ವಾಸ್ತು ಶಾಸ್ತ್ರದಲ್ಲಿ ಯಾವ ವಸ್ತುವನ್ನು ಯಾವ ದಿಕ್ಕಿನಲ್ಲಿ ಇಡಬೇಕೆಂದು ವಿವರವಾಗಿ ತಿಳಿಸಲಾಗಿದೆ. ಮನೆಯಲ್ಲಿ ಕನ್ನಡಿಯನ್ನು ಯಾವ ದಿಕ್ಕಿಗೆ ಇಡಬೇಕು ಎಂಬುದನ್ನೂ ವಾಸ್ತು ತಜ್ಞರು ಹೇಳುತ್ತಾರೆ. ಕನ್ನಡಿಯನ್ನು ಸರಿಯಾದ ಸ್ಥಳದಲ್ಲಿ ಇರಿಸದಿದ್ದರೆ ಅದು ಮನೆಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ವಾಸ್ತು ಶಾಸ್ತ್ರದಲ್ಲಿ ಕನ್ನಡಿಗೆ ಸಂಬಂಧಿಸಿದ ಹಲವು ನಿಯಮಗಳಿದ್ದು, ಈ ನಿಯಮಗಳನ್ನು ಪಾಲಿಸಿದರೆ ಅದೃಷ್ಟ ಬರುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ಮನೆಯಲ್ಲಿ ಕನ್ನಡಿಗಳನ್ನು ಅಳವಡಿಸುವಾಗ ಈ ವಿಷಯಗಳ ಬಗ್ಗೆ ವಿಶೇಷ ಗಮನ ಕೊಡಿ.
ಮನೆಯಲ್ಲಿ ಕನ್ನಡಿ ಜೋಡಿಸುವಾಗ ಎರಡು ಕನ್ನಡಿಗಳನ್ನು ಮುಖಾಮುಖಿಯಾಗಿ ಇಡಬಾರದು. ಎರಡು ಕನ್ನಡಿ ಮುಖಾಮುಖಿ ಇದ್ದರೆ ಮನೆಯ ನೆಮ್ಮದಿ ಕೆಡುತ್ತದೆ. ಹಾಗೆಯೇ ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿಯೂ ಕನ್ನಡಿ ಇಡಬಾರದು. ಹಾಸಿಗೆ ಕನ್ನಡಿಗೆ ಕಾಣಿಸಬಾರದು. ಸ್ಥಳಾವಕಾಶದ ಕೊರತೆಯಿಂದ ಕನ್ನಡಿಯನ್ನು ಹೊರಗೆ ತೆಗೆಯಲು ಸಾಧ್ಯವಾಗದಿದ್ದರೆ, ಮಲಗುವಾಗ ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಿ.
ಇದನ್ನೂ ಓದಿ: ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಪ್ರತೀ ದಿನ ಮುಂಜಾನೆ ಈ ನಿಯಮ ಪಾಲಿಸಿ
ಅಲ್ಲದೆ, ಮನೆಯಲ್ಲಿ ಎಂದಿಗೂ ಒಡೆದ ಕನ್ನಡಿ ಇರಬಾರದು ಎಂಬುದನ್ನು ನೆನಪಿಡಿ. ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಬೆಳಗ್ಗೆ ಎದ್ದು ಕನ್ನಡಿ ಒಡೆದು ನೋಡಿದರೆ ದಿನವಿಡೀ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಅಡುಗೆ ಮನೆಯಲ್ಲೂ ಕನ್ನಡಿ ಇಡಬಾರದು. ಇದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮನೆ ಅಥವಾ ಕಚೇರಿಯ ಮುಖ್ಯ ದ್ವಾರದಲ್ಲಿ ಪೂರ್ವಾಭಿಮುಖವಾಗಿ ಕನ್ನಡಿ ಇಡುವುದು ಸೂಕ್ತ. ಈ ಸ್ಥಳದಲ್ಲಿ ಇರಿಸಲಾಗಿರುವ ಕನ್ನಡಿಯು ಉದಯಿಸುವ ಸೂರ್ಯನನ್ನು ಪ್ರತಿನಿಧಿಸುತ್ತದೆ.ಈಶಾನ್ಯ ಗೋಡೆಯ ಮೇಲೆ ಇರಿಸಲಾದ ಕನ್ನಡಿಯು ಪ್ರಗತಿಯನ್ನು ತರುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ