ಪಕ್ಷಿಗಳ ಹಿಕ್ಕೆಯೆಂದು ಹೀಗಳೆಯದಿರಿ, ಇದಕ್ಕಿದೆ ಕೋಟಿ ಕೋಟಿ ಬೆಲೆ ಗೊತ್ತಾ?

| Updated By: KUSHAL V

Updated on: Aug 09, 2020 | 8:50 AM

ಅವಶ್ಯಕತೆ ಸಂಶೋಧನೆಯ ಮೂಲ ಅಂತಾರೆ. ಇದಕ್ಕೆ ಪೂರಕವೆಂಬಂತೆ ಕೆಲ ವಿಜ್ಞಾನಿಗಳು ಮತ್ತು ಪರಿಸರವಾದಿಗಳ ಕಣ್ಣು ಈಗ ಸಮುದ್ರ ಪಕ್ಷಿಗಳ ಮೇಲೆ ಬಿದ್ದಿದ್ದು, ಈ ಪಕ್ಷಿಗಳು ಹಾಕುವ ಹಿಕ್ಕಿಯಿಂದ ಕೋಟಿ ಕೋಟಿ ರೂಪಾಯಿಗಳನ್ನು ಕಮಾಯಿಸಬಹುದೆಂದು ಲೆಕ್ಕಾ ಹಾಕಿದ್ದಾರೆ. ಹೌದು ಸಮುದ್ರ ಪಕ್ಷಿಗಳು, ಸಮುದ್ರ ಕಾಗೆಗಳು ಹಾಗೂ ಪೆಂಗ್ವಿನ್‌ಗಳು ಹಾಕುವ ಹಿಕ್ಕಿ ಅಂದ್ರೆ ತ್ಯಾಜ್ಯದಿಂದ ಕೋಟ್ಯಂತರ ರೂಪಾಯಿಗಳ ವ್ಯಾಪಾರ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಅವರ ಅಂದಾಜಿನ ಪ್ರಕಾರ, ಸಮುದ್ರ ಪಕ್ಷಿಗಳು ಹಾಕುವ ಹಿಕ್ಕಿಯನ್ನು ಕೃಷಿಗೆ ಗೊಬ್ಬರವಾಗಿ ಬಳಸಬಹುದು. ಇದು […]

ಪಕ್ಷಿಗಳ ಹಿಕ್ಕೆಯೆಂದು ಹೀಗಳೆಯದಿರಿ, ಇದಕ್ಕಿದೆ ಕೋಟಿ ಕೋಟಿ ಬೆಲೆ ಗೊತ್ತಾ?
Follow us on

ಅವಶ್ಯಕತೆ ಸಂಶೋಧನೆಯ ಮೂಲ ಅಂತಾರೆ. ಇದಕ್ಕೆ ಪೂರಕವೆಂಬಂತೆ ಕೆಲ ವಿಜ್ಞಾನಿಗಳು ಮತ್ತು ಪರಿಸರವಾದಿಗಳ ಕಣ್ಣು ಈಗ ಸಮುದ್ರ ಪಕ್ಷಿಗಳ ಮೇಲೆ ಬಿದ್ದಿದ್ದು, ಈ ಪಕ್ಷಿಗಳು ಹಾಕುವ ಹಿಕ್ಕಿಯಿಂದ ಕೋಟಿ ಕೋಟಿ ರೂಪಾಯಿಗಳನ್ನು ಕಮಾಯಿಸಬಹುದೆಂದು ಲೆಕ್ಕಾ ಹಾಕಿದ್ದಾರೆ.

ಹೌದು ಸಮುದ್ರ ಪಕ್ಷಿಗಳು, ಸಮುದ್ರ ಕಾಗೆಗಳು ಹಾಗೂ ಪೆಂಗ್ವಿನ್‌ಗಳು ಹಾಕುವ ಹಿಕ್ಕಿ ಅಂದ್ರೆ ತ್ಯಾಜ್ಯದಿಂದ ಕೋಟ್ಯಂತರ ರೂಪಾಯಿಗಳ ವ್ಯಾಪಾರ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಅವರ ಅಂದಾಜಿನ ಪ್ರಕಾರ, ಸಮುದ್ರ ಪಕ್ಷಿಗಳು ಹಾಕುವ ಹಿಕ್ಕಿಯನ್ನು ಕೃಷಿಗೆ ಗೊಬ್ಬರವಾಗಿ ಬಳಸಬಹುದು. ಇದು ಖನಿಜಯುಕ್ತವಾಗಿದ್ದು, ಸಾಕಷ್ಟು ಪ್ರಮಾಣದ ಪ್ರೋಟಿನ್‌ ಅನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಹೀಗೆ ಈ ಪಕ್ಷಿಗಳಿಂದ ವರ್ಷವೊಂದಕ್ಕೆ ಈಗಿನ ಲೆಕ್ಕಾಚಾರದ ಪ್ರಕಾರ 470 ಮಿಲಿಯನ್‌ ಅಮೆರಿಕನ್‌ ಡಾಲರ್‌ ಬೆಲೆಯಷ್ಟು ಗೊಬ್ಬರ ಸಿಗುತ್ತೆ. ಇದನ್ನು ಸರಿಯಾಗಿ ವೈಜ್ಞಾನಿಕವಾಗಿ ಸಂಗ್ರಹಿಸಿದರೆ ಇದು ಒಂದು ಬಿಲಿಯನ್‌ಗಿಂತಲೂ ಹೆಚ್ಚು ಬೆಲೆ ಬಾಳುತ್ತದೆ ಎಂದಿದ್ದಾರೆ.

ಪೆಂಗ್ವಿನ್‌ಗಳು ಹೆಚ್ಚಾಗಿ ಅಂಟಾರ್ಟಿಕಾ ಮತ್ತು ಯುರೋಪ್‌ನ ಶೀತವಲಯಗಳಲ್ಲಿ ಕಂಡು ಬರುತ್ತವೆ. ಇವುಗಳ ಜೊತೆಗೆ ಇತರ ಸಮುದ್ರ ಪಕ್ಷಿಗಳಿಂದ ವೈಜ್ಞಾನಿಕವಾಗಿ ಗೊಬ್ಬರ ಸಂಗ್ರಹಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ರೆ ಕೋಟ್ಯಂತರ ವಹಿವಾಟು ಆಗುತ್ತದೆ. ಮುಂದಿನ ದಿನಗಳಲ್ಲಿ ಇದೇ ಒಂದು ಇಂಡಸ್ಟ್ರಿಯಾಗಬಹುದು ಎನ್ನುವುದು ವಿಜ್ಞಾನಿಗಳ ಲೆಕ್ಕಾಚಾರ.

Published On - 8:08 pm, Sat, 8 August 20