
ಆಚಾರ್ಯ ಚಾಣಕ್ಯರ ನೀತಿಗಳು ಮತ್ತು ತತ್ವಗಳು ಮನುಷ್ಯನಿಗೆ ಜೀವನದಲ್ಲಿ ಯಾವಾಗಲೂ ಸರಿಯಾದ ಮತ್ತು ವಿವೇಚನೆಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ದಾರಿ ತೋರಿಸುತ್ತವೆ. ಜೀವನದ ಪ್ರತಿಯೊಂದು ಹೆಜ್ಜೆಯೂ ಭವಿಷ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ನಾವು ಇತರರ ಪ್ರಭಾವಕ್ಕೆ ಒಳಗಾಗಿ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಚಾಣಕ್ಯರ ಪ್ರಕಾರ, ಯಾರೊಬ್ಬರ ಸಲಹೆಯನ್ನು ಸ್ವೀಕರಿಸುವ ಮುನ್ನ ಅವರ ಅನುಭವ, ಉದ್ದೇಶ ಮತ್ತು ಯೋಚನಾ ಲಹರಿಯನ್ನು ಸರಿಯಾಗಿ ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಜೀವನದಲ್ಲಿ ಸರಿ ಮತ್ತು ತಪ್ಪು ಸಲಹೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಹಾಯ ಮಾಡುವ ಪ್ರಮುಖ 5 ತತ್ವಗಳು ಇಲ್ಲಿವೆ.
ಚಾಣಕ್ಯ ನೀತಿಯ ಪ್ರಕಾರ, ಯಾವುದೇ ಪ್ರಮುಖ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವಾಗ ಆ ಕ್ಷೇತ್ರದಲ್ಲಿ ಉತ್ತಮ ಜ್ಞಾನ ಮತ್ತು ಆಳವಾದ ಅನುಭವವಿರುವ ವ್ಯಕ್ತಿಯ ಸಲಹೆಯನ್ನು ಮಾತ್ರ ಪಡೆಯಬೇಕು. ಕೆಲವೊಮ್ಮೆ ಯಾವುದೇ ಅನುಭವವಿಲ್ಲದವರು ಒಳ್ಳೆಯ ಉದ್ದೇಶದಿಂದಲೇ ಸಲಹೆ ನೀಡಬಹುದು, ಆದರೆ ಜ್ಞಾನದ ಕೊರತೆಯಿಂದ ಆ ಸಲಹೆಯು ನಮಗೆ ದೊಡ್ಡ ಹಾನಿಯನ್ನುಂಟುಮಾಡಬಹುದು. ಉದಾಹರಣೆಗೆ, ನೀವು ಹೊಸ ವ್ಯವಹಾರವನ್ನು ಆರಂಭಿಸಲು ಬಯಸಿದರೆ, ಬ್ಯುಸಿನೆಸ್ ಅನುಭವವಿರುವವರ ಮಾರ್ಗದರ್ಶನ ಪಡೆಯಿರಿ ಹೊರತು ಕೇವಲ ಗಾಳಿಸುದ್ದಿಯ ಆಧಾರದ ಮೇಲೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಯಾರೇ ಸಲಹೆ ನೀಡಿದರೂ, ಅವರು ಆ ಸಲಹೆಯನ್ನು ನಿಮಗೆೇಕೆ ನೀಡುತ್ತಿದ್ದಾರೆ ಎಂಬುದರ ಹಿಂದಿನ ಉದ್ದೇಶವನ್ನು ಅರಿಯುವುದು ಬಹಳ ಮುಖ್ಯ. ಎಲ್ಲರ ಸಲಹೆಗಳೂ ನಿಮ್ಮ ಹಿತಾಸಕ್ತಿಗಾಗಿ ಇರುತ್ತವೆ ಎಂದು ಭಾವಿಸಬೇಡಿ. ಕೆಲವರು ತಮ್ಮ ವೈಯಕ್ತಿಕ ಲಾಭ, ಅಸೂಯೆ ಅಥವಾ ಸ್ವಾರ್ಥಕ್ಕಾಗಿ ನಿಮ್ಮನ್ನು ತಪ್ಪು ದಾರಿಗೆಳೆಯಬಹುದು. ಆದ್ದರಿಂದ, ಯಾರ ಮಾತನ್ನೇ ಆಗಲಿ ತಕ್ಷಣ ನಂಬುವ ಬದಲು ಅವರ ನಿಜವಾದ ಉದ್ದೇಶವೇನು ಎಂಬುದನ್ನು ವಿಶ್ಲೇಷಿಸಿ. ನಿಮ್ಮ ಹಿತಕ್ಕಿಂತ ತಮ್ಮ ಸ್ವಾರ್ಥವನ್ನು ಬಯಸುವವರ ಮಾತುಗಳನ್ನು ಎಂದಿಗೂ ಕುರುಡಾಗಿ ನಂಬಬೇಡಿ.
ಚಾಣಕ್ಯ ನೀತಿಯು ಯಾವಾಗಲೂ ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ನಿರ್ಧಾರ ಕೈಗೊಳ್ಳುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಅನೇಕ ಬಾರಿ ಜನರು ಅತಿ ಕೋಪ, ಭಯ, ಅತಿಯಾದ ಉತ್ಸಾಹ ಅಥವಾ ಭಾವನಾತ್ಮಕ ಉದ್ರೇಕದಲ್ಲಿ ಇತರರ ಮಾತು ಕೇಳಿ ನಿರ್ಧಾರ ತೆಗೆದುಕೊಂಡು ನಂತರ ಪಶ್ಚಾತಾಪಪಡುತ್ತಾರೆ. ಉದಾಹರಣೆಗೆ, ಕೋಪದ ಭರದಲ್ಲಿ ಕೆಲಸ ಬಿಡುವುದು ಅಥವಾ ಆಪ್ತ ಸ್ನೇಹಿತರೊಂದಿಗೆ ವೈಮನಸ್ಸು ಬೆಳೆಸಿಕೊಳ್ಳುವುದು ತಪ್ಪು ನಿರ್ಧಾರವಾಗಬಹುದು. ಆದ್ದರಿಂದ ಯಾವುದೇ ಪ್ರಮುಖ ಹೆಜ್ಜೆ ಇಡುವ ಮುಂಚೆ ಶಾಂತಚಿತ್ತದಿಂದ ಯೋಚಿಸಿ, ಭಾವನೆಗಳಿಗಿಂತ ವಿವೇಚನೆಗೆ ಹೆಚ್ಚು ಆದ್ಯತೆ ನೀಡಿ.
ಇದನ್ನೂ ಓದಿ: ಬ್ರಿಟಿಷ್ ಸಂಸತ್ತಿನಲ್ಲಿ ಮೊದಲ ಬಾರಿ ಹನುಮಾನ್ ಚಾಲೀಸಾ ಪಠಣ; ವಿಡಿಯೋ ವೈರಲ್!
ಮೂರ್ಖರು ಮತ್ತು ಯಾವುದೇ ತರ್ಕವಿಲ್ಲದೆ ವಾದ ಮಾಡುವವರ ಸಹವಾಸದಿಂದ ದೂರವಿರುವುದು ಒಳ್ಳೆಯದು. ಆಳವಾದ ಯೋಚನೆ ಇಲ್ಲದೆ ಮಾತನಾಡುವ ಮತ್ತು ತಮ್ಮ ತಪ್ಪುಗಳನ್ನು ಎಂದಿಗೂ ಒಪ್ಪಿಕೊಳ್ಳದ ವ್ಯಕ್ತಿಗಳ ಸಲಹೆಯು ಹಾನಿಕಾರಕವಾಗುತ್ತದೆ. ಅಂತಹ ಜನರು ಸಾಮಾನ್ಯವಾಗಿ ಅಪೂರ್ಣ ಮಾಹಿತಿಯ ಆಧಾರದ ಮೇಲೆಯೇ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತಾರೆ. ಯಾರೋ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದಾರೆ ಮಾತ್ರಕಕ್ಕೆ ಅವರ ಮಾತುಗಳನ್ನು ನಂಬಬೇಡಿ; ಬದಲಿಗೆ ಅವರ ಮಾತುಗಳನ್ನು ತರ್ಕ ಮತ್ತು ಸತ್ಯದ ಮಾನದಂಡಗಳ ಮೇಲೆ ಪರಿಶೀಲಿಸಿ.
ಚಾಣಕ್ಯರ ಪ್ರಕಾರ, ನಿಮ್ಮ ತಪ್ಪುಗಳನ್ನು ನೇರವಾಗಿ ಎತ್ತಿ ತೋರಿಸಿ, ಅಗತ್ಯವಿದ್ದಾಗ ನಿಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸುವವನೇ ನಿಮ್ಮ ನಿಜವಾದ ಸ್ನೇಹಿತ. ನಿಮ್ಮ ಮುಂದೆ ನಿಮ್ಮನ್ನೇ ಹೊಗಳುತ್ತಾ ತಪ್ಪು ಕೆಲಸಗಳಿಗೂ ಬೆಂಬಲಿಸುವವರನ್ನು ಅಥವಾ ಪ್ರೋತ್ಸಾಹಿಸುವವರನ್ನು ನಂಬಬೇಡಿ. ಎಲ್ಲರನ್ನೂ ನಿಮ್ಮ ಹಿತೈಷಿ ಎಂದು ಭಾವಿಸುವ ದೊಡ್ಡ ತಪ್ಪನ್ನು ಮಾಡಬೇಡಿ; ಅದರಲ್ಲೂ ತಪ್ಪು ದಾರಿಗೆಳೆಯುವ ಸ್ನೇಹಿತರಿಂದ ಯಾವಾಗಲೂ ಅಂತರ ಕಾಯ್ದುಕೊಳ್ಳುವುದು ಉತ್ತಮ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ