ಅ.4 ರಿಂದ ಗಜಕೇಸರಿ ರಾಜಯೋಗ: ಈ 4 ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಅಪಾರ ಸಂಪತ್ತು!

ಜ್ಯೋತಿಷ್ಯ ಶಾಸ್ತ್ರದ ಅತ್ಯಂತ ಶುಭ ಯೋಗಗಳಲ್ಲಿ ಒಂದಾದ ಗಜಕೇಸರಿ ರಾಜಯೋಗ ಅಕ್ಟೋಬರ್ 4 ರಿಂದ ಆರಂಭವಾಗಲಿದೆ. ದೇವಗುರು ಬೃಹಸ್ಪತಿ ಕರ್ಕಾಟಕ ರಾಶಿಯಲ್ಲಿದ್ದು, ಚಂದ್ರನ ಪ್ರವೇಶದಿಂದ ಈ ಶಕ್ತಿಶಾಲಿ ಯೋಗ ಸೃಷ್ಟಿಯಾಗಲಿದೆ. ಈ ಅಪರೂಪದ ಸಂಯೋಗ ಮೇಷ, ಕರ್ಕಾಟಕ, ಮಿಥುನ, ಕುಂಭ ರಾಶಿಯವರಿಗೆ ಅದೃಷ್ಟ, ಸಂಪತ್ತು, ವೃತ್ತಿಜೀವನದಲ್ಲಿ ಪ್ರಗತಿ, ಧನಲಾಭ ಹಾಗೂ ಸಾಲಮುಕ್ತಿ ತಂದು ಸುವರ್ಣಯುಗ ಸೃಷ್ಟಿಸಲಿದೆ.

ಅ.4 ರಿಂದ ಗಜಕೇಸರಿ ರಾಜಯೋಗ: ಈ 4 ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಅಪಾರ ಸಂಪತ್ತು!
ಗಜಕೇಸರಿ ರಾಜಯೋಗ
Image Credit source: Getty Images

Updated on: Oct 03, 2026 | 9:19 AM

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಗಳ ಸಂಚಾರ ಮತ್ತು ಸಂಯೋಗಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ. ಇದೀಗ ಅಕ್ಟೋಬರ್ 4 ರಿಂದ ಅತ್ಯಂತ ಶುಭ ಹಾಗೂ ಶಕ್ತಿಶಾಲಿ ಯೋಗಗಳಲ್ಲಿ ಒಂದಾದ ‘ಗಜಕೇಸರಿ ರಾಜಯೋಗ’ ಆರಂಭವಾಗುತ್ತಿದೆ. ದೇವಗುರು ಬೃಹಸ್ಪತಿ (ಗುರು) ಈಗಾಗಲೇ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದ್ದು, ಅಕ್ಟೋಬರ್ 4 ರಂದು ಚಂದ್ರನೂ ಸಹ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗುರು ಮತ್ತು ಚಂದ್ರರ ಈ ಅಪರೂಪದ ಸಂಯೋಗದಿಂದ ಗಜಕೇಸರಿ ರಾಜಯೋಗ ಸೃಷ್ಟಿಯಾಗುತ್ತಿದ್ದು, ಇದು ಮುಖ್ಯವಾಗಿ 4 ರಾಶಿಯವರ ಬಾಳಿನಲ್ಲಿ ಸುವರ್ಣಯುಗವನ್ನು ತರಲಿದೆ.

ಮೇಷ ರಾಶಿ ಸುಖ-ಸಂಪತ್ತು ಮತ್ತು ಹೊಸ ಆಸ್ತಿ ಖರೀದಿ:

ಮೇಷ ರಾಶಿಯವರಿಗೆ ಈ ಗಜಕೇಸರಿ ರಾಜಯೋಗವು ಅತ್ಯಂತ ಅನುಕೂಲಕರ ವಾತಾವರಣವನ್ನು ತರಲಿದೆ. ಹೊಸ ಮನೆ ಅಥವಾ ಹೊಸ ವಾಹನ ಖರೀದಿಸುವ ನಿಮ್ಮ ಕನಸು ನನಸಾಗುವ ಪ್ರಬಲ ಸಾಧ್ಯತೆಗಳಿವೆ. ಮನೆಯಲ್ಲಿ ಸಂತೋಷದ ವಾತಾವರಣವಿರಲಿದ್ದು, ತಾಯಿಯ ಕಡೆಯಿಂದ ಶುಭ ಸುದ್ದಿಯನ್ನು ಕೇಳುವಿರಿ. ಇದರ ಜೊತೆಗೆ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಆಸ್ತಿ ಹಾಗೂ ಜಾಗದ ವಿವಾದಗಳು ಬಗೆಹರಿದು ನಿಮಗೆ ಆರ್ಥಿಕ ನೆಮ್ಮದಿ ನೀಡಲಿವೆ.

ಕರ್ಕಾಟಕ ರಾಶಿ ಸುವರ್ಣಯುಗ, ವೃತ್ತಿಜೀವನದಲ್ಲಿ ಬಡ್ತಿ:

ಕರ್ಕಾಟಕ ರಾಶಿಯಲ್ಲೇ ಈ ರಾಜಯೋಗ ರೂಪುಗೊಳ್ಳುತ್ತಿರುವುದರಿಂದ ಈ ರಾಶಿಯ ಜಾತಕದವರಿಗೆ ಇದು ನಿಜಕ್ಕೂ ಸುವರ್ಣ ಸಮಯವಾಗಿದೆ. ನಿಮ್ಮ ಕಾರ್ಯಕ್ಷಮತೆ ಹಾಗೂ ಆತ್ಮವಿಶ್ವಾಸ ದ್ವಿಗುಣಗೊಳ್ಳಲಿದ್ದು, ಉದ್ಯೋಗದಲ್ಲಿ ಬಡ್ತಿ (Promotion) ಹಾಗೂ ವೇತನ ಹೆಚ್ಚಳವಾಗುವ ಸಾಧ್ಯತೆಗಳಿವೆ. ಸಮಾಜದಲ್ಲಿ ಗೌರವ ಮತ್ತು ಶಿಷ್ಟಾಚಾರ ಹೆಚ್ಚಾಗುವುದಲ್ಲದೆ, ನನೆಗುದಿಗೆ ಬಿದ್ದಿದ್ದ ಎಲ್ಲಾ ಬಾಕಿ ಕೆಲಸಗಳು ಶೀಘ್ರವಾಗಿ ಪೂರ್ಣಗೊಳ್ಳಲಿವೆ.

ಇದನ್ನೂ ಓದಿ: ಲಕ್ಷ್ಮಿ ನಾರಾಯಣ ಯೋಗ: 40 ದಿನಗಳ ಕಾಲ ಈ 6 ರಾಶಿಯವರಿಗೆ ಅದೃಷ್ಟದ ಸುರಿಮಳೆ

ಮಿಥುನ ರಾಶಿ ಹಠಾತ್ ಧನಲಾಭ ಮತ್ತು ವ್ಯಾಪಾರದಲ್ಲಿ ಪ್ರಗತಿ:

ಮಿಥುನ ರಾಶಿಯವರಿಗೆ ಈ ಯೋಗದ ಪ್ರಭಾವದಿಂದ ಬಲವಾದ ಧನ ಯೋಗ ಕೂಡಿಬರಲಿದೆ. ಬಿಸಿನೆಸ್ ಹಾಗೂ ವ್ಯವಹಾರಗಳಲ್ಲಿ ಭಾರಿ ಲಾಭವಾಗಲಿದ್ದು, ನಿರೀಕ್ಷಿಸದ ಮೂಲಗಳಿಂದ ಹಠಾತ್ ಧನಲಾಭವಾಗುವ ಸೂಚನೆಗಳಿವೆ. ನಿಮ್ಮ ಮಾತಿನ ಮೌಲ್ಯ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಹೆಚ್ಚಾಗಲಿದೆ. ಅಲ್ಲದೆ, ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಹಾಗೂ ಮಂಗಳಕರ ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತಸದಿಂದ ದಿನ ಕಳೆಯುವಿರಿ.

ಕುಂಭ ರಾಶಿ ಸಾಲ ಮುಕ್ತಿ ಮತ್ತು ಯಶಸ್ಸು:

ಕುಂಭ ರಾಶಿಯ ಜನರಿಗೆ ಗಜಕೇಸರಿ ರಾಜಯೋಗವು ಹಲವು ರೀತಿಯ ನೆಮ್ಮದಿ ಹಾಗೂ ಸಫಲತೆಯನ್ನು ನೀಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಹಳೆಯ ಸಾಲಗಳನ್ನು ತೀರಿಸಲು ಹೊಸ ಮಾರ್ಗಗಳು ತೆರೆಯಲಿದ್ದು, ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 am, Sat, 3 October 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us