Tea Recipes: ಚುಮುಚುಮು ಚಳಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ 5 ಸ್ಪೆಷಲ್ ಚಹಾ ಸೇವಿಸಿ ನೋಡಿ

|

Updated on: Jan 24, 2023 | 6:54 AM

Health Tips: ಚಳಿಗಾಲದ ಮುಂಜಾನೆಯನ್ನು ಈ 5 ಆರೋಗ್ಯಕರ ಚಹಾದ ಮೂಲಕ ಆರಂಭಿಸಿದರೆ ನಿಮ್ಮ ದಿನವೂ ಫ್ರೆಶ್ ಆಗಿರುತ್ತದೆ, ಆರೋಗ್ಯವೂ ಚೆನ್ನಾಗಿರುತ್ತದೆ.

1 / 6
ಪ್ರಪಂಚದಾದ್ಯಂತ ಜನರು ನಿಧಾನವಾಗಿ ಉತ್ತಮ ಆರೋಗ್ಯದ ಪ್ರಾಮುಖ್ಯತೆ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಿದ್ದಾರೆ. ಉತ್ತಮ ಆರೋಗ್ಯ ಬೇಕೆಂದರೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳ ಅಗತ್ಯವಿರುತ್ತದೆ. ವ್ಯಾಯಾಮ ಮಾಡುವುದು ಮತ್ತು ಆ್ಯಕ್ಟಿವ್ ಆಗಿರುವುದು ನೀವು ಆರೋಗ್ಯವಾಗಿರಲು ಬಹಳ ಮುಖ್ಯ. ಆದರೆ, ಇದರ ಜೊತೆಗೆ ಸೇವಿಸುವ ಆಹಾರ ಕೂಡ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಚಳಿಗಾಲದ ಮುಂಜಾನೆಯನ್ನು ಈ 5 ಆರೋಗ್ಯಕರ ಚಹಾದ ಮೂಲಕ ಆರಂಭಿಸಿದರೆ ನಿಮ್ಮ ದಿನವೂ ಫ್ರೆಶ್ ಆಗಿರುತ್ತದೆ, ಆರೋಗ್ಯವೂ ಚೆನ್ನಾಗಿರುತ್ತದೆ.

ಪ್ರಪಂಚದಾದ್ಯಂತ ಜನರು ನಿಧಾನವಾಗಿ ಉತ್ತಮ ಆರೋಗ್ಯದ ಪ್ರಾಮುಖ್ಯತೆ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಿದ್ದಾರೆ. ಉತ್ತಮ ಆರೋಗ್ಯ ಬೇಕೆಂದರೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳ ಅಗತ್ಯವಿರುತ್ತದೆ. ವ್ಯಾಯಾಮ ಮಾಡುವುದು ಮತ್ತು ಆ್ಯಕ್ಟಿವ್ ಆಗಿರುವುದು ನೀವು ಆರೋಗ್ಯವಾಗಿರಲು ಬಹಳ ಮುಖ್ಯ. ಆದರೆ, ಇದರ ಜೊತೆಗೆ ಸೇವಿಸುವ ಆಹಾರ ಕೂಡ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಚಳಿಗಾಲದ ಮುಂಜಾನೆಯನ್ನು ಈ 5 ಆರೋಗ್ಯಕರ ಚಹಾದ ಮೂಲಕ ಆರಂಭಿಸಿದರೆ ನಿಮ್ಮ ದಿನವೂ ಫ್ರೆಶ್ ಆಗಿರುತ್ತದೆ, ಆರೋಗ್ಯವೂ ಚೆನ್ನಾಗಿರುತ್ತದೆ.

2 / 6
ಅರಿಶಿನದ ಚಹಾ: 
ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಗುಣಪಡಿಸುವ ಸೂಪರ್‌ಫುಡ್. ಅರಿಶಿನದ ಪ್ರಯೋಜನಗಳು ಹಲವು. ಅಡುಗೆಮನೆಯಲ್ಲಿ ಸದಾ ಇರುವ ಅರಿಶಿನದಿಂದ ಬೆಳಗ್ಗೆ ಚಹಾ ತಯಾರಿಸಿ ಕುಡಿದರೆ ಸಾಕಷ್ಟು ಉಪಯೋಗಗಳಿವೆ. ಇದು ಕೆಫೀನ್ ಮುಕ್ತ ಪಾನೀಯವಾಗಿದೆ. ಅರಿಶಿನದ ಚಹಾವನ್ನು ಬೆಳಗ್ಗೆ ಕುಡಿಯುವುದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ.

ಅರಿಶಿನದ ಚಹಾ: ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಗುಣಪಡಿಸುವ ಸೂಪರ್‌ಫುಡ್. ಅರಿಶಿನದ ಪ್ರಯೋಜನಗಳು ಹಲವು. ಅಡುಗೆಮನೆಯಲ್ಲಿ ಸದಾ ಇರುವ ಅರಿಶಿನದಿಂದ ಬೆಳಗ್ಗೆ ಚಹಾ ತಯಾರಿಸಿ ಕುಡಿದರೆ ಸಾಕಷ್ಟು ಉಪಯೋಗಗಳಿವೆ. ಇದು ಕೆಫೀನ್ ಮುಕ್ತ ಪಾನೀಯವಾಗಿದೆ. ಅರಿಶಿನದ ಚಹಾವನ್ನು ಬೆಳಗ್ಗೆ ಕುಡಿಯುವುದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ.

3 / 6
ಕ್ಯಾಮೊಮೈಲ್ ಚಹಾ:
ಕ್ಯಾಮೊಮೈಲ್ ಒಂದು ಬಗೆಯ ಹೂವು. ಈ ಹೂವಿನಿಂದ ತಯಾರಿಸಿದ ಚಹಾ ನಿಮ್ಮ ದಿನವನ್ನು ರೀಫ್ರೆಶ್ ಆಗಿಡುತ್ತದೆ. ಈ ಚಹಾದಿಂದ ಉತ್ತಮ ನಿದ್ರೆ ಬರುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ಇದು ಮುಟ್ಟಿನ ನೋವು, ಆಸ್ಟಿಯೊಪೊರೋಸಿಸ್ ಮತ್ತು ಶೀತದ ಲಕ್ಷಣಗಳಿಗೆ ಸಹ ಸಹಾಯ ಮಾಡುತ್ತದೆ. ಬೆಳಗ್ಗೆ ಮಾತ್ರವಲ್ಲದೆ ನೀವು ಮಧ್ಯಾಹ್ನದ ಸಮಯದಲ್ಲಿ ಅಥವಾ ಮಲಗುವ ಸಮಯಕ್ಕೆ ಕೆಲವು ಗಂಟೆಗಳ ಮೊದಲು ಒಂದು ಕಪ್ ಕ್ಯಾಮೊಮೈಲ್ ಚಹಾವನ್ನು ಸೇವಿಸಬಹುದು.

ಕ್ಯಾಮೊಮೈಲ್ ಚಹಾ: ಕ್ಯಾಮೊಮೈಲ್ ಒಂದು ಬಗೆಯ ಹೂವು. ಈ ಹೂವಿನಿಂದ ತಯಾರಿಸಿದ ಚಹಾ ನಿಮ್ಮ ದಿನವನ್ನು ರೀಫ್ರೆಶ್ ಆಗಿಡುತ್ತದೆ. ಈ ಚಹಾದಿಂದ ಉತ್ತಮ ನಿದ್ರೆ ಬರುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ಇದು ಮುಟ್ಟಿನ ನೋವು, ಆಸ್ಟಿಯೊಪೊರೋಸಿಸ್ ಮತ್ತು ಶೀತದ ಲಕ್ಷಣಗಳಿಗೆ ಸಹ ಸಹಾಯ ಮಾಡುತ್ತದೆ. ಬೆಳಗ್ಗೆ ಮಾತ್ರವಲ್ಲದೆ ನೀವು ಮಧ್ಯಾಹ್ನದ ಸಮಯದಲ್ಲಿ ಅಥವಾ ಮಲಗುವ ಸಮಯಕ್ಕೆ ಕೆಲವು ಗಂಟೆಗಳ ಮೊದಲು ಒಂದು ಕಪ್ ಕ್ಯಾಮೊಮೈಲ್ ಚಹಾವನ್ನು ಸೇವಿಸಬಹುದು.

4 / 6
ದಾಸವಾಳದ ಚಹಾ:
ದಾಸವಾಳವನ್ನು ಸೌಂದರ್ಯ ಕಾಳಜಿಗೆ, ತಲೆಕೂದಲ ಸೌಂದರ್ಯಕ್ಕೆ ಮತ್ತಿತರ ರೀತಿಯಲ್ಲಿ ಬಳಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ದಾಸವಾಳದಿಂದ ತಯಾರಿಸಲಾದ ಚಹಾ ಸೇವಿಸುವುದರಿಂದ ಆರೋಗ್ಯಕ್ಕೆ ನಾನಾ ರೀತಿಯ ಉಪಯೋಗಗಳಿವೆ. ದಾಸವಾಳದ ಚಹಾವು ಕೆಲವು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಇಳಿಸಿಕೊಳ್ಳುವಲ್ಲಿ ಸಹ ಸಹಾಯಕವಾಗಿದೆ. ದಾಸವಾಳದ ಚಹಾವನ್ನು ತಯಾರಿಸುವುದು ಕೂಡ ತುಂಬಾ ಸುಲಭ.

ದಾಸವಾಳದ ಚಹಾ: ದಾಸವಾಳವನ್ನು ಸೌಂದರ್ಯ ಕಾಳಜಿಗೆ, ತಲೆಕೂದಲ ಸೌಂದರ್ಯಕ್ಕೆ ಮತ್ತಿತರ ರೀತಿಯಲ್ಲಿ ಬಳಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ದಾಸವಾಳದಿಂದ ತಯಾರಿಸಲಾದ ಚಹಾ ಸೇವಿಸುವುದರಿಂದ ಆರೋಗ್ಯಕ್ಕೆ ನಾನಾ ರೀತಿಯ ಉಪಯೋಗಗಳಿವೆ. ದಾಸವಾಳದ ಚಹಾವು ಕೆಲವು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಇಳಿಸಿಕೊಳ್ಳುವಲ್ಲಿ ಸಹ ಸಹಾಯಕವಾಗಿದೆ. ದಾಸವಾಳದ ಚಹಾವನ್ನು ತಯಾರಿಸುವುದು ಕೂಡ ತುಂಬಾ ಸುಲಭ.

5 / 6
ಶುಂಠಿ ಚಹಾ:
ನೀವು ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ 1 ಕಪ್ ಅಥವಾ 2 ಶುಂಠಿ ಚಹಾವನ್ನು ಸೇವಿಸಿರಬಹುದು. ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ನೆಗಡಿಗೆ ಚಿಕಿತ್ಸೆ ನೀಡುವಾಗ ಪ್ರತಿಯೊಬ್ಬರ ಮನಸ್ಸಿಗೆ ಬರುವ ಚಹಾ ಇದು. ಶುಂಠಿ ಚಹಾವು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ವಾಕರಿಕೆಗೆ ಪರಿಣಾಮಕಾರಿ ಪರಿಹಾರವಾಗಿದೆ. ನೀವು ತಾಜಾ ಶುಂಠಿಯೊಂದಿಗೆ ಒಂದು ಕಪ್ ಅನ್ನು ತಯಾರಿಸಬಹುದು.

ಶುಂಠಿ ಚಹಾ: ನೀವು ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ 1 ಕಪ್ ಅಥವಾ 2 ಶುಂಠಿ ಚಹಾವನ್ನು ಸೇವಿಸಿರಬಹುದು. ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ನೆಗಡಿಗೆ ಚಿಕಿತ್ಸೆ ನೀಡುವಾಗ ಪ್ರತಿಯೊಬ್ಬರ ಮನಸ್ಸಿಗೆ ಬರುವ ಚಹಾ ಇದು. ಶುಂಠಿ ಚಹಾವು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ವಾಕರಿಕೆಗೆ ಪರಿಣಾಮಕಾರಿ ಪರಿಹಾರವಾಗಿದೆ. ನೀವು ತಾಜಾ ಶುಂಠಿಯೊಂದಿಗೆ ಒಂದು ಕಪ್ ಅನ್ನು ತಯಾರಿಸಬಹುದು.

6 / 6
ಊಲಾಂಗ್ ಚಹಾ:
ಊಲಾಂಗ್ ಚಹಾವು ಪಾಲಿಫಿನಾಲ್‌ಗಳನ್ನು ಹೊಂದಿದ್ದು ಇದು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಹೃದಯದ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಹಸಿರು ಚಹಾದ ಸುವಾಸನೆಯ ಪ್ರೊಫೈಲ್ ಅನ್ನು ಆನಂದಿಸಿದರೆ ಮತ್ತು ದೃಢವಾದ ಏನನ್ನಾದರೂ ಪ್ರಯತ್ನಿಸಲು ಬಯಸಿದರೆ, ಊಲಾಂಗ್ ಚಹಾವನ್ನು ಟ್ರೈ ಮಾಡಬಹುದು.

ಊಲಾಂಗ್ ಚಹಾ: ಊಲಾಂಗ್ ಚಹಾವು ಪಾಲಿಫಿನಾಲ್‌ಗಳನ್ನು ಹೊಂದಿದ್ದು ಇದು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಹೃದಯದ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಹಸಿರು ಚಹಾದ ಸುವಾಸನೆಯ ಪ್ರೊಫೈಲ್ ಅನ್ನು ಆನಂದಿಸಿದರೆ ಮತ್ತು ದೃಢವಾದ ಏನನ್ನಾದರೂ ಪ್ರಯತ್ನಿಸಲು ಬಯಸಿದರೆ, ಊಲಾಂಗ್ ಚಹಾವನ್ನು ಟ್ರೈ ಮಾಡಬಹುದು.