Home Names: ನಿಮ್ಮ ಕನಸಿನ ಮನೆಗೆ ‘ರಾಜಮನೆತನದ’ ಕಳೆ ನೀಡಬೇಕೇ? ಇಲ್ಲಿದೆ ಅದ್ಭುತ ಸಂಸ್ಕೃತ ಹೆಸರುಗಳು!

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಹೆಸರು ಅಲ್ಲಿನ ಸಕಾರಾತ್ಮಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಯಶಸ್ಸಿಗೆ ಸಾಕ್ಷಿಯಾಗಬಲ್ಲ, ಶುಭ ತರುವಂತಹ 10 ಸಂಸ್ಕೃತ ಹೆಸರುಗಳನ್ನು ಇಲ್ಲಿ ನೀಡಲಾಗಿದೆ. ಈ ಹೆಸರುಗಳು ಶಾಂತಿ, ಸಮೃದ್ಧಿ, ಪ್ರೀತಿ ಮತ್ತು ಸಕಾರಾತ್ಮಕ ಕಂಪನಗಳನ್ನು ಆಕರ್ಷಿಸುತ್ತವೆ. ನಿಮ್ಮ ಮನೆಗೆ ಅರ್ಥಪೂರ್ಣ ಹೆಸರು ನೀಡಿ, ಶುಭ ತಂದುಕೊಳ್ಳಿ.

Home Names: ನಿಮ್ಮ ಕನಸಿನ ಮನೆಗೆ ರಾಜಮನೆತನದ ಕಳೆ ನೀಡಬೇಕೇ? ಇಲ್ಲಿದೆ ಅದ್ಭುತ ಸಂಸ್ಕೃತ ಹೆಸರುಗಳು!
ಅದ್ಭುತ ಸಂಸ್ಕೃತ ಹೆಸರುಗಳು

Updated on: Apr 23, 2026 | 3:49 PM

ಮನೆ ಕೇವಲ ಇಟ್ಟಿಗೆಗಳ ಕಟ್ಟಡವಲ್ಲ ಹಿರಿಯರು ಹೇಳುವಂತೆ, ಇಟ್ಟಿಗೆ ಮತ್ತು ಕಲ್ಲುಗಳು ಕೇವಲ ಒಂದು ಭೌತಿಕ ರಚನೆಯನ್ನು ನಿರ್ಮಿಸುತ್ತವೆ. ಆದರೆ ಆ ರಚನೆಯನ್ನು ‘ಮನೆ’ಯನ್ನಾಗಿ ಪರಿವರ್ತಿಸುವುದು ಅಲ್ಲಿ ವಾಸಿಸುವ ಜನರು, ಅವರ ಕನಸುಗಳು ಮತ್ತು ಅಲ್ಲಿನ ಶಕ್ತಿ. ಪ್ರತಿಯೊಬ್ಬರಿಗೂ ತಮ್ಮ ಜೀವನದ ಸಾಧನೆಯ ಸಂಕೇತವಾಗಿ ಒಂದು ಸುಂದರ ಮನೆ ಇರಬೇಕೆಂಬ ಆಸೆಯಿರುತ್ತದೆ. ಮಗುವಿಗೆ ಹೆಸರಿಡುವುದು ಹೇಗೆ ಅದರ ಗುರುತನ್ನು ನಿರ್ಧರಿಸುತ್ತದೆಯೋ, ಹಾಗೆಯೇ ನಿಮ್ಮ ಮನೆಗೆ ನೀವು ಇಡುವ ಹೆಸರು ಅಲ್ಲಿನ ಸಕಾರಾತ್ಮಕ ಶಕ್ತಿ (Positive Vibrations) ಮತ್ತು ಕಂಪನಗಳನ್ನು ನಿರ್ಧರಿಸುತ್ತದೆ.

ವಾಸ್ತು ಮತ್ತು ಹೆಸರಿನ ಮಹತ್ವ:

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮನೆಗೆ ಅರ್ಥಪೂರ್ಣ ಹೆಸರಿಡಲು ಬಹಳ ಆಸಕ್ತಿ ತೋರಿಸುತ್ತಿದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಹೆಸರು ಅಲ್ಲಿನ ನಿವಾಸಿಗಳ ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಮನೆ ಕೇವಲ ಒಂದು ವಿಳಾಸವಾಗದೆ, ನಿಮ್ಮ ಯಶಸ್ಸಿನ ಸಾಕ್ಷಿಯಾಗಲಿ ಎಂಬ ಉದ್ದೇಶದಿಂದ, ಸಕಾರಾತ್ಮಕತೆಯನ್ನು ಆಕರ್ಷಿಸುವ 10 ಶ್ರೇಷ್ಠ ಸಂಸ್ಕೃತ ಹೆಸರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಸಕಾರಾತ್ಮಕ ಶಕ್ತಿ ತುಂಬುವ 10 ಆಯ್ದ ಹೆಸರುಗಳು:

ನಿರ್ವಾಣಂ (Nirvanam):

ಸಂಸ್ಕೃತದ ಈ ಹೆಸರು ಮನಸ್ಸಿಗೆ ಪರಮ ಶಾಂತಿ ಮತ್ತು ಮುಕ್ತಿಯ ಭಾವನೆಯನ್ನು ನೀಡುತ್ತದೆ. ನಿಮ್ಮ ಮನೆಯ ವಾತಾವರಣ ಯಾವಾಗಲೂ ಪ್ರಶಾಂತವಾಗಿರಬೇಕು ಮತ್ತು ಒತ್ತಡ ಮುಕ್ತವಾಗಿರಬೇಕು ಎಂದು ನೀವು ಬಯಸಿದರೆ, ಇದು ಅತ್ಯುತ್ತಮ ಆಯ್ಕೆ.

ಅಮೃತಾಲಯ (Amrutalaya):

ಇದರ ಅರ್ಥ ‘ಅಮೃತದಂತಹ ಸುಖವಿರುವ ಮನೆ’. ಈ ಹೆಸರು ಮನೆಯಲ್ಲಿ ತೃಪ್ತಿ, ಮಾಧುರ್ಯ ಮತ್ತು ಸದಾಕಾಲ ಹರಿಯುವ ಸಂತೋಷವನ್ನು ಸೂಚಿಸುತ್ತದೆ. ಇದು ಕುಟುಂಬದಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ.

ಸ್ನೇಹಸದನಂ (Snehasadanam):

ಹೆಸರೇ ಸೂಚಿಸುವಂತೆ ಇದು ಪ್ರೀತಿ ಮತ್ತು ಅನ್ಯೋನ್ಯತೆಯ ತಾಣ. ಕುಟುಂಬ ಸದಸ್ಯರ ನಡುವೆ ಬಾಂಧವ್ಯ ಗಟ್ಟಿಯಾಗಲು ಮತ್ತು ಪರಸ್ಪರ ಸ್ನೇಹಭಾವ ನೆಲೆಸಲು ಈ ಹೆಸರು ಪ್ರೇರಣೆ ನೀಡುತ್ತದೆ.

ಅಮ್ರೇಷಂ (Amresham):

ಅಮ್ರೇಷಂ ಎಂದರೆ ಶಕ್ತಿ ಮತ್ತು ಅಭಯದ ಸಂಕೇತ. ಈ ಹೆಸರಿರುವ ಮನೆಯಲ್ಲಿ ವಾಸಿಸುವವರು ಹೆಚ್ಚು ಸುರಕ್ಷಿತ ಭಾವನೆಯನ್ನು ಹೊಂದಿರುತ್ತಾರೆ ಮತ್ತು ಇದು ನಕಾರಾತ್ಮಕ ದೃಷ್ಟಿಯಿಂದ ಮನೆಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ.

ಸೌರಭ್ (Saurabh):

ಸುಗಂಧ ಮತ್ತು ತಾಜಾತನ ಎಂಬ ಅರ್ಥವನ್ನು ಹೊಂದಿರುವ ಈ ಹೆಸರು, ಮನೆಯಲ್ಲಿ ಸದಾ ಹೊಸ ಚೈತನ್ಯವಿರುವಂತೆ ಮಾಡುತ್ತದೆ. ಸಕಾರಾತ್ಮಕ ಶಕ್ತಿಯು ಮನೆಯ ಮೂಲೆ ಮೂಲೆಯಲ್ಲೂ ಪಸರಿಸಲು ಇದು ಸಹಕಾರಿ.

ಸತ್ಯಲೋಕಂ (Satyalokam):

ಯಾರು ತಮ್ಮ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಸತ್ಯದ ಹಾದಿಯನ್ನು ಅನುಸರಿಸುತ್ತಾರೋ, ಅಂತಹವರಿಗೆ ಈ ಹೆಸರು ಸೂಕ್ತ. ಇದು ಮನೆಯಲ್ಲಿ ಪವಿತ್ರ ಮತ್ತು ಧಾರ್ಮಿಕ ವಾತಾವರಣವನ್ನು ನಿರ್ಮಿಸುತ್ತದೆ.

ಮಂಗಳಾಲಯ (Mangalalaya):

ಶುಭ ಮತ್ತು ಅದೃಷ್ಟದ ಪ್ರತೀಕವೇ ಮಂಗಳಾಲಯ. ಹೊಸದಾಗಿ ಮನೆ ಕಟ್ಟಿದವರಿಗೆ ಅಥವಾ ಜೀವನದಲ್ಲಿ ಹೊಸ ಆರಂಭ ಮಾಡುವವರಿಗೆ ಇದು ಅತ್ಯಂತ ಮಂಗಳಕರ ಹೆಸರಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸುಕೃತಂ (Sukrutam):

ಒಳ್ಳೆಯ ಕಾರ್ಯಗಳು ಮತ್ತು ಶುದ್ಧ ಮನಸ್ಸಿನ ಫಲವೇ ಸುಕೃತ. ನಿಮ್ಮ ಮನೆಗೆ ಈ ಹೆಸರಿಟ್ಟರೆ, ಅದು ಸತ್ಕರ್ಮಗಳ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಮನೆಯಲ್ಲಿ ಪುಣ್ಯದ ವಾತಾವರಣವಿರುತ್ತದೆ.

ಶಾಂತಿವನಂ (Shantivanam):

ನಗರದ ಗದ್ದಲದಿಂದ ದೂರವಿದ್ದು, ಪ್ರಕೃತಿಗೆ ಹತ್ತಿರವಾಗಿ ಬದುಕುವವರಿಗೆ ಮತ್ತು ಏಕಾಂತವನ್ನು ಬಯಸುವವರಿಗೆ ಇದು ಹೇಳಿ ಮಾಡಿಸಿದ ಹೆಸರು. ಇದು ಮನೆಯನ್ನು ಶಾಂತಿಯ ದ್ವೀಪವನ್ನಾಗಿ ಮಾಡುತ್ತದೆ.

ಅನ್ನಪೂರ್ಣ (Annapurna):

ಸಮೃದ್ಧಿಯ ದೇವತೆ ಅನ್ನಪೂರ್ಣೇಶ್ವರಿಯ ಹೆಸರಿದು. ಈ ಹೆಸರಿರುವ ಮನೆಯಲ್ಲಿ ಆಹಾರ, ಸಂಪತ್ತು ಮತ್ತು ಸಂತೋಷಕ್ಕೆ ಎಂದಿಗೂ ಕೊರತೆಯಾಗುವುದಿಲ್ಲ ಎಂಬುದು ಭಕ್ತರ ದೃಢ ನಂಬಿಕೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us