ಮಾತಿಗೆ ಬೆಲೆ ಬರಬೇಕಾದರೆ ಭಾಷೆ ಬಹಳ ಮುಖ್ಯ; ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

| Updated By: sandhya thejappa

Updated on: Apr 12, 2022 | 10:52 AM

ಸಂದರ್ಭಕ್ಕನುಗುಣವಾಗಿ ಕ್ರಮ ಕೈಗೊಂಡಿದ್ದೇವೆ ಎಂದು ಮಾತನಾಡಿದ ಸಿಎಂ, ಶಿವಮೊಗ್ಗ ಘಟನೆಯಾದಾಗ ಕ್ರಮ ತೆಗೆದುಕೊಂಡಿದ್ದೇವೆ. ಧಾರವಾಡ ಘಟನೆ ಆದಾಗ ಕ್ರಮ ತೆಗೆದುಕೊಂಡಿದ್ದೇವೆ. ಕೋಲಾರ ಘಟನೆ ಸಂದರ್ಭ ಕ್ರಮ ತೆಗೆದುಕೊಂಡಿದ್ದೇವೆ.

ಮಾತಿಗೆ ಬೆಲೆ ಬರಬೇಕಾದರೆ ಭಾಷೆ ಬಹಳ ಮುಖ್ಯ; ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು
Follow us on

ಉಡುಪಿ: ಜಿಲ್ಲೆ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ತಿರುಗೇಟು ನೀಡಿದರು. ‘ನಾವು ಸರ್ಕಾರದಲ್ಲಿರುವವರು, ಕೆಲಸ ಮಾಡುವ ಸ್ಥಳದಲ್ಲಿದ್ದೇವೆ. ಮಾತಿಗೆ ಬೆಲೆ ಬರಬೇಕಾದರೆ ಭಾಷೆ ಬಹಳ ಮುಖ್ಯ. ಸಿದ್ದರಾಮಯ್ಯ, ಕುಮಾರಸ್ವಾಮಿಗೆ ತೊಂದರೆಯಾಗಿದೆ. ನನ್ನ ಮೌನ ಅವರಿಗೆ ತೊಂದರೆ ಆದರೆ ನಾನೇನು ಮಾಡಲಿ. ಸಿದ್ದರಾಮಯ್ಯ, ಹೆಚ್​ಡಿಕೆ ಬಾಯಿಗೆ ಬಂದಂಗೆ ಮಾತಾಡ್ತಾರೆ’ ಎಂದು ಮಣಿಪಾಲದಲ್ಲಿ ಸಿಎಂ ಹೇಳಿಕೆ ನೀಡಿದ್ದಾರೆ.

ಸಂದರ್ಭಕ್ಕನುಗುಣವಾಗಿ ಕ್ರಮ ಕೈಗೊಂಡಿದ್ದೇವೆ ಎಂದು ಮಾತನಾಡಿದ ಸಿಎಂ, ಶಿವಮೊಗ್ಗ ಘಟನೆಯಾದಾಗ ಕ್ರಮ ತೆಗೆದುಕೊಂಡಿದ್ದೇವೆ. ಧಾರವಾಡ ಘಟನೆ ಆದಾಗ ಕ್ರಮ ತೆಗೆದುಕೊಂಡಿದ್ದೇವೆ. ಕೋಲಾರ ಘಟನೆ ಸಂದರ್ಭ ಕ್ರಮ ತೆಗೆದುಕೊಂಡಿದ್ದೇವೆ. ಇವರ ಹಾಗೆ ಓಲೈಸುವ ರಾಜಕಾರಣ ಮಾಡಿಲ್ಲ, ಮಾಡದು ಇಲ್ಲ ಹೇಳಿದರು.

ಅಭಿಯಾನಕ್ಕೆ ಸಿಎಂ ಚಾಲನೆ:
ಇನ್ನು ಉಡುಪಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಆರಂಭಿಸಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದರು. ನಿಸರ್ಗದ ರಕ್ಷಣೆಗಾಗಿ ಸದ್ಗುರುರಿಂದ ದೊಡ್ಡ ಅಭಿಯಾನ ಕೈಗೊಂಡಿದ್ದಾರೆ. ಚಾಲನೆ ನೀಡಿದ ಮಾತನಾಡಿದ ಸಿಎಂ, ತಾಯಿ ಗರ್ಭ ಮತ್ತು ಭೂಗರ್ಭ ಬಹಳ ಪವಿತ್ರವಾದದ್ದು. ಭೂಗರ್ಭವನ್ನು ಕಾಪಾಡಲು ಮಣ್ಣಿನ ರಕ್ಷಣೆ ಅವಶ್ಯಕ. ಭೂಮಿ, ಮಣ್ಣು ಕಾಪಾಡುವುದು ಮನುಷ್ಯನ ಆದ್ಯ ಕರ್ತವ್ಯ ಎಂದು ನುಡಿದರು.

ಇದೇ ವೇಳೆ ಕೊವಿಡ್ ಮಾರ್ಗಸೂಚಿ ಬಗ್ಗೆಯೂ ಮಾತನಾಡಿದರು. ಮುಂಜಾಗರೂಕತೆಯಿಂದ ಕ್ರಮವಾಗಿ ಕೈಗೊಳ್ತಿದ್ದೇವೆ. ನಿಯಮ ಪಾಲಿಸಿದರೆ ಯಾವುದೇ ಪರಿಸ್ಥಿತಿ ಎದುರಿಸಬಹುದು ಎಂದರು.

ಇದನ್ನೂ ಓದಿ

ಜೆಡಿಎಸ್​ಗೆ ಬಹುಮತ ಕೊಡಿ, 5 ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುತ್ತೇನೆ; ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಇ-ಮೇಲ್ ಪ್ರಕರಣ; VPN ಬಳಸಿ ಮೇಲ್ ಮಾಡಿರೋ ಶಂಕೆ

Published On - 10:48 am, Tue, 12 April 22