದ ಮಧುರ ಕ್ಷಣಗಳ ಕೆಲವು ಕ್ಯೂಟ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ಜಪಾನ್ ಪ್ರವಾಸದ ಖುಷಿಯನ್ನು ಹಂಚಿಕೊಂಡಿರುವ ವಿಜಯ್ ದೇವರಕೊಂಡ, ನನ್ನ ನೆಚ್ಚಿನ ವ್ಯಕ್ತಿ ಜೊತೆ ಜೀವನವನ್ನು ಸಂಭ್ರಮಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಕುಟುಂಬದ ಜೊತೆ ಸುತ್ತಾಡಿದ ಕ್ಷಣಗಳನ್ನು ಅವರು ಫೋಟೋಗಳಲ್ಲಿ ವಿವರಿಸಿದ್ದಾರೆ.
ಈ ಪ್ರವಾಸದಲ್ಲಿ ಅವರು ರಶ್ಮಿಕಾ ಮಂದಣ್ಣ ಅವರ ಜೊತೆಗಿನ ರೊಮ್ಯಾಂಟಿಕ್ ಕ್ಷಣಗಳನ್ನು ಕೂಡ ಹಂಚಿಕೊಂಡಿದ್ದಾರೆ. ರಶ್ಮಿಕಾ ಹೆಗಲ ಮೇಲೆ ವಿಜಯ್ ತಲೆ ಇಟ್ಟು ಮಲಗಿದ್ದು ಇದಕ್ಕೆ ‘ಹೋಮ್’ ಎಂದು ಮುದ್ದಾಗಿ ಕ್ಯಾಪ್ಷನ್ ನೀಡಿದ್ದಾರೆ. ಇಬ್ಬರೂ ಒಟ್ಟಿಗೆ ಇರುವ ಮತ್ತೊಂದು ಅಫೆಕ್ಷನೇಟ್ ಫೋಟೋಗೆ ‘ಲವ್’ ಎಂದು ಬರೆದುಕೊಂಡಿದ್ದು, ಈ ಕ್ಯೂಟ್ ಚಿತ್ರಗಳು ಇಬ್ಬರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಸುಂದರವಾಗಿ ಬಿಂಬಿಸುತ್ತಿವೆ.
ವಿಜಯ್ ಹಾಗೂ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಸದಾ ತಮ್ಮ ಪ್ರವಾಸದ ಒಂದಲ್ಲ ಒಂದು ವಿಶೇಷ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ದೀಪಾವಳಿ ಹಬ್ಬದ ಸಂಭ್ರಮದಲ್ಲೂ ಜಪಾನ್‌ನಲ್ಲೇ ವಿಶೇಷ ಪೂಜೆ ಹಾಗೂ ಹೋಮ ನೆರವೇರಿಸಿದ್ದರು. ದೇವರಕೊಂಡ ಕುಟುಂಬದ ಜೊತೆ ದೀಪಾವಳಿ ಆಚರಿಸಿದ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದರು.
ಸಿನಿಮಾ ಲೋಕದಲ್ಲಿ ಸದಾ ಬ್ಯುಸಿಯಾಗಿರುವ ಈ ಸ್ಟಾರ್ ಜೋಡಿ, ತಮ್ಮ ಬಿಡುವಿನ ವೇಳೆಯಲ್ಲಿ ಈ ರೀತಿ ಫ್ಯಾಮಿಲಿ ಜೊತೆ ವೇಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಜಪಾನ್ ಪ್ರವಾಸದ ಈ ಸುಂದರ ಚಿತ್ರಗಳು ವೈರಲ್ ಆಗಿ ಗಮನಸೆಳೆದಿವೆ. ಅಭಿಮಾನಿಗಳು ಈ ಜೋಡಿಯ ಕ್ಯೂಟ್ ಫೋಟೋಗಳಿಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.