
ವಿವಾಹ, ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಆದರೆ ಎಲ್ಲಾ ವಿವಾಹಗಳು ಸುಖಮಯವಾಗಿ, ಯಶಸ್ವಿಯಾಗಿ ನಡೆಯುವುದಿಲ್ಲ. ವಿವಾಹ ಜೀವನದಲ್ಲಿ ಸಂಘರ್ಷ, ಸಂತಾನದ ಸಮಸ್ಯೆ, ಕುಜ ದೋಷ ಮುಂತಾದ ಸಮಸ್ಯೆಗಳು ಎದುರಾದಾಗ, ಕೆಲವರು ಮರುಮಾಂಗಲ್ಯವನ್ನು ಆಶ್ರಯಿಸುತ್ತಾರೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಮರುಮಾಂಗಲ್ಯ ಎಂದರೆ, ಮತ್ತೊಂದು ಮಾಂಗಲ್ಯ. ಇದು ಮತ್ತೆ ಮಾಂಗಲ್ಯವನ್ನು ಧರಿಸುವುದನ್ನು ಸೂಚಿಸುತ್ತದೆ. ಆದರೆ ಇದು ಯಾವುದೇ ದೊಡ್ಡ ಕಾರ್ಯಕ್ರಮವಲ್ಲ. ಸಾಂಪ್ರದಾಯಿಕವಾಗಿ, ಬಂಗಾರದ ತಾಳಿಯನ್ನು ದೇವಸ್ಥಾನದ ಹುಂಡಿಯಲ್ಲಿ ಹಾಕಿ, ಹೊಸ ತಾಳಿಯನ್ನು ಧರಿಸುವುದು ಒಂದು ಪದ್ಧತಿಯಾಗಿತ್ತು. ಆದರೆ ಗುರೂಜಿ ಅವರು ಖರ್ಚಿಲ್ಲದ, ಸರಳವಾದ ಮರುಮಾಂಗಲ್ಯ ವಿಧಾನವನ್ನು ಸೂಚಿಸುತ್ತಾರೆ.
ಈ ಸರಳ ವಿಧಾನದಲ್ಲಿ, ಹರಿಶಿನ ಕೊಂಬನ್ನು ಅರಿಶಿನ ದಾರದಿಂದ ಸುತ್ತಿ, ದೇವಿಯ ದೇವಸ್ಥಾನ ಅಥವಾ ಗುರುಗಳ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಅರ್ಚಕರಿಗೆ ಒಪ್ಪಿಸಿ ಸಂಕಲ್ಪ ಮಾಡಲಾಗುತ್ತದೆ. ಮೂರನೇ ದಿನ ಸಂಜೆ, ಸೂರ್ಯಾಸ್ತದ ಸಮಯದಲ್ಲಿ, ಈ ಹರಿಶಿನ ಕೊಂಬನ್ನು ಪತ್ನಿಯ ಮಾಂಗಲ್ಯಕ್ಕೆ ಕಟ್ಟಲಾಗುತ್ತದೆ. ಒಂಬತ್ತನೇ ದಿನ, ಈ ಹರಿಶಿನ ಕೊಂಬನ್ನು ನೀರಿಗೆ ಅರ್ಪಿಸಲಾಗುತ್ತದೆ.
ಇದನ್ನೂ ಓದಿ: ಸೆ. 7 ರಾಹುಗ್ರಸ್ತ ಚಂದ್ರಗ್ರಹಣ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?
ಮುಖ್ಯವಾಗಿ, ಈ ವಿಧಾನ ಮದುವೆಯಾಗಿ ಹತ್ತು ವರ್ಷಗಳೊಳಗಿನ ವಿವಾಹಿತರಿಗೆ ಮಾತ್ರ ಅನ್ವಯಿಸುತ್ತದೆ. ಹತ್ತು ವರ್ಷಗಳ ನಂತರ, ಬೇರೆ ಮದುವೆಯನ್ನು ಮಾಡಿಕೊಳ್ಳುವುದು ಬೇರೆ ವಿಷಯ. ಈ ಸರಳ ವಿಧಾನವು ನಂಬಿಕೆ ಮತ್ತು ಸರಳತೆಯ ಮೇಲೆ ಆಧರಿಸಿದೆ. ಹಣಕಾಸಿನ ಒತ್ತಡವಿಲ್ಲದೇ, ಸುಲಭವಾಗಿ ಈ ವಿಧಾನವನ್ನು ಪಾಲಿಸಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ