ವಿಶ್ವದ ನಂ.1 ಆಟಗಾರನಿಗೆ ಸೋಲುಣಿಸಿದ ಲಕ್ಷ್ಯ ಸೇನ್

Updated on: Mar 04, 2026 | 9:54 AM

Lakshya Sen vs Shi Yu Qi: ನಿರ್ಣಾಯಕವಾಗಿದ್ದ ಮೂರನೇ ಸೆಟ್​ನಲ್ಲಿ ಮತ್ತೊಮ್ಮೆ ಲಯಕ್ಕೆ ಮರಳಿದ ಲಕ್ಷ್ಯ ಸೇನ್ 21–17 ಅಂತರದಿಂದ ಶಿ ಯು ಕಿಗೆ ಸೋಲುಣಿಸಿದರು. ಈ ಮೂಲಕ 78 ನಿಮಿಷಗಳ ಕಾಲ ನಡೆದ ಈ ಪಂದ್ಯವನ್ನು ಭಾರತೀಯ ತಾರೆ  23–21, 19–21, 21–17 ಸೆಟ್‌ಗಳಿಂದ ಗೆದ್ದುಕೊಂಡರು.

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಓಪನ್ 2026 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಅಮೋಘ ಪ್ರದರ್ಶನ ನೀಡಿದ್ದಾರೆ. ಮೊದಲ ಸುತ್ತಿನಲ್ಲೇ ವಿಶ್ವದ ನಂ.1 ಆಟಗಾರ ಮತ್ತು ಹಾಲಿ ಚಾಂಪಿಯನ್ ಚೀನಾದ ಶಿ ಯು ಕಿ ಅವರನ್ನು ಸೋಲಿಸಿ ದೊಡ್ಡ ಸಂಚಲನ ಮೂಡಿಸಿದ್ದಾರೆ.

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲ ಸೆಟ್​ ಅನ್ನು 23–21 ಅಂತರದಿಂದ ಗೆದ್ದುಕೊಂಡಿದ್ದರು. ಇದಾಗ್ಯೂ ದ್ವಿತೀಯ ಸೆಟ್​ನಲ್ಲಿ ಕಂಬ್ಯಾಕ್ ಮಾಡಿದ ಶಿ ಯು ಕಿ 19–21 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದರು.

ಇನ್ನು ನಿರ್ಣಾಯಕವಾಗಿದ್ದ ಮೂರನೇ ಸೆಟ್​ನಲ್ಲಿ ಮತ್ತೊಮ್ಮೆ ಲಯಕ್ಕೆ ಮರಳಿದ ಲಕ್ಷ್ಯ ಸೇನ್ 21–17 ಅಂತರದಿಂದ ಶಿ ಯು ಕಿಗೆ ಸೋಲುಣಿಸಿದರು. ಈ ಮೂಲಕ 78 ನಿಮಿಷಗಳ ಕಾಲ ನಡೆದ ಈ ಪಂದ್ಯವನ್ನು ಭಾರತೀಯ ತಾರೆ  23–21, 19–21, 21–17 ಸೆಟ್‌ಗಳಿಂದ ಗೆದ್ದುಕೊಂಡರು.

ವಿಶೇಷ ಎಂದರೆ ಬಿಡಬ್ಲ್ಯೂಎಫ್ (BWF) ವರ್ಲ್ಡ್ ಟೂರ್‌ನಲ್ಲಿ ವಿಶ್ವದ ನಂ.1 ಆಟಗಾರನ ವಿರುದ್ಧ ಲಕ್ಷ್ಯ ಸೇನ್ ಸಾಧಿಸಿದ ಮೊದಲ ವೈಯಕ್ತಿಕ ಜಯ ಇದಾಗಿದೆ. ಈ ಗೆಲುವಿನೊಂದಿಗೆ ಲಕ್ಷ್ಯ ಸೇನ್ ಪ್ರೀ-ಕ್ವಾರ್ಟರ್ ಫೈನಲ್ (ರೌಂಡ್ ಆಫ್ 16) ಪ್ರವೇಶಿಸಿದ್ದಾರೆ.

ಮಾರ್ಚ್ 5 ರಂದು ನಡೆಯಲಿರುವ ಮುಂದಿನ ಪಂದ್ಯದಲ್ಲಿ ಅವರು ಹಾಂಗ್ ಕಾಂಗ್‌ನ ಎನ್ಜಿ ಕಾ ಲಾಂಗ್ ಆಂಗಸ್ ಅವರನ್ನು ಎದುರಿಸಲಿದ್ದಾರೆ.

Follow Us
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More