ಮೆಲ್ಬರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಾದ ರೋಹಿತ್ ಶರ್ಮ, ರಿಷಭ್ ಪಂತ್, ನವದೀಪ್ ಸೈನಿ ಮತ್ತು ಶುಭಮನ್ ಗಿಲ್ ಹೊಸವರ್ಷದ ಮೊದಲ ದಿನದಂದು ಮೆಲ್ಬರ್ನ್ ನಗರದ ಹೋಟೆಲ್ನಲ್ಲಿ ಊಟ ಮಾಡಿದ ಬಿಲ್ನ್ನು ಅಭಿಮಾನಿಯೊಬ್ಬರು ಪಾವತಿಸಿದ್ದು ಸುದ್ದಿಯಾದ ಬೆನ್ನಲ್ಲೇ ಇದೀಗ ಅದೇ ಬಿಲ್ ಟ್ವಿಟರ್ನಲ್ಲಿ ವೈರಲ್ ಆಗಿದೆ.
ಬಿಲ್ನಲ್ಲಿ ಬೀಫ್ ಇದೆ. ಭಾರತೀಯ ಆಟಗಾರರು ವಿದೇಶದಲ್ಲಿ ಬೀಫ್ ತಿಂದಿದ್ದಾರೆ ಎಂದು ಆರೋಪಿಸಿ ನೆಟ್ಟಿಗರು ಕ್ರಿಕೆಟಿಗರನ್ನು ಟ್ರೋಲ್ ಮಾಡಿದ್ದಾರೆ. ಟ್ವಿಟರ್ನಲ್ಲಿ ವೈರಲ್ ಆಗಿರುವ ಬಿಲ್ ನಲ್ಲಿ ಪೋರ್ಕ್ ಕೂಡಾ ಇದೆ. ಹೋಟೆಲ್ಗೆ ಹೋಗಿ ಬೀಫ್ ಮತ್ತು ಪೋರ್ಕ್ ತಿಂದವರು ಯಾರು ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ.
ಕ್ರಿಕೆಟಿಗರು ಹೋಟೆಲ್ನಲ್ಲಿರುವ ವಿಡಿಯೊವನ್ನು ಕ್ರಿಕೆಟ್ ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು. ಏತನ್ಮಧ್ಯೆ, ಕ್ರಿಕೆಟಿಗರು ಬಯೋ ಸೆಕ್ಯುರಿಟಿ ಪ್ರೊಟೊಕಾಲ್ (ಕೋವಿಡ್ ಸುರಕ್ಷಾ ನಿಯಮ) ಉಲ್ಲಂಘಿಸಿ ಹೋಟೆಲ್ಗೆ ಹೋಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ವಿಡಿಯೊ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಬಿಸಿಸಿಐ ತನಿಖೆ ನಡೆಸುತ್ತಿದ್ದು, ನಮ್ಮ ಆಟಗಾರರು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಬಿಸಿಸಿಐ ಹೇಳಿದೆ.
Pork is ok ?
— V7™?? (@vijjuxi) January 2, 2021
Beef ?? pic.twitter.com/KwXh6WUzTk
— ? (@vigil_nte) January 2, 2021
Bill pay kiya to kiya lekin bill ki photo upload karne ki kya jaroorat thi ??♂️??♂️
— R. (@_RAJ_RK) January 2, 2021
Sharma ji ka ladka bhi beef khata hai ?♂️
— सनकी v3.0 (@snkii__) January 2, 2021
India vs Australia Test Series |ಮೆಲ್ಬರ್ನ್ನಲ್ಲಿ ಭಾರತೀಯ ಆಟಗಾರರ ಊಟದ ಬಿಲ್ ನೀಡಿದ ಭಾರತೀಯ ಅಭಿಮಾನಿ
Published On - 11:36 am, Sun, 3 January 21