ರಾಹುಲ್​ ಗಾಂಧಿ ಅರ್ಜಿ ವಜಾ: ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ದೊಡ್ಡ ಅವಮಾನ ಎಂದ ಡಿಸಿಎಂ ಡಿಕೆ ಶಿವಕುಮಾರ್​

| Updated By: ಗಂಗಾಧರ​ ಬ. ಸಾಬೋಜಿ

Updated on: Jul 07, 2023 | 5:59 PM

ಗುಜರಾತ್ ಹೈಕೋರ್ಟ್​ನಿಂದ ರಾಹುಲ್ ಗಾಂಧಿ ಅರ್ಜಿ ವಜಾ ವಿಚಾರವಾಗಿ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯೆ ನೀಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ದೊಡ್ಡ ಅವಮಾನ. ಈ ಕುರಿತಾಗಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್​ ನೇಮ್​ ವಿಚಾರವಾಗಿ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಗುಜರಾತ್​ ಹೈಕೋರ್ಟ್​​ ವಜಾ ಮಾಡಿದೆ. ಈ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Dk Shivakumar)​ ಹೇಳಿಕೆ ನೀಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ದೊಡ್ಡ ಅವಮಾನ ಎಂದು ಹೇಳಿದ್ದಾರೆ.

ಇದು ಬಿಜೆಪಿಯ ಕುತಂತ್ರ ಎಂದ ಡಿ.ಕೆ.ಶಿವಕುಮಾರ್

ವಿಧಾನಸೌಧದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ 7 ಲಕ್ಷ ಲೀಡ್​ನಲ್ಲಿ ಗೆದ್ದಿದ್ದಾರೆ. ಗಾಂಧಿ ಕುಟುಂಬ ದೇಶಕ್ಕೆ ತ್ಯಾಗ ಮಾಡಿದೆ. ನಮ್ಮ ರಾಜ್ಯದಲ್ಲಿ ಭಾಷಣ ಮಾಡಿದ್ದಕ್ಕೆ ರಾಹುಲ್ ವಿರುದ್ಧ ‌ಕೇಸ್​ ಹಾಕಿದ್ದಾರೆ. ಇದು ಬಿಜೆಪಿಯ ಕುತಂತ್ರ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮಂಡಿಸಿದ ಬಜೆಟ್​ನಲ್ಲಿ ವಿಶೇಷತೆ ಏನಿಲ್ಲ: ಆದಾಯ ಹೆಚ್ಚಿಸಲು ಅಬಕಾರಿ ಸುಂಕ ಹೆಚ್ಚಳ ಎಂದ ಮಾಜಿ ಸಿಎಂ HD ಕುಮಾರಸ್ವಾಮಿ

ನಮ್ಮ ಹೋರಾಟ ಮುಂದುವರಿಯುತ್ತೆ

ರಾಹುಲ್, ಸೋನಿಯಾ ಗಾಂಧಿಗೆ ಪ್ರಧಾನಿ ಆಗುವ ಅವಕಾಶವಿತ್ತು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಈ ಮೂಲಕ ರಾಹುಲ್ ದೇಶ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಇದನ್ನು ಸಹಿಸದೇ ಲೋಕಸಭೆ ಸದಸ್ಯತ್ವದಿಂದ ವಜಾ ಮಾಡಿಸಿದ್ದಾರೆ. ಸುಪ್ರೀಂಕೋರ್ಟ್​ನಲ್ಲಿ ನ್ಯಾಯ ಸಿಗುತ್ತೆ ಎಂಬ ವಿಶ್ವಾಸ ಇದೆ. ಸುರಿಯುವ ಮಳೆ ನಡುವೆಯೂ ಪ್ರತಿಭಟನೆ ಮಾಡಿದ್ದೇವೆ. ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಹೇಳಿದರು.

ಬೊಮ್ಮಾಯಿ ಮಂಡಿಸಿದ್ದ ಬಜೆಟ್​​ಗೆ ಒಂದು ರೂಪ

ಬಜೆಟ್ ಮಂಡನೆ ಬಗ್ಗೆ ವಿಪಕ್ಷಗಳ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪ್ರಣಾಳಿಕೆ ಭರವಸೆಗಳನ್ನು ಬಜೆಟ್​​​ನಲ್ಲಿ ಘೋಷಣೆ ಮಾಡಿದ್ದೇವೆ. ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೆವೆ.

ಇದನ್ನೂ ಓದಿ: Karnataka Budget 2023: ನಮ್ಮ ಭರವಸೆಗಳು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭಿನ್ನವಾಗಿವೆ: ಸಿದ್ದರಾಮಯ್ಯ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಬಜೆಟ್​​ಗೆ ಒಂದು ರೂಪ ಕೊಟ್ಟಿದ್ದೇವೆ. ಬ್ರ್ಯಾಂಡ್​​ ಬೆಂಗಳೂರು ಹೆಸರು ಉಳಿಸುವ ಕೆಲಸ ಮಾಡುತ್ತೇವೆ. ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ನಮಗೆ ಗೊತ್ತಿದೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.