WhatsApp: ವಾಟ್ಸ್ಆ್ಯಪ್ನಲ್ಲಿ ಬರುತ್ತಿದೆ ಬಳಕೆದಾರರಿಗೆ ಉಪಯುಕ್ತವಾದ ಅದ್ಭುತ ವೈಶಿಷ್ಟ್ಯ
ವಾಟ್ಸ್ಆ್ಯಪ್ ಚಾಟ್ಬಾಕ್ಸ್ನಲ್ಲಿರುವ ಡಾಕ್ಯುಮೆಂಟ್ ಆಯ್ಕೆಯಲ್ಲಿ ಹೊಸ ಅಪ್ಡೇಟ್ ನೀಡಲು ಮುಂದಾಗಿದೆ. ಇದರ ಹೆಸರು ಡಾಕ್ಯುಮೆಂಟ್ ಪ್ರೀವ್ಯೂ ಫೀಚರ್ (Document Preview feature).
1 / 6
ಒಂದರ ಹಿಂದೆ ಒಂದರಂತೆ ಹೊಸ ಫೀಚರ್ಗಳನ್ನು ಬಿಡುಗಡೆ ಮಾಡಲು ಮೆಟಾ (Meta) ಒಡೆತನದ ವಾಟ್ಸ್ಆ್ಯಪ್ ತುದಿಗಾಲಿನಲ್ಲಿ ನಿಂತಿದೆ. ಈಗಾಗಲೇ ಅನೇಕ ಅಪ್ಡೇಟ್ಗಳು ಪರೀಕ್ಷಾ ಹಂತದಲ್ಲಿದ್ದು ವಾಟ್ಸ್ಆ್ಯಪ್ (WhatsApp) ಬೇಟಾ ಇನ್ಫೋ ಒಂದೊಂದೆ ವರದಿ ಮಾಡುತ್ತಿದೆ. ಇದೀಗ ವಾಟ್ಸ್ಆ್ಯಪ್ ಚಾಟ್ಬಾಕ್ಸ್ನಲ್ಲಿರುವ ಡಾಕ್ಯುಮೆಂಟ್ ಆಯ್ಕೆಯಲ್ಲಿ ಹೊಸ ಅಪ್ಡೇಟ್ ನೀಡಲು ಮುಂದಾಗಿದೆ.
2 / 6
ಇದರ ಹೆಸರು ಡಾಕ್ಯುಮೆಂಟ್ ಪ್ರೀವ್ಯೂ ಫೀಚರ್ (Document Preview feature). ಆಂಡ್ರಾಯ್ಡ್ ಬೇಟಾ ಬಳಕೆದಾರರಿಗಾಗಿ ಈ ಫೀಚರ್ ಪರೀಕ್ಷಾ ಹಂತದಲ್ಲಿದೆ. 2.25.5.11 ಬೇಟಾ ವರ್ಷನ್ನಲ್ಲಿ ಈ ಆಯ್ಕೆ ಸಿಗಲಿದೆಯಂತೆ.
3 / 6
ವಾಟ್ಸ್ಆ್ಯಪ್ ಬೇಟಾ ಇನ್ಫೋ ಫೋಟೋ ಒಂದನ್ನು ಹಂಚಿಕೊಂಡಿದ್ದು ಇದರ ಪ್ರಕಾರ, ಪೋಟೋ ಅಥವಾ ವಿಡಿಯೋ ಡಾಕ್ಯುಮೆಂಟ್ ಮೂಲಕ ಸೆಂಡ್ ಮಾಡಿದರೆ ರಿಸಿವರ್ಗೆ ಪ್ರೀವ್ಯೂನಲ್ಲಿ ಕಾಣಿಸುತ್ತದೆ. ಈಗಾಗಲೇ ಈ ಆಯ್ಕೆ ಫೋಟೋ ಮತ್ತು ವಿಡಿಯೋಕ್ಕೆ ಇದೆ. ಸದ್ಯದಲ್ಲೇ ಇದು ಡಾಕ್ಯುಮೆಂಟ್ಗೂ ಬರಲಿದೆಯಂತೆ.
4 / 6
ಇನ್ನು ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ವಿಶೇಷ ಫೀಚರ್ ಒಂದು ಸೇರ್ಪಡೆಯಾಗಲಿದೆಯಂತೆ. ಅಂದರೆ ಗ್ರೂಪ್ ಕಾಲ್ನಲ್ಲಿ ಮಾತನಾಡುತ್ತಿರುವಾಗ ಕರೆಯಲ್ಲಿರುವ ಸದಸ್ಯರು ಯಾರು ಯಾರು ಎಂಬುದು ಚೌಕಾಕಾರದ ಬಾಕ್ಸ್ನಲ್ಲಿ ಕಾಣಿಸಲಿದೆ.
5 / 6
ಇದರ ಜೊತೆಗೆ ವಾಟ್ಸ್ಆ್ಯಪ್ ಪರಿಚಯಿಸಲು ಹೊರಟಿರುವ ಮತ್ತೊಂದು ಹೊಸ ಅಪ್ಡೇಟ್ ಕವರ್ ಫೋಟೋ. ಹೌದು, ನೀವು ಫೇಸ್ಬುಕ್ನಲ್ಲಿ ಕವರ್ ಫೋಟೋ ಆಯ್ಕೆಯನ್ನು ನೋಡಿರುತ್ತೀರಿ. ಸದ್ಯದಲ್ಲೇ ಇದೇರೀತಿಯ ಆಯ್ಕೆ ವಾಟ್ಸ್ಆ್ಯಪ್ನಲ್ಲೂ ಸಿಗಲಿದೆ.
6 / 6
ವಾಟ್ಸ್ಆ್ಯಪ್ ಬೇಟಾಇನ್ಫೋ ವರದಿ ಪ್ರಕಾರ, ಈ ಆಯ್ಕೆ ವಾಟ್ಸ್ಆ್ಯಪ್ ಪ್ರೊಫೈಲ್ನಲ್ಲಿ ಕಾಣಲಿದೆಯಂತೆ. ಇದಕ್ಕಾಗಿ ನೀವು ಬಿಸ್ನೆಸ್ ಸೆಟ್ಟಿಂಗ್ನಲ್ಲಿ ಕೆಲವು ಬದಲಾವಣೆ ಮಾಡಬೇಕಷ್ಟೆ. ಕವರ್ ಫೋಟೋ ಹಾಕಬೇಕೆಂದರೆ ನಿಮ್ಮ ಪ್ರೊಫೈಲ್ನಲ್ಲಿ ಕ್ಯಾಮೆರಾ ಬಟನ್ ಕಾಣಿಸುತ್ತದಂತೆ.
Published On - 8:24 am, Tue, 22 February 22