Hindu Astrology: ಮೊದಲ ಮಗು ಹೆಣ್ಣು ಜನಿಸಿದರೆ ತಂದೆಯ ಅದೃಷ್ಟವೇ ಬದಲಾಗುತ್ತಾ? ಶಾಸ್ತ್ರಗಳು ಹೇಳುವುದೇನು?

ಹಿಂದೂ ಧರ್ಮದಲ್ಲಿ ಹೆಣ್ಣು ಮಗು ಮಹಾಲಕ್ಷ್ಮಿಯ ಸ್ವರೂಪ. ಅವಳ ಜನನವು ತಂದೆಯ ಅದೃಷ್ಟವನ್ನು ಬದಲಿಸಿ, ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಅನಿರೀಕ್ಷಿತ ಧನಾಗಮನಕ್ಕೆ ಕಾರಣವಾಗುತ್ತದೆ. ಚಂದ್ರ ಮತ್ತು ಶುಕ್ರ ಗ್ರಹಗಳ ಬಲ ಹೆಚ್ಚಿಸಿ, ಮನೆಯಲ್ಲಿ ಸಂಪತ್ತು, ಶಾಂತಿ ನೆಲೆಸುತ್ತದೆ. ಕನ್ಯಾದಾನದಿಂದ ಪಿತೃಗಳಿಗೆ ಮೋಕ್ಷ ದೊರೆಯುತ್ತದೆ ಎಂದು ಜ್ಯೋತಿಷ್ಯ ಮತ್ತು ಪುರಾಣಗಳು ತಿಳಿಸುತ್ತವೆ.

Hindu Astrology: ಮೊದಲ ಮಗು ಹೆಣ್ಣು ಜನಿಸಿದರೆ ತಂದೆಯ ಅದೃಷ್ಟವೇ ಬದಲಾಗುತ್ತಾ? ಶಾಸ್ತ್ರಗಳು ಹೇಳುವುದೇನು?
ಮೊದಲ ಮಗು ಹೆಣ್ಣು
Image Credit source: Pinterest

Updated on: Jun 06, 2026 | 9:05 AM

ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳನ್ನು ಸಾಕ್ಷಾತ್ ಮಹಾಲಕ್ಷ್ಮಿಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ಪ್ರತಿಯೊಂದು ಮನೆಯಲ್ಲೂ ಹೆಣ್ಣು ಮಗುವಿನ ಜನನವು ಸೌಭಾಗ್ಯದ ಸಂಕೇತ ಎಂದೇ ನಂಬಲಾಗಿದೆ. ಅದರಲ್ಲೂ ವಿಶೇಷವಾಗಿ, ದಂಪತಿಗಳಿಗೆ ಮೊದಲ ಮಗುವಾಗಿ ಹೆಣ್ಣು ಮಗು ಜನಿಸಿದರೆ ಅದು ಅತ್ಯಂತ ಶುಭ ಹಾಗೂ ಆ ಮನೆಯ ಅದೃಷ್ಟವೇ ಬದಲಾಗುತ್ತದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಮನೆಯಲ್ಲಿ ಹೆಣ್ಣು ಮಗುವಿನ ಜನನವಾದರೆ ತಂದೆಯ ಜಾತಕ ಬದಲಾಗುತ್ತದೆಯೇ? ಆ ಮನೆಯಲ್ಲಿ ಯಾವ ಗ್ರಹಗಳ ಬಲ ಹೆಚ್ಚಿರುತ್ತದೆ? ಈ ಕುರಿತು ಜ್ಯೋತಿಷ್ಯ ಶಾಸ್ತ್ರ ಮತ್ತು ಪುರಾಣಗಳು ಏನು ಹೇಳುತ್ತವೆ ಎಂಬ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ತಂದೆಯ ಭಾಗ್ಯ ಬದಲಾಯಿಸುವ ‘ಮಹಾಲಕ್ಷ್ಮಿ’:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೊದಲ ಹೆಣ್ಣು ಮಗು ಜನಿಸಿದ ತಕ್ಷಣ ಆಕೆಯ ತಂದೆಯ ಜಾತಕದಲ್ಲಿ ಧನಾತ್ಮಕ ಬದಲಾವಣೆಗಳು ಆರಂಭವಾಗುತ್ತವೆ. ಮಗು ಬೆಳೆಯುತ್ತಿದ್ದಂತೆ ತಂದೆಯ ವೃತ್ತಿಜೀವನದಲ್ಲಿ (Career) ದೊಡ್ಡ ಯಶಸ್ಸು ಸಿಗುತ್ತದೆ. ಉದ್ಯೋಗದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಲಾಭ ಹಾಗೂ ಅನಿರೀಕ್ಷಿತ ಧನಾಗಮನವಾಗುತ್ತದೆ. ಹೆಣ್ಣು ಮಗುವಿನ ಪಾದಗುಣ ತಂದೆಯ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ ಎಂಬುದು ಶತಶತಮಾನಗಳ ನಂಬಿಕೆ.

ಚಂದ್ರ ಮತ್ತು ಶುಕ್ರ ಗ್ರಹಗಳ ಅಪಾರ ಬಲ:

ಯಾವ ಮನೆಯಲ್ಲಿ ಹೆಣ್ಣು ಮಗು ಜನಿಸುತ್ತದೆಯೋ, ಆ ಮನೆಯಲ್ಲಿ ಚಂದ್ರ ಮತ್ತು ಶುಕ್ರ ಗ್ರಹಗಳ ಬಲ ಹೆಚ್ಚಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಶುಕ್ರ ಗ್ರಹ ಸಂಪತ್ತು, ಐಶ್ವರ್ಯ ಮತ್ತು ಭೌತಿಕ ಸುಖವನ್ನು ನೀಡುವ ಗ್ರಹ ಮತ್ತು ಚಂದ್ರ ಗ್ರಹ ಮನಸ್ಸಿಗೆ ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುವ ಗ್ರಹ.

ಈ ಎರಡು ಗ್ರಹಗಳ ಆಶೀರ್ವಾದದಿಂದಾಗಿ ಹೆಣ್ಣು ಮಗುವಿರುವ ಮನೆಯಲ್ಲಿ ಧನಧಾನ್ಯಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ಅಲ್ಲದೆ, ಪೋಷಕರ ಜೀವನದಲ್ಲಿ ಮಾನಸಿಕ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ. ಹೆಣ್ಣು ಮಗು ಸದಾ ನಗುತ್ತಾ, ಸಂತೋಷದಿಂದಿರುವ ಮನೆಯಲ್ಲಿ ಲಕ್ಷ್ಮಿ ದೇವಿಯು ಖಾಯಂ ಆಗಿ ವಾಸಿಸುತ್ತಾಳೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

‘ಕನ್ಯಾದಾನ’ದಿಂದ ಏಳು ತಲೆಮಾರುಗಳಿಗೆ ಮೋಕ್ಷ:

ಹಿಂದೂ ಧರ್ಮದಲ್ಲಿ ಎಲ್ಲ ದಾನಗಳಿಗಿಂತ ‘ಕನ್ಯಾದಾನ’ಕ್ಕೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಹೆಣ್ಣು ಮಗುವನ್ನು ಹೆತ್ತು, ಸಾಕಿ-ಸಲಹಿ ಮತ್ತೊಂದು ಮನೆಗೆ ದಾನವಾಗಿ (ಮದುವೆ ಮಾಡಿ) ನೀಡುವುದು ಪೋಷಕರು ಮಾಡುವ ಪರಮ ಪವಿತ್ರ ಕಾರ್ಯವಾಗಿದೆ.

ಪುರಾಣಗಳ ಪ್ರಕಾರ:

ಒಂದು ಕನ್ಯಾದಾನ ಮಾಡುವುದು ಬರೋಬ್ಬರಿ ನೂರು ಯಜ್ಞಗಳನ್ನು ಮಾಡಿದ ಪುಣ್ಯಕ್ಕೆ ಸಮಾನವಾಗಿದೆ. ಮಗಳನ್ನು ಕನ್ಯಾದಾನ ಮಾಡಿ ಅತ್ತೆಯ ಮನೆಗೆ ಕಳುಹಿಸಿಕೊಡುವ ಪೋಷಕರ ಏಳು ತಲೆಮಾರುಗಳ ಪಿತೃಗಳಿಗೆ ಮೋಕ್ಷ ಸಿಗುತ್ತದೆ ಎಂದು ಜ್ಯೋತಿಷ್ಯ ವಿದ್ವಾಂಸರು ಹೇಳುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us