2020 year in review | ಸಾಮಾಜಿಕ ಮಾಧ್ಯಮಗಳಲ್ಲಿ ನಗೆಯುಕ್ಕಿಸಿದ ಮೀಮ್​ಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 31, 2020 | 4:25 PM

ಲಾಕ್​ಡೌನ್ ಅವಧಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾದವರ ಸಂಖ್ಯೆಯೂ ಹೆಚ್ಚಿತು. ಸಾಮಾಜಿಕ ಮಾಧ್ಯಮಗಳಲ್ಲಿ ಚಾಲೆಂಜ್​ಗಳನ್ನು ಸ್ವೀಕರಿಸುತ್ತಾ, ಟ್ರೆಂಡ್​ಗಳನ್ನು ಗಮನಿಸುತ್ತಾ ಸ್ಕ್ರಾಲ್ ಮಾಡುವಾಗ ಅಲ್ಲೊಂದು ಇಲ್ಲೊಂದು ಮೀಮ್​ಗಳು ಸಿಕ್ಕೇ ಸಿಗುತ್ತವೆ. 2020ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಗೆಯುಕ್ಕಿಸಿದ ಕೆಲವು ಮೀಮ್​ಗಳು ಇಲ್ಲಿವೆ.

2020 year in review | ಸಾಮಾಜಿಕ ಮಾಧ್ಯಮಗಳಲ್ಲಿ ನಗೆಯುಕ್ಕಿಸಿದ ಮೀಮ್​ಗಳು
Follow us on

ಕೊರಾನಾ ಲಾಕ್​ಡೌನ್​ನಿಂದಾಗಿ ಎಲ್ಲವೂ ಆನ್​ಲೈನ್​ಮಯವಾಗಿತ್ತು. ಮೊಬೈಲ್ ಆ್ಯಪ್​ಗಳ ಮೂಲಕ ದೈನಂದಿನ ವ್ಯವಹಾರ. ಮನೆಯಲ್ಲಿ ಕುಳಿತು ಕಂಪ್ಯೂಟರ್ ಕುಟ್ಟುತ್ತಾ ಕಚೇರಿ ಕೆಲಸ. ಮಕ್ಕಳಿಗೆ ಶಾಲೆ ಬದಲು ಆನ್​ಲೈನ್ ತರಗತಿ. ಹೀಗೆ ಬಹುತೇಕ ಜನರ ಜೀವನ ಆಫ್ ಲೈನ್ ನಿಂದ ಆನ್​ಲೈನ್ ಬಳಕೆಗೆ ಒಗ್ಗಿಕೊಳ್ಳುವ ಅನಿವಾರ್ಯವಾಯಿತು.

ಲಾಕ್​ಡೌನ್ ಅವಧಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾದವರ ಸಂಖ್ಯೆಯೂ ಹೆಚ್ಚಿತು. ಸಾಮಾಜಿಕ ಮಾಧ್ಯಮಗಳಲ್ಲಿ ಚಾಲೆಂಜ್​ಗಳನ್ನು ಸ್ವೀಕರಿಸುತ್ತಾ, ಟ್ರೆಂಡ್​ಗಳನ್ನು ಗಮನಿಸುತ್ತಾ ಸ್ಕ್ರಾಲ್ ಮಾಡುವಾಗ ಅಲ್ಲೊಂದು ಇಲ್ಲೊಂದು ಮೀಮ್​ಗಳು ಸಿಕ್ಕೇ ಸಿಗುತ್ತವೆ. 2020ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಗೆಯುಕ್ಕಿಸಿದ ಕೆಲವು ಮೀಮ್​ಗಳು ಇಲ್ಲಿವೆ.

ಮೂರನೇ ವಿಶ್ವಯುದ್ಧ
2020ರ ಆರಂಭದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇರಾನಿನ ರೆವಲ್ಯೂಷನರಿ ಗಾರ್ಡ್ ಮೇಜರ್ ಜನರಲ್ ಖಾಸೆಮ್ ಸೊಲೈಮಾನಿ ವಾಯುದಾಳಿಯಲ್ಲಿ ಹತ್ಯೆಯಾದರು. ಇರಾನ್ ಕಠಿಣ ಎಚ್ಚರಿಕೆಯೊಂದಿಗೆ ಪ್ರತಿಕ್ರಿಯಿಸಿತು. ಇತ್ತ ಜನರು ಮೀಮ್​ಗಳ ಮೂಲಕ ತಮ್ಮ ಆತಂಕವನ್ನು ನಿಭಾಯಿಸಿದರು.

 

ಕೊರೊನಾ ವೈರಸ್ ಲಾಕ್ ಡೌನ್
ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಲಾಕ್​ಡೌನ್ ವಿಧಿಸಿ ಮನೆಯಲ್ಲೇ ಇರಿ, ಹೊರಗೆ ಹೋಗಬಾರದು ಎಂದು ಹೇಳಿತು. ಲಾಕ್​ಡೌನ್​ನಿಂದಾಗಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡಬೇಕಾದ ಅನಿವಾರ್ಯತೆ ಬಗ್ಗೆಯೂ ತರಹೇವಾರಿ ಮೀಮ್​ಗಳು ಹರಿದಾಡಿದವು.

ಕೊರೊನಾವೈರಸ್ ವಿರುದ್ಧದ ಹೋರಾಟ ನಡುವೆ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಲು ಔಷಧ ಕಂಪನಿಗಳು ನಡೆಸುತ್ತಿರುವ ಪೈಪೋಟಿಯೂ ಮೀಮ್​ಗೆ ವಸ್ತುವಾಯಿತು. ಲಾಕ್​ಡೌನ್ ವಿಸ್ತರಣೆ, ಕೊರೊನಾಕ್ಕೆ ಮನೆ ಮದ್ದು, ರಾಜಕೀಯ ನಾಯಕರ ಅಸಂಬದ್ಧ ಹೇಳಿಕೆಗಳನ್ನೂ ಇಲ್ಲಿ ತಮಾಷೆ ಮಾಡಲಾಯಿತು.

ಅಮೆರಿಕ ಚುನಾವಣೆ
ಅತಿಹೆಚ್ಚು ಸದ್ದು ಮಾಡಿದ ಸುದ್ದಿಯಾಗಿತ್ತು ಅಮೆರಿಕ ಚುನಾವಣೆ. ಚುನಾವಣೆಯ ವೇಳೆ ಅಭ್ಯರ್ಥಿಗಳ ನಡುವೆ ನಡೆದ ವಾಗ್ವಾದ, ಮತದಾನ ಪ್ರಕ್ರಿಯೆ, ಫಲಿತಾಂಶವೂ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಚರ್ಚೆಯಾಯಿತು.

ಕೋಫಿನ್ ಡ್ಯಾನ್ಸ್
ಚಿತ್ರ ನೋಡಿದ ಕೂಡಲೇ ಕೋಫಿನ್ ಡ್ಯಾನ್ಸ್ ಸಂಗೀತ ಕಿವಿಗೆ ಕೇಳುವಂತೆ ಭಾಸವಾಗುವ ಈ ಮೀಮ್ 2020 ರಲ್ಲಿ ಅತೀ ಹೆಚ್ಚು ಬಳಕೆಯಾಗಿದೆ. ಶವಪೆಟ್ಟಿಗೆಯನ್ನು ಹೊತ್ತು ನೃತ್ಯ ಮಾಡುವ ಈ ವಿಡಿಯೊವನ್ನು ಕೊರೊನಾವೈರಸ್ ಜಾಗೃತಿ ಮೂಡಿಸಲು ಬಳಸಲಾಗಿತ್ತು.

ಬಿನೋದ್
ಭಾರತದಲ್ಲಿ ಅತೀ ಹೆಚ್ಚು ಗೂಗಲ್ ಮಾಡಿದ ಪದಗಳಲ್ಲೊಂದಾಗಿ What is Binod? ಯುಟ್ಯೂಬ್​ಗಳ ಕಾಮೆಂಟ್​ನಲ್ಲಿ ಬಳಕೆಯಾದ ಈ ವಾಕ್ಯ ಬಳಕೆಯಾಗಿತ್ತು.

ರಸೋಡೆ ಮೇ ಕೌನ್ ಥಾ ?
ಹಿಂದಿ ಧಾರವಾಹಿ ಸಾಥ್ ನಿಭಾನಾ ಸಾಥಿಯಾದಲ್ಲಿನ ಒಂದು ಡೈಲಾಗ್ ಬಗ್ಗೆ ಯಶ್ ರಾಜ್ ಮುಖಾಟೆ ಸಂಯೋಜಿಸಿದ ರಾಶೀ ಥೀ ಎಂಬ ಹಾಡು ಸೋಷ್ಯಲ್ ಮೀಡಿಯಾದಲ್ಲಿ ಹಿಟ್ ಆಗಿತ್ತು. ರಸೋಡೆ ಮೇ ಕೌನ್ ಥಾ ಎಂಬ ಈ ಡೈಲಾಗ್ ಮೀಮ್, ಜೋಕ್ ಮೂಲಕ ಟ್ರೆಂಡ್ ಆಗಿತ್ತು.

2020ರಲ್ಲಿ ಕೇದ್ರ ಸರ್ಕಾರ 100ಕ್ಕಿಂತಲೂ ಹೆಚ್ಚು ಚೀನಾ ಆ್ಯಪ್ ಗಳಿಗೆ ನಿಷೇಧ ಹೇರಿತು. ನಿಷೇಧಿತ ಆ್ಯರಪ್ ಗಳ ಪಟ್ಟಿಯಲ್ಲಿ ಟಿಕ್ ಟಾಕ್ ಕೂಡಾ ಇತ್ತು. ಯುವಜನರ ಫೇವರಿಟ್ ಆಗಿದ್ದ ಟಿಕ್ ಟಾಕ್ ನಿಷೇಧ ಸುದ್ದಿ ಜತೆ ಹರಿದಾಡಿದ ಮೀಮ್ ಇದಾಗಿತ್ತು.

ಪಬ್ ಜಿ ನಿಷೇಧವಾದಾಗ ಟ್ರೆಂಡ್ ಆಗಿದ್ದು ಈ ಮೀಮ್.

ಇಲಾನ್ ಮುಸ್ಕ್  ಮಗನ ಹೆಸರೂ ಮೀಮ್ ಆಯ್ತು
ಸ್ಪೇಸ್ ಎಕ್ಸ್ ಸಿಇಒ ಇಲಾನ್ ಮುಸ್ಕ್ ಮತ್ತು ಟೆಸ್ಲಾ ಅವರ ಮಗನ ಹೆಸರು ಕೂಡಾ ಮೀಮ್​ಗೆ ಆಹಾರವಾಯಿತು.

ಕೇಕ್ ಮೀಮ್
ಎಲ್ಲವೂ ಕೇಕ್ ಎಂಬರ್ಥದಲ್ಲಿ ಹರಿದಾಡಿದ ಕೇಕ್ ಮೀಮ್​ಗಳು

My Plan vs 2020 ಮೀಮ್
2020ರ ವರ್ಷ ಹೇಗಿರಬೇಕು ಎಂದು ಬಯಸಿದ್ದೆವು, ಹೇಗಾಯ್ತು ಎಂಬುದನ್ನು ವಿವರಿಸಿದ ಮೀಮ್ ಇದು

ವಾತಾವರಣ ಸುಧಾರಿಸುತ್ತಿದೆ (Nature is healing)
ಲಾಕ್​ಡೌನ್ ನಿಂದಾಗಿ ಜನರು ಮನೆಯಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ. ರಸ್ತೆಯಲ್ಲಿ ವಾಹನಗಳ ಓಡಾಟವಿಲ್ಲದೆ ವಾಯುಮಾಲಿನ್ಯ ಕಡಿಮೆಯಾಯಿತು. ಹಾಗಾಗಿ ವಾತಾವರಣ ಸ್ವಚ್ಛವಾಗಿ ದೂರದಲ್ಲಿರುವ ಗುಡ್ಡ ಬೆಟ್ಟಗಳೂ ಸ್ಪಷ್ಟವಾಗಿ ಕಾಣುತ್ತದೆ ಎಂಬ ಸುದ್ದಿಯ ಬೆನ್ನಲ್ಲೇ Nature is healing ಎಂಬ ಪದ ಟ್ರೆಂಡ್ ಆಯಿತು.

monolith (ಏಕಶಿಲೆ) ಮೀಮ್
ಭಾರತದಲ್ಲಿ ಈ ರೀತಿ ಏಕಶಿಲೆ ಕಂಡು ಬಂದರೆ ಏನಾದೀತು ಎಂಬುದರ ಬಗ್ಗೆ ಫೋಟೊಶಾಪ್ ಮಾಡಿದ ಹಲವಾರು ತಮಾಷೆಯ ಮೀಮ್​ಗಳು ಹರಿದಾಡಿದ್ದು ಹೀಗೆ.

ಮೊದಲು ಹೀಗಿದ್ದೆವು ಹೀಗಾದೆವು
10 ವರ್ಷದ ಹಿಂದೆ 20 ವರ್ಷದ ಹಿಂದೆ ಎಂಬ ಹ್ಯಾಷ್ ಟ್ಯಾಗ್ ಬಳಸಿ ಹಳೇ ಫೋಟೊ ಮತ್ತು ಹೊಸ ಫೋಟೊಗಳನ್ನು ಅಪ್ ಲೋಡ್ ಮಾಡುವ ಚಾಲೆಂಜ್ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯವಾಗಿತ್ತು. ಅದೇ ರೀತಿ ಮೊದಲು ಹೀಗಿದ್ದೆವು ಹೀಗಾದೆವು ಎಂಬ ಮೀಮ್​ಗಳು ಟ್ವಿಟರ್​ನಲ್ಲಿ ಹರಿದಾಡಿತ್ತು.

ತಲೆದೂಗುವ ಬೆಕ್ಕು
ಸಾಮಾಜಿಕ ಮಾಧ್ಯಮಗಳಲ್ಲಿನ ಜನಪ್ರಿಯ ವಿಡಿಯೊ, ಮೀಮ್​ಗಳಲ್ಲಿ ಬೆಕ್ಕುಗಳಿಗೆ ವಿಶೇಷ ಸ್ಥಾನ ಇದ್ದೇ ಇರು ತ್ತದೆ. ಅಂಥದ್ದೇ ಮೀಮ್ ಆಗಿತ್ತು ಡ್ಯಾನ್ಸಿಂಗ್ ಕ್ಯಾಟ್.

2020 Year in Review | ಲಾಕ್​ಡೌನ್​ ಏಕಾಂತದಲ್ಲಿ ಚಾಲೆಂಜ್​ ಸುಗ್ಗಿ; ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಚಾಲೆಂಜ್​ಗಳು