ಹಾಸನ, ಫೆ.03: ಮಂಡ್ಯ ತಾಲೂಕಿನ ಕೆರಗೋಡ ಗ್ರಾಮದಲ್ಲಿ ಹನುಮ ಧ್ವಜ ತೆರವು ಗಲಾಟೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಹೆಚ್ಡಿ ಕುಮಾರಸ್ವಾಮಿ(HD Kumaraswamy ) ಅವರು ಕೇಸರಿ ಶಾಲು (saffron shawl) ಧರಿಸಿದ್ದ ಹಿನ್ನಲೆ ಸ್ವತಃ ಹೆಚ್ಡಿ ದೇವೇಗೌಡ (HD Devegowda) ಖಂಡಿಸಿದ್ದರು. ಈ ಕುರಿತು ಹಾಸನದಲ್ಲಿ ಮಾಜಿ ಶಾಸಕ ಸಿ.ಟಿ ರವಿ(CT Ravi) ಮಾತನಾಡಿ ‘ಅವರ ಪಕ್ಷದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕೇಸರಿ ಕೇವಲ ಬಣ್ಣ ಮಾತ್ರ ಅಲ್ಲ, ಅದಕ್ಕೆ ಸಾವಿರ ವರ್ಷದ ಪರಂಪರೆ ಇದೆ ಎಂದಿದ್ದಾರೆ.
ಇನ್ನು ಅರ್ಜುನನ ಧ್ವಜದ ಬಣ್ಣವೂ ಕೇಸರಿ, ಋಷಿಮುನಿಗಳು ತ್ಯಾಗದ ಸಂಕೇತವಾಗಿ ಬಳಸಿದರೆ, ಕ್ಷತ್ರಿಯರು ಕೇಸರಿಯನ್ನು ಶೌರ್ಯದ ಸಂಕೇತವಾಗಿ ಬಳಸಿದ್ದರು. ಕೇಸರಿ ಬಗ್ಗೆ ನಮಗೇನು ಸಂಕೋಚ ಇಲ್ಲ, ನಮಗೆ ಹೆಮ್ಮೆ ಇದೆ. ಕೇಸರಿ ಶಾಲು ಹಾಕಿದ್ದಕ್ಕೆ ಕುಮಾರಸ್ವಾಮಿ ಸಂಕೋಚ ಪಡಬೇಕಿಲ್ಲ. ಅದು ಅಲ್ಲದೇ ಅಂದು ಕೇವಲ ರಾಜಕೀಯ ಪಕ್ಷದ ನಾಯಕರು ಭಾಗವಹಿಸಿರಲಿಲ್ಲ,
ಹಿಂದೂ ಸಂಘಟನೆಗಳು ಕರೆಕೊಟ್ಟಿದ್ದ ಪಾದಯಾತ್ರೆಯಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ:ನಾನು ಕೇಸರಿ ಶಾಲು ಹಾಕುವುದಿಲ್ಲ, ಕುಮಾರಸ್ವಾಮಿ ಹಾಕಿದ್ದನ್ನು ಪರೋಕ್ಷವಾಗಿ ಖಂಡಿಸಿದ ದೇವೇಗೌಡ
ಕುಮಾರಸ್ವಾಮಿ ಕೇಸರಿ ಶಾಲು ಹಾಕಿದ್ದ ಕುರಿತು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ದೇವೇಗೌಡ, ‘ ಅವರು ಕೇಸರಿ ಶಾಲು ಹಾಕಬಾರದಿತ್ತು, ನಮ್ಮ ಪಕ್ಷದ ಶಾಲು ಹಾಕಬಹುದಿತ್ತು ಎಂದು ಹೇಳಿದ್ದರು. ಈ ಮೂಲಕ ಕುಮಾರಸ್ವಾಮಿ ಕೇಸರಿ ಶಾಲು ಹಾಕಿರುವುದನ್ನು ಪರೋಕ್ಷವಾಗಿ ಖಂಡಿಸಿದ್ದರು. ಅಷ್ಟೆ ಅಲ್ಲ, ಪ್ರಧಾನಿ ಜೊತೆಗೆ ಹೋದಾಗಲೂ ಕೂಡ ನನ್ನ ಪಕ್ಷದ ಶಾಲು ಹಾಕುತ್ತೇನೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Sat, 3 February 24