Unibrow Astrology: ಎರಡು ಹುಬ್ಬುಗಳು ಪರಸ್ಪರ ಸಂಧಿಸಿದ್ದರೆ ಅಶುಭವೇ? ಶಾಸ್ತ್ರಗಳು ಹೇಳುವುದೇನು?

ಜೋಡು ಹುಬ್ಬು ಅಥವಾ ಹುಬ್ಬುಗಳ ರಚನೆಯ ಕುರಿತು ಪುರಾತನ ನಂಬಿಕೆಗಳು, ಜ್ಯೋತಿಷ್ಯ ಶಾಸ್ತ್ರದ ವಿಶ್ಲೇಷಣೆ ಮತ್ತು ಅವು ವ್ಯಕ್ತಿಯ ಭವಿಷ್ಯ, ಅದೃಷ್ಟದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಕುರಿತು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಮಹಿಳೆಯರಿಗೆ ಅದೃಷ್ಟ ತಂದರೆ, ಪುರುಷರಿಗೆ ಸಂಘರ್ಷ ತರುತ್ತದೆ ಎಂಬ ನಂಬಿಕೆಗಳು, ಸಮುದ್ರಿಕಾ ಶಾಸ್ತ್ರದ ಪ್ರಕಾರ ಇರುವ ವಿಭಿನ್ನ ಅಭಿಪ್ರಾಯಗಳನ್ನು ಇಲ್ಲಿ ಅರಿಯಬಹುದು.

Unibrow Astrology: ಎರಡು ಹುಬ್ಬುಗಳು ಪರಸ್ಪರ ಸಂಧಿಸಿದ್ದರೆ ಅಶುಭವೇ? ಶಾಸ್ತ್ರಗಳು ಹೇಳುವುದೇನು?
ಜೋಡು ಹುಬ್ಬು

Updated on: Mar 11, 2026 | 11:38 AM

ಸಮಾಜದಲ್ಲಿ ದೈಹಿಕ ಲಕ್ಷಣಗಳ ಆಧಾರದ ಮೇಲೆ ವ್ಯಕ್ತಿಯ ಗುಣಲಕ್ಷಣ ಅಥವಾ ಭವಿಷ್ಯವನ್ನು ಅಳೆಯುವ ಸಂಪ್ರದಾಯ ಬಹಳ ಹಳೆಯದು. ತಲೆಯ ಮೇಲಿನ ಸುಳಿ, ಅಂಗೈ ರೇಖೆಗಳಂತೆಯೇ ‘ಜೋಡು ಹುಬ್ಬು’ (Unibrow) ಅಥವಾ ಹುಬ್ಬುಗಳ ರಚನೆಯ ಬಗ್ಗೆಯೂ ವಿಭಿನ್ನ ನಂಬಿಕೆಗಳು ಚಾಲ್ತಿಯಲ್ಲಿವೆ. ಹಿರಿಯರ ಅನುಭವ ಮತ್ತು ಜ್ಯೋತಿಷ್ಯ ಶಾಸ್ತ್ರದ ಹಿನ್ನೆಲೆಯಲ್ಲಿ ಇವುಗಳನ್ನು ನೋಡುವುದಾದರೆ ಕುತೂಹಲಕಾರಿ ವಿಷಯಗಳು ಬೆಳಕಿಗೆ ಬರುತ್ತವೆ.

ವಿವಾಹ ಮತ್ತು ಜೀವನದ ಬಗೆಗಿನ ನಂಬಿಕೆಗಳು:

ಜೋಡು ಹುಬ್ಬು ಹೊಂದಿರುವವರ ಬಗ್ಗೆ ಜನರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವು ಹಿರಿಯರ ಪ್ರಕಾರ, ಎರಡು ಹುಬ್ಬುಗಳು ಒಂದಕ್ಕೊಂದು ಅಂಟಿಕೊಂಡಿರುವವರು ಜೀವನದಲ್ಲಿ ಎರಡು ಮದುವೆಯಾಗುವ ಸಾಧ್ಯತೆ ಇರುತ್ತದೆ ಎನ್ನಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಇನ್ನು ಕೆಲವರು ಅಂತಹ ವ್ಯಕ್ತಿಗಳಿಗೆ ದಾಂಪತ್ಯ ಸುಖ ಅಷ್ಟಾಗಿ ಇರುವುದಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾರೆ. ಆದರೆ ಇವೆಲ್ಲವೂ ಕೇವಲ ನಂಬಿಕೆಗಳಾಗಿದ್ದು, ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

ಜ್ಯೋತಿಷ್ಯ ಶಾಸ್ತ್ರದ ವಿಶ್ಲೇಷಣೆ:

ಸಮುದ್ರಿಕಾ ಶಾಸ್ತ್ರ ಅಥವಾ ಜ್ಯೋತಿಷ್ಯದ ಪ್ರಕಾರ, ಹುಬ್ಬುಗಳು ವ್ಯಕ್ತಿಯ ಶ್ರಮಜೀವಿ ಗುಣವನ್ನು ಸೂಚಿಸುತ್ತವೆ. ಆದರೆ ಇದರ ಪರಿಣಾಮ ಸ್ತ್ರೀ ಮತ್ತು ಪುರುಷರ ಮೇಲೆ ಬೇರೆ ಬೇರೆಯಾಗಿರುತ್ತದೆ ಎಂದು ಹೇಳಲಾಗುತ್ತದೆ:

ಮಹಿಳೆಯರ ಮೇಲೆ ಪ್ರಭಾವ:

ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಜೋಡು ಹುಬ್ಬು ಹೊಂದಿರುವ ಮಹಿಳೆಯರು ಅತ್ಯಂತ ಅದೃಷ್ಟವಂತರು. ಇವರು ಕಾಲಿಟ್ಟ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ತಮ್ಮ ಅತ್ತೆ-ಮಾವ ಮತ್ತು ಪತಿಗೆ ಅದೃಷ್ಟ ತರುವ ಇವರು, ಕುಟುಂಬದ ಅಭಿವೃದ್ಧಿಗೆ ಕಾರಣರಾಗುತ್ತಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಪುರುಷರ ಮೇಲೆ ಪ್ರಭಾವ:

ಪುರುಷರ ವಿಷಯಕ್ಕೆ ಬಂದರೆ ಈ ನಂಬಿಕೆಗಳು ಸ್ವಲ್ಪ ಭಿನ್ನವಾಗಿವೆ. ಹತ್ತಿರವಾಗಿರುವ ಅಥವಾ ಜೋಡು ಹುಬ್ಬು ಹೊಂದಿರುವ ಪುರುಷರು ಜೀವನದಲ್ಲಿ ಅತಿಯಾದ ಸಂಘರ್ಷ ಎದುರಿಸಬೇಕಾಗಬಹುದು ಎಂಬ ನಂಬಿಕೆಯಿದೆ. ಎಷ್ಟೇ ಶ್ರಮವಹಿಸಿದರೂ ಸಣ್ಣ ಪುಟ್ಟ ವಿಷಯಗಳಿಗೂ ಅಡೆತಡೆಗಳು ಎದುರಾಗುವುದು ಮತ್ತು ನಿರೀಕ್ಷಿತ ಫಲ ಸಿಗದಿರುವುದು ಇವರನ್ನು ಕಾಡಬಹುದು ಎನ್ನಲಾಗುತ್ತದೆ.

ಆಧ್ಯಾತ್ಮಿಕ ಮತ್ತು ಜಾಗತಿಕ ನಂಬಿಕೆಗಳು:

ಹುಬ್ಬುಗಳನ್ನು ಕೇವಲ ದೈಹಿಕ ಭಾಗವಾಗಿ ನೋಡದೆ, ಅವುಗಳನ್ನು ಆಧ್ಯಾತ್ಮಿಕ ಶಕ್ತಿಯ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ಕೆಲವು ವಿದೇಶಿ ಸಂಸ್ಕೃತಿಗಳಲ್ಲಿ, ಜೋಡು ಹುಬ್ಬು ಹೊಂದಿರುವ ಪುರುಷರು ವಿಶೇಷವಾದ ಮಾಂತ್ರಿಕ ಅಥವಾ ಅದೀಂದ್ರಿಯ ಶಕ್ತಿಗಳನ್ನು ಹೊಂದಿರುತ್ತಾರೆ ಎಂದು ನಂಬಲಾಗುತ್ತದೆ. ಇನ್ನು ತೆಳ್ಳಗಿನ ಅಥವಾ ವಿರಳವಾದ ಹುಬ್ಬುಗಳನ್ನು ಹೊಂದಿರುವವರು ದೈಹಿಕವಾಗಿ ಸ್ವಲ್ಪ ದುರ್ಬಲರಾಗಿರುತ್ತಾರೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಬೇಗ ತುತ್ತಾಗುತ್ತಾರೆ ಎಂಬ ನಂಬಿಕೆಯೂ ಅಸ್ತಿತ್ವದಲ್ಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us