ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಾರಿಗೆ ಮುಂದಾಗಿರುವ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಗೆ (Shakti Scheme) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನಾಳೆ (ಜೂನ್ 11) ಚಾಲನೆ ನೀಡಲಿದ್ದಾರೆ. ಈ ನಡುವೆ ಟ್ವೀಟ್ ಮಾಡಿದ ಬಿಜೆಪಿ ಕರ್ನಾಟಕ, ಮಹಿಳೆಯರಿಗೆ ಬೇಷರತ್ ಉಚಿತ ಪ್ರಯಾಣ ನೀಡಲೇಬೇಕು. ನೀಡದಿದ್ದರೆ ನಾವು ಬಿಡುವುದೂ ಇಲ್ಲ. ಆದರೆ ಹಲವೆಡೆ ಬಸ್ ಬೇಕಲ್ಲ? ಮೊದಲು ಇದನ್ನು ಕಲ್ಪಿಸಿ ಎಂದು ಒತ್ತಾಯಿಸಿದೆ.
“ತಾವುಗಳು ಚುನಾವಣಾಪೂರ್ವದಲ್ಲಿ ಹೇಳಿರುವಂತೆ ರಾಜ್ಯದ ಸಮಸ್ತ ಮಹಿಳೆಯರಿಗೆ ಬೇಷರತ್ ಉಚಿತ ಪ್ರಯಾಣ ನೀಡಲೇಬೇಕು. ನೀಡದಿದ್ದರೆ ನಾವು ಬಿಡುವುದೂ ಇಲ್ಲ. ಆದರೆ ಬಸ್ ಬೇಕಲ್ಲ? ರಾಜ್ಯದ ಹಲವಾರು ಭಾಗಗಳಲ್ಲಿ ಸರ್ಕಾರಿ ಬಸ್‌ಗಳ ವ್ಯವಸ್ಥೆಯೇ ಇಲ್ಲ, ಅಲ್ಲಿನ ನಿವಾಸಿಗಳಿಗೆ ಸರ್ಕಾರಿ ಬಸ್ ಸಂಪರ್ಕವೆಂದರೆ ದೂರದಬೆಟ್ಟ. ಕರಾವಳಿಯ ಹಲವು ತಾಲೂಕುಗಳು ಇಂದಿಗೂ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದೆ. ಈ ಸಮಸ್ಯೆಗಳಿಗೊಂದು ಯೋಜನೆ ರೂಪಿಸಿ, ಮೊದಲಿಗೆ ಬಸ್ ಸೌಲಭ್ಯ ಕಲ್ಪಿಸಿಕೊಡಿ. ಉಳಿದದ್ದು ಮತ್ತೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಮಾನ್ಯ @siddaramaiahನವರೇ,
ತಾವುಗಳು ಚುನಾವಣಾಪೂರ್ವದಲ್ಲಿ ಹೇಳಿರುವಂತೆ ರಾಜ್ಯದ ಸಮಸ್ತ ಮಹಿಳೆಯರಿಗೆ ಬೇಷರತ್ ಉಚಿತ ಪ್ರಯಾಣ ನೀಡಲೇಬೇಕು. ನೀಡದಿದ್ದರೆ ನಾವು ಬಿಡುವುದೂ ಇಲ್ಲ! ಆದರೆ ಬಸ್ ಬೇಕಲ್ಲ?
ರಾಜ್ಯದ ಹಲವಾರು ಭಾಗಗಳಲ್ಲಿ ಸರ್ಕಾರಿ ಬಸ್‌ಗಳ ವ್ಯವಸ್ಥೆಯೇ ಇಲ್ಲ, ಅಲ್ಲಿನ ನಿವಾಸಿಗಳಿಗೆ ಸರ್ಕಾರಿ ಬಸ್ ಸಂಪರ್ಕವೆಂದರೆ ದೂರದಬೆಟ್ಟ!… pic.twitter.com/u0Qmxbl2ZK
— BJP Karnataka (@BJP4Karnataka) June 10, 2023
ನಾಳೆ ಮಧ್ಯಾಹ್ನ 1 ಗಂಟೆಯಿಂದ ಮಹಿಳೆಯರು ರಾಜ್ಯದ ಒಳಗೆ ಎಲ್ಲಿಂದ ಎಲ್ಲಿಗೆ ಬೇಕಾದರೂ, ಎಷ್ಟು ಬಾರಿ ಬೇಕಾದರೂ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ನೀಡಿರುವ ವಾಸಸ್ಥಳದ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೊಂದನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಇದನ್ನೂ ಓದಿ: ಒನ್ ಟು ತ್ರಿಬಲ್ ವಿದ್ಯುತ್ ಬಿಲ್ ಹೆಚ್ಚಳ: ವಿವಿಧ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಕ್ರೋಶ
ಅಲ್ಲದೆ, ನಾಳೆಯಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ. ಮಹಿಳೆಯರು ಬಿಎಂಟಿಸಿ ಹೊರತು ಪಡಿಸಿ ನಾರ್ಮಲ್ ಬಸ್ಸುಗಳಲ್ಲು ಸೀಟ್ ಬುಕ್ಕಿಂಗ್ ಮಾಡಿಕೊಂಡು ಪ್ರಯಾಣ ಮಾಡಬಹುದಾಗಿದೆ. ಮಹಿಳೆಯರು ಸ್ಮಾರ್ಟ್ ಕಾರ್ಡ್ ಪಡೆಯಲು 3 ತಿಂಗಳು ಸಮಯಾವಕಾಶವಿದೆ. 3 ತಿಂಗಳ ನಂತರ ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಮಹಿಳಾ ಪ್ರಯಾಣಿಕರು ಉಚಿತ ಲಗೇಜ್ ಮಿತಿಯನ್ನು ಹೊರತುಪಡಿಸಿ ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋದಲ್ಲಿ ನಿಯಮಾನುಸಾರ ಟಿಕೆಟ್ ದರ ವಸೂಲಿ ಮಾಡಲಾಗುತ್ತದೆ.
ಶಕ್ತಿ ಯೋಜನೆಗೆ ಭಾನುವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೇಪ್ಸ್ ಮುಂಭಾಗದಲ್ಲಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಇದೇ ವೇಳೆ ಶಕ್ತಿ ಯೋಜನೆ ಲೋಗೋ ಅನಾವರಣಗೊಳಿಸಲಿದ್ದಾರೆ. ಈ ಯೋಜನೆ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ. ಯೋಜನೆಗೆ ಚಾಲನೆ ನಂತರ ಸಿದ್ದರಾಮಯ್ಯ ಅವರು ಬಸ್ನಲ್ಲೇ ಸಿಟಿ ರೌಂಡ್ ಹೊಡೆಯಲಿದ್ದಾರೆ.
ಕಾರ್ಯಕ್ರಮದ ಭಾಗವಾಗಿ BS- 6 ಬಿಎಂಟಿಸಿ ಬಸ್ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಯಾಣ ಬೆಳೆಸಲಿದ್ದಾರೆ. ಕಂಡಕ್ಟರ್ ರಿಂದ 0 ಚಾರ್ಜ್ ಟಿಕೆಟ್ ಪಡೆದು ಬಸ್ನಲ್ಲಿರುವ ಮಹಿಳೆಯರಿಗೆ ನೀಡಲಿದ್ದಾರೆ. ಬಿಎಂಟಿಸಿಯ BS- 6 ಬಸ್ನಲ್ಲಿ ಸಿಎಂ ಸಿಟಿ ರೌಂಡ್ಸ್ ಹೋಗಲಿದ್ದಾರೆ. ವಿಧಾನ ಸೌಧ ಒಂದು ರೌಂಡ್, ಮೆಜೆಸ್ಟಿಕ್ ಅಥವಾ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬಿಎಂಟಿಸಿಯಲ್ಲಿ ಒಂದು ರೌಂಡ್ ಹೋಗಲಿದ್ದಾರೆ. ಬಸ್ನಲ್ಲಿರುವ ಅಧಿಕಾರಿಗಳು ಸೇರಿದಂತೆ ಎಲ್ಲ ಮಹಿಳೆಯರಿಗೆ 0 ಚಾರ್ಜ್ ಟಿಕೆಟ್ ನೀಡಲು ವ್ಯವಸ್ಥೆ ಮಾಡಲಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ