ಉಚಿತ ಬಸ್ ಪಾಸ್ ಘೋಷಣೆ ಆಗಿದ್ದೆ ಕಂಡಕ್ಟರ್​​, ಡ್ರೈವರ್ಸ್​​​ ಫುಲ್​ ಖುಷ್​: ವಜಾಗೊಂಡ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡ್ತಾರಾ ರಾಮಲಿಂಗಾ ರೆಡ್ಡಿ?

|

Updated on: Jun 06, 2023 | 5:05 PM

ಕಾಂಗ್ರೆಸ್ ಸರ್ಕಾರದ ಶಕ್ತಿಯೋಜನೆ ಸಮರ್ಪಕವಾಗಿ ಜಾರಿಯಾಗಬೇಕಂದ್ರೆ ಚಾಲಕರು ಮತ್ತು ಕಂಡಕ್ಟರ್​ಗಳು ಬೇಕು. ಹಾಗಾಗಿ ವಜಾಗೊಂಡ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸಿಹಿ ಸುದ್ದಿ ನೀಡುತ್ತಾರೆ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪಾಸ್ ಘೋಷಣೆ ಆಗಿದ್ದೆ, ಕಂಡಕ್ಟರ್​ ಮತ್ತು ಡ್ರೈವರ್​ಗಳು ಫುಲ್​ ಸಂತೋಷಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಶಕ್ತಿಯೋಜನೆ ಸಮರ್ಪಕವಾಗಿ ಜಾರಿಯಾಗಬೇಕಂದ್ರೆ ಚಾಲಕರು ಮತ್ತು ಕಂಡಕ್ಟರ್​ಗಳು ಬೇಕು. ಹಾಗಾಗಿ ಅವರುಗಳು ಹ್ಯಾಪಿ ಆಗಿದ್ದು, ವಜಗೊಂಡ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸಿಹಿ ಸುದ್ದಿ ನೀಡುತ್ತಾರೆ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಈಗಾಗಲೇ ಸಾರಿಗೆ ಸಂಘಟನೆಗಳು ನೂತನ ಸಾರಿಗೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ನೌಕರರು ಎರಡು ಬಾರಿ ಮುಷ್ಕರ ‌ಮಾಡಿದ್ದರು. ಆ ವೇಳೆ ನಾಲ್ಕು ನಿಗಮದ ಸಾವಿರಾರು ನೌಕರರನ್ನು ವಜಾ ಮಾಡಲಾಗಿತ್ತು. ಅದರಲ್ಲಿ ತಮಗೆ ಬೇಕಾದ ನೌಕರರನ್ನು ಮಾತ್ರ ಕೆಲಸ ವಾಪಸ್ ತೆಗೆದುಕೊಂಡಿದ್ದರು. ಬಾಕಿ ಉಳಿದಿರುವ 300 ರಿಂದ 400 ಜನ ಸಾರಿಗೆ ನೌಕರರನ್ನು ವಾಪಸ್ ತೆಗೆದುಕೊಂಡಿಲ್ಲ. ಹೀಗಾಗಿ ಈಗಾಗಲೇ ಸಾರಿಗೆ ಸಂಘಟನೆಗಳು ನೂತನ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ಮಾಡಿ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಲು ಬಂದಿಲ್ಲ ಅಧಿಕೃತ ಮಾಹಿತಿ: ಗೃಹಜ್ಯೋತಿ ಯೋಜನೆಗೆ ಬೇಕು ಕಾಲಾವಕಾಶ

ನಾವು ಕೆಲಸ ಮಾಡಲು ಸಿದ್ಧರಿದ್ದೇವೆ

ಈ ಕುರಿತಾಗಿ ವಜಾಗೊಂಡ ಸಾರಿಗೆ ನೌಕರ ರಾಮು ಟಿವಿ9 ಜೊತೆ ಮಾತನಾಡಿದ್ದು, ಕಾಂಗ್ರೆಸ್ ಸರ್ಕಾರ ಶಕ್ತಿಯೋಜನೆ ಸಮರ್ಪಕವಾಗಿ ಜಾರಿಯಾಗಬೇಕಂದ್ರೆ ಚಾಲಕರು ಕಂಡಕ್ಟರ್​ಗಳು ಮುಖ್ಯ. ಗುತ್ತಿಗೆ ಆಧಾರದಲ್ಲಿ ಬೇರೆ ಅವರಿಗೆ ಕೆಲಸ ನೀಡುವ ಬದಲಿಗೆ ವಜಾಗೊಂಡ ನೌಕರರಿಗೆ ಕೆಲಸ ಕೊಡಿ. ನಾವು ಕೆಲಸ ಮಾಡಲು ಸಿದ್ಧರಿದ್ದೇವೆ ಎಂದಿದ್ದಾರೆ.

ವಜಾಗೊಂಡ ಸಾರಿಗೆ ನೌಕರರ ಬದುಕು ಬೀದಿಗೆ ಬಿದ್ದಿದೆ. ಈಗಾಗಲೇ ವಜಾಗೊಂಡ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾವು ನ್ಯಾಯಕ್ಕಾಗಿ ಎರಡು ಬಾರಿ‌ ಮುಷ್ಕರ ಮಾಡಿದ್ದೇವೆ. ಆದರೆ ಹಿಂದೆ ಇದ್ದ ಸರ್ಕಾರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪಯೋಗಿಸಿದೆ. ಸಾಕಷ್ಟು ಬಾರಿ ಮನವಿ ಮಾಡಿದ್ರು ನಮ್ಮನ್ನು ಕೆಲಸಕ್ಕೆ ವಾಪಸ್ ಕರೆಸಿಕೊಂಡಿಲ್ಲ. ನಡು ನೀರಿನಲ್ಲಿ ಕೈ ಬಿಟ್ಟು ಹೋಗಿದೆ.

ಇದನ್ನೂ ಓದಿ: Siddaramaiah: ರಾಜ್ಯದಲ್ಲಿ ವಿದ್ಯುತ್ ದುರ್ಬಳಕೆಗೆ ಬಿಜೆಪಿ ಪ್ರಚೋದನೆ ನೀಡುತ್ತಿದೆ -ಸಿಎಂ ಸಿದ್ದರಾಮಯ್ಯ

ಅಧಿಕಾರಿಗಳು ಸುಳ್ಳು ‌ಕೇಸ್ ದಾಖಲಿಸಿ ನಮ್ಮನ್ನು ವಜಾ ಮಾಡಿದ್ದಾರೆ. ಹಿಂದೆ ಇದ್ದ ಸಾರಿಗೆ ಸಚಿವರಿಗೆ ಮನವಿ ಮಾಡಿದ್ರು ಕ್ಯಾರೆ ಎನ್ನಲಿಲ್ಲ. ಸಾರಿಗೆ ನೌಕರರ ಶಾಪದಿಂದ ಸರ್ಕಾರ ಮತ್ತು ಸಾರಿಗೆ ಸಚಿವರು ಉಳಿಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೀರ್ಮಾನ ತೆಗೆದೆಕೊಳ್ಳುವುದಾಗಿ ಭರವಸೆ ನೀಡಿದ ಸಚಿವ ರಾಮಲಿಂಗರೆಡ್ಡಿ  

ಈ ಕುರಿತಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಸಾರಿಗೆ ಮುಖಂಡರು, ವಜಾಗೊಂಡ ನೌಕರರು ನನ್ನ ಬಳಿ ಬಂದು ಮನವಿ ಮಾಡಿದ್ದಾರೆ. ನಾನು ಬರುವ ಮುಂಚೆಯೂ ಸಾರಿಗೆ ಸಚಿವರು, ಎಂಡಿ ಮತ್ತು ಸರ್ಕಾರಕ್ಕೆ ಮನವಿ ಕೊಟ್ಟಿದ್ದಾರೆ. 11 ರ ಕಾರ್ಯಕ್ರಮ ಮುಗಿದ ನಂತರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:00 pm, Tue, 6 June 23