ರಾಜ್ಯದಲ್ಲಿ ವಿದ್ಯುತ್​ ದರ ಏರಿಕೆ ಮಾಡಿದ್ದು ಹಿಂದಿನ ಸರ್ಕಾರ, ನಾವಲ್ಲ: ಗೃಹ ಸಚಿವ ಡಾ ಜಿ ಪರಮೇಶ್ವರ್

|

Updated on: Jun 11, 2023 | 4:52 PM

ರಾಜ್ಯದಲ್ಲಿ ವಿದ್ಯುತ್​ ದರ ಏರಿಕೆ ಮಾಡಿದ್ದು ಹಿಂದಿನ ಸರ್ಕಾರ. ನಮ್ಮ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿಲ್ಲ. ಹೆಚ್ಚಾಗಿ ವಿದ್ಯುತ್ ಬಳಸಿದ್ದರೆ ಹಣ ಕಟ್ಟಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಹೇಳಿದರು.

ರಾಜ್ಯದಲ್ಲಿ ವಿದ್ಯುತ್​ ದರ ಏರಿಕೆ ಮಾಡಿದ್ದು ಹಿಂದಿನ ಸರ್ಕಾರ, ನಾವಲ್ಲ: ಗೃಹ ಸಚಿವ ಡಾ ಜಿ ಪರಮೇಶ್ವರ್
ಗೃಹ ಸಚಿವ ಡಾ.ಜಿ.ಪರಮೇಶ್ವರ್
Follow us on

ತುಮಕೂರು: ರಾಜ್ಯದಲ್ಲಿ ವಿದ್ಯುತ್​ ದರ ಏರಿಕೆ (power tariff) ಮಾಡಿದ್ದು ಹಿಂದಿನ ಸರ್ಕಾರ. ನಮ್ಮ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿಲ್ಲ. ಹೆಚ್ಚಾಗಿ ವಿದ್ಯುತ್ ಬಳಸಿದ್ದರೆ ಹಣ ಕಟ್ಟಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಹೇಳಿದರು. ನಗರದಲ್ಲಿ ಇಂದು ಸರ್ಕಾರಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಬಿಲ್ ಹೆಚ್ಚು ಇದು ಕೆಲವರು ಕ್ರಿಯೆಟ್ ಮಾಡುತ್ತಿದ್ದಾರೆ. ವಿದ್ಯುತ್ ಬಳಸಿದ್ದರೇ ಅದಕ್ಕೆ ಹಣ ಕಟ್ಟಬೇಕು ಎಂದಿದ್ದಾರೆ.

ಸರ್ಕಾರದಿಂದ ಯಾವುದೇ ಬಿಲ್ ಹೆಚ್ಚಳ ಮಾಡಿಲ್ಲ. ಮೀಟರ್ ಜಾಸ್ತಿ ಬಂದಾಗ ಅವರು ಕಟ್ಟಲೇಬೇಕು. ನಾವು ಯಾವುದೇ ಬಿಲ್ ಹೆಚ್ಚಿಸಿಲ್ಲ. ಹಿಂದಿನ ಸರ್ಕಾರ ಮಾಡಿದ್ದು ಅಷ್ಟೇ. ಎಲ್ಲಾ ಯೋಜನೆ ಮುಂದುವರೆಯಲಿದೆ. ಯಾವುದು ಕೂಡ ನಿಲ್ಲುವುದಿಲ್ಲ ಎಂದು ಹೇಳಿದರು.

ಸಾಧಕ ಬಾಧಕಗಳ ಕುರಿತು ಚರ್ಚೆ

ಸಾಧಕ ಬಾಧಕಗಳನ್ನ ಚರ್ಚೆ ಮಾಡಿ ಜಾರಿಗೆ ಮಾಡಲಾಗಿದೆ. ಯಾವ ರೀತಿ ಬರಿಸಬೇಕೆಂದು ಚರ್ಚಿಸಿ ಅನುಷ್ಠಾನ ಮಾಡಲು ಹೊರಟಿದ್ದೇವೆ. ಯಾರಿಗೂ ಆತಂಕ ಅನುಮಾನ ಬೇಡ. ರಾಜ್ಯದ ಯೋಜನೆ ಕಾರ್ಯಕ್ರಮಗಳು ಹಾಗೇ ಮುಂದುವರೆಸುತ್ತೇವೆ. ಸರ್ಕಾರದಲ್ಲಿ ದುಂದು ವೆಚ್ಚ ಅಥವಾ ಪೋಲಾಗುತ್ತಿದ್ದ ಹಣ ನಿಲ್ಲಿಸಿ ಉಳಿತಾಯ ಮಾಡಿ ಆ ಹಣ ಈ ಯೋಜನೆಗೆ ಖರ್ಚು ಮಾಡುತ್ತೇವೆ.

ಇದನ್ನೂ ಓದಿ: ರಾಜ್ಯದಲ್ಲಿ ಕೆಲವೇ ದಿನದಲ್ಲಿ ಏಳನೇ ಗ್ಯಾರಂಟಿ ಕೂಡಾ ಜಾರಿಯಾಗುತ್ತೆ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಹಿಳೆಯರಿಗೆ ಸಬಲಿಕರಣ ಕಾಂಗ್ರೆಸ್​ ಉದ್ದೇಶ

ಜನತೆಗೆ ಯಾವುದೇ ಅನುಮಾನ ಬೇಡ. ಮಹಿಳೆಯರಿಗೆ ಸಬಲಿಕರಣ ಆಗಬೇಕೆನ್ನುವುದು ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮ ಮಾಡಿದ್ದೇವೆ. ಸ್ತ್ರೀ ಸಂಘ ಮಾಡಿದ್ದೇವೆ. ಅದು ಇಂದು ಕೂಡ ಮುಂದುವರೆದಿದೆ‌. ಉಚಿತ ಪ್ರಯಾಣ ಮಾಡಲು ಸವಲತ್ತು ಅವಕಾಶ ಮಾಡಿಕೊಡಲಾಗಿದೆ‌. ಎಲ್ಲಾ ಕಡೆ ಇದು ಆರಂಭವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಪಕ್ಷಕ್ಕೆ ದ್ರೋಹ ಬಗೆದವರನ್ನು ವೇದಿಕೆಯಿಂದ ಕೆಳಗಿಳಿಸಿ: ಸಚಿವ ರಾಜಣ್ಣ ಎದುರು ಕೈ ಕಾರ್ಯಕರ್ತರ ಗಲಾಟೆ

ಉಚಿತ ಬಸ್​ ಪ್ರಯಾಣ ಕುರಿತಾಗಿ ಮಾತನಾಡಿ, ನಾವು ಸ್ಪಷ್ಟ ವಾಗಿ ಹೇಳಿದ್ದೇವೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ,
ಲಕ್ಸುರಿ, ಎಸಿ, ವೋಲ್ವಾ ಬಸ್​ಗಳನ್ನು ಬಿಟ್ಟು ಉಳಿದ ಬಸ್​ಗಳಲ್ಲಿ ಪ್ರಯಾಣ ಮಾಡಬಹುದು ಎಂದು ಸ್ಪಷ್ಟನೆ ನೀಡಿದರು. ಕೆಲವು ರೂಟ್​ಗಳಲ್ಲಿ ಖಾಸಗಿ ಬಸ್​ಗಳಲ್ಲಿ ಓಡಾಡುತ್ತಿವೆ. ಆ ಕಡೆ ಸರ್ಕಾರಿ ಬಸ್​ಗಳಿದ್ದರೇ ಅನುಕೂಲ ಪಡೆಯಬಹುದು. ರಾಜ್ಯದವರು ಎಂದು ಗೊತ್ತಾಗಲಿ ಎಂದು ಐಡಿ ವಿತರಣೆ ಮಾಡಲಾಗಿದೆ.

ಸೇವಾ ಸಿಂದುನಲ್ಲಿ ಅರ್ಜಿ ವಿಚಾರ, ಶುರುನಲ್ಲಿ ರಶ್ ಇರುತ್ತದೆ. ಸ್ವಲ್ಪ ದಿನಗಳ ಬಳಿಕ ಸರಿಯಾಗಲಿದೆ ಎಂದರು. ಪೊಲೀಸರ ವರ್ಗಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅಗತ್ಯಕ್ಕೆ ಅನುಗುಣವಾಗಿ ಪೊಲೀಸರ ವರ್ಗಾವಣೆ ಆಗಲಿದೆ. ಅದೇ ದೊಡ್ಡ ಒಂದು ಉದ್ಯೋಗ ಆಗುವುದಿಲ್ಲ. ಪಿಎಸ್ ಐ ಹಗರಣ ಬಗ್ಗೆ ಕಾನೂನಿನ ತಜ್ಞ ರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.