ಹಿಂದೂ ಸಂಪ್ರದಾಯದ ಪ್ರಕಾರ, ದೇವರ ಧ್ಯಾನ, ಪೂಜೆ, ಪುನಸ್ಕಾರಗಳ ಜೊತೆಗೆ ಕೆಲ ನಿಯಮಗಳನ್ನು ಅನುಸರಿಸಿದ್ರೆ ಇಷ್ಟಾರ್ಥ ಸಿದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತೆ. ಕೆಲ ನಿರ್ದಿಷ್ಟ ನಿಯಮಗಳನ್ನು ಜೀವನದಲ್ಲಿ ಪಾಲಿಸ್ತಾ ಬಂದ್ರೆ ಯಶಸ್ಸು ಕಟ್ಟಿಟ್ಟಬುಟ್ಟಿ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆ ನಿಯಮಗಳ ಅನುಸರಣೆಯಿಂದ ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು ಅಂತಲೂ ಹೇಳಲಾಗುತ್ತೆ. ಹಾಗಿದ್ರೆ ಯಾವುದಾ ನಿಯಮಗಳು ಅನ್ನೂದನ್ನ ಇಲ್ಲಿ ತಿಳಿಯಿರಿ?
ಧರ್ಮಶಾಸ್ತ್ರದ ಕೆಲ ನಿಯಮಗಳು:
-ರಾತ್ರಿ ವೇಳೆ ಭೂಮಿಯನ್ನು ಅಗೆಯಬಾರದು.
-ಭೋಜನವಾದ ತಕ್ಷಣ ಸ್ನಾನ ಮಾಡಬಾರದು.
-ಬೇರೆಯವರ ಕಷ್ಟವನ್ನು ಕಂಡು ಸಂತೋಷ ಪಡಬಾರದು.
-ಸದಾ ತಿನ್ನುತ್ತಲೇ ಇರುವ ಅಭ್ಯಾಸವಿದ್ರೆ ಮೊದಲು ಅದನ್ನು ದೂರಗೊಳಿಸಬೇಕು.
-ತಲೆಗೆ ಎಣ್ಣೆ ಹಚ್ಚಿಕೊಳ್ಳಲು ಎಡಗೈಯನ್ನು ಬಳಸಬಾರದು.
-ನೀರನ್ನು ಮಿತವಾಗಿ ಖರ್ಚು ಮಾಡಬೇಕು.
-ವಿವಾಹಿತೆ ಸ್ತ್ರೀಯ ಕೈಗಳಲ್ಲಿ ಬಳೆ ಇಲ್ಲದೆ ಊಟ ಬಡಿಸಬಾರದು.
-ಊಟವನ್ನು ಎಡಗೈಯಿಂದ ಬಡಿಸಬಾರದು.
-ಅಂದಿನ ಕೆಲಸ ಅಂದೇ ಮಾಡಬೇಕು. ಇಲ್ಲದಿದ್ದರೆ ಅಪಜಯ ಲಭಿಸುತ್ತೆ.
-ಘಂಟೆಯ ಮಧ್ಯಾಭಾಗದ ನಾಲಿಗೆ, ಶಂಖದ ಹೊರಭಾಗ, ಆಧ್ಯಾತ್ಮಿಕ ಗ್ರಂಥವನ್ನು ನೆಲಕ್ಕೆ ತಾಗಿಸಬಾರದು.
-ಯಾರಾದರೂ ಮುಖ್ಯವಾದ ಕೆಲಸಕ್ಕಾಗಿ ಹೊರ ಹೋಗುತ್ತಿರುವಾಗ ಹಿಂದೆ ಹೋಗಿ ಕರೆಯಬಾರದು.
-ಹತ್ತಿರದ ಬಂಧುಗಳ ಮರಣ ಸಮಯದಲ್ಲಿ, ಮನೆಯಲ್ಲಿ ಶಿಶುವಿನ ಜನನವಾದಾಗ ಮತ್ತು ಸ್ತ್ರೀಯರಿಗೆ ಅನಾನುಕೂಲವಾದ ದಿನಗಳಲ್ಲಿ ದೇವಾಲಯಗಳಿಗೆ ಹೋಗಬಾರದು.
-ಅಹಂಕಾರ, ಸಣ್ಣತನಗಳನ್ನು ಯಾವತ್ತೂ ಪ್ರದರ್ಶಿಸಬಾರದು.
-ಪಿತೃದೇವತೆಗಳ ಪೂಜಾಕಾರ್ಯಗಳನ್ನು ಮಾಡುವಾಗ ತಲೆಗೆ ಎಣ್ಣೆ ಹಾಕಿಕೊಳ್ಳಬಾರದು.
-ಶವಯಾತ್ರೆಯ ಸಮಯದಲ್ಲಿ ಶವಕ್ಕೂ ಮುನ್ನ ಸಾಗಬಾರದು.
-ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡು ಬಂದಮೇಲೆ ಸ್ನಾನ ಮಾಡಿಯೇ ಮನೆಯೊಳಗೆ ಹೋಗಬೇಕು.
ಹೀಗೆ ಈ ಎಲ್ಲಾ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡ್ರೆ ನೆಮ್ಮದಿ, ಸಂತೋಷ, ಆರೋಗ್ಯ, ಆಯಸ್ಸು, ಸಮಾಧಾನ, ಸಂತೃಪ್ತಿ ಹಾಗೂ ತಾಳ್ಮೆ ಸಿಗಲಿದೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
Published On - 3:09 pm, Thu, 27 February 20