ಬಂಧಿಸಲು ಸಾಕಾಗುವಷ್ಟು ಮಾಹಿತಿಯನ್ನು ರಿಯಾ ನೀಡಿದ್ದಾಳೆ: ಎನ್ ಸಿ ಬಿ

|

Updated on: Sep 08, 2020 | 8:28 PM

ಸುಶಾಂತ್ ಸಿಂಗ್ ರಜಪೂತ ಅವರ ಸಾವಿನ ತನಿಖೆಯನ್ನು ನಡೆಸುತ್ತಿರುವ ಏಜೆನ್ಸಿಗಳಲ್ಲಿ ಒಂದಾಗಿರುವ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೋದ ನೈಋತ್ಯ ಪ್ರಾಂತ್ಯ ಉಪ ಮಹಾ ನಿರ್ದೇಶಕ ಎಮ್ ಎ ಜೈನ್ ಅವರು ಇಂದು ನೀಡಿರುವ ಮಾಹಿತಿ ಪ್ರಕಾರ, ಪ್ರಕರಣದಲ್ಲಿ ಪ್ರಮುಖ ಆರೋಪಿಯೆಂದು ಗುರುತಿಸಲ್ಪಡುತ್ತಿರುವ ನಟಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಸಾಯಂಕಾಲವೇ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗುವುದೆಂದು ಹೇಳಿದರು. ‘‘ನಮಗೆ ಆಕೆಯ ಕಸ್ಟಡಿ ಈಗ ಬೇಕಿಲ್ಲ, ಆದರೆ ನ್ಯಾಯಾಂಗ ಕಸ್ಟಡಿಯನ್ನು ಕೋರುತ್ತೇವೆ. ನಮಗೆ ಬೇಕಾಗಿದ್ದ ಮಾಹಿತಿಯನ್ನೆಲ್ಲ ಆಕೆ ನೀಡಿರುವುದರಿಂದ ಕಸ್ಟಡಿಯ ಅವಶ್ಯಕತೆ ಇಲ್ಲ, […]

ಬಂಧಿಸಲು ಸಾಕಾಗುವಷ್ಟು ಮಾಹಿತಿಯನ್ನು ರಿಯಾ ನೀಡಿದ್ದಾಳೆ: ಎನ್ ಸಿ ಬಿ
Follow us on

ಸುಶಾಂತ್ ಸಿಂಗ್ ರಜಪೂತ ಅವರ ಸಾವಿನ ತನಿಖೆಯನ್ನು ನಡೆಸುತ್ತಿರುವ ಏಜೆನ್ಸಿಗಳಲ್ಲಿ ಒಂದಾಗಿರುವ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೋದ ನೈಋತ್ಯ ಪ್ರಾಂತ್ಯ ಉಪ ಮಹಾ ನಿರ್ದೇಶಕ ಎಮ್ ಎ ಜೈನ್ ಅವರು ಇಂದು ನೀಡಿರುವ ಮಾಹಿತಿ ಪ್ರಕಾರ, ಪ್ರಕರಣದಲ್ಲಿ ಪ್ರಮುಖ ಆರೋಪಿಯೆಂದು ಗುರುತಿಸಲ್ಪಡುತ್ತಿರುವ ನಟಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಸಾಯಂಕಾಲವೇ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗುವುದೆಂದು ಹೇಳಿದರು.

‘‘ನಮಗೆ ಆಕೆಯ ಕಸ್ಟಡಿ ಈಗ ಬೇಕಿಲ್ಲ, ಆದರೆ ನ್ಯಾಯಾಂಗ ಕಸ್ಟಡಿಯನ್ನು ಕೋರುತ್ತೇವೆ. ನಮಗೆ ಬೇಕಾಗಿದ್ದ ಮಾಹಿತಿಯನ್ನೆಲ್ಲ ಆಕೆ ನೀಡಿರುವುದರಿಂದ ಕಸ್ಟಡಿಯ ಅವಶ್ಯಕತೆ ಇಲ್ಲ, ನಮ್ಮ ವಿಚಾರಣೆ ಮುಗಿದಿದೆ,’’ ಎಂದು ಜೈನ್ ಹೇಳಿದರು.

ರಿಯಾಳನ್ನು ಇವತ್ತು ರೂಟೀನ್ ಮೆಡಿಕಲ್ ಚೆಕಪ್ ಸಲುವಾಗಿ ಕಳಿಸಲಾಗಿತ್ತು ಎಂದು ಸಹ ಎನ್ ಸಿ ಬಿ ಆಧಿಕಾರಿ ಹೇಳಿದರು.

‘‘ರಿಯಾಳ ಮೆಡಿಕಲ್ ಚೆಕಪ್​ಗಾಗಿ ಆಸ್ಪತ್ರೆಗೆ ಕಳಿಸಲಾಗಿತ್ತು. ಆಕೆಯ ಕೊವಿಡ್-19 ಟೆಸ್ಟ್ ನೆಗೆಟಿವ್ ಬಂದಿದೆ. ಬಂಧಿಸಲು ಸಾಕಾಗುವಷ್ಟು ಮಾಹಿತಿಯನ್ನು ಆಕೆ ನಮಗೆ ಒದಗಿಸಿದ್ದಾಳೆ. ನಾವು ಈಗಾಗಲೇ ಆಕೆಯನ್ನು ಬಂಧಿಸಿದ್ದೇವೆ, ಅದರರ್ಥ ನಮ್ಮಲ್ಲಿ ಸಾಕಷ್ಟು ಪುರಾವೆ ಇದೆ,’’ ಎಂದು ಜೈನ್ ಹೇಳಿದರು.

ಈಗಷ್ಟೇ ಸಿಕ್ಕರುವ ಮಾಹಿತಿ ಪ್ರಕಾರ ರಿಯಾಳನ್ನು ಸೆಪ್ಟಂಬರ್ 21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

Published On - 8:21 pm, Tue, 8 September 20