ಜೋಹಾನ್ಸ್ ಬರ್ಗ್ ಟೆಸ್ಟ್ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ಆಟಗಾರರು ಮೈದಾನದಲ್ಲೇ ಪರಸ್ಪರ ವಾಗ್ವಾದ ಮಾಡಿಕೊಂಡಿದ್ದಾರೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ವೇಗಿ ಸ್ಟುವರ್ಟ್ ಬ್ರಾಡ್, ವಿರಾಮ ವೇಳ ಜಗಳವಾಡಿಕೊಂಡಿದ್ದಾರೆ. ಇಬ್ಬರ ನಡುವಿನ ಜಗಳಕ್ಕೆ ಕಾರಣವೇನು ಅನ್ನೋದು ಇನ್ನೂ ತಿಳಿದಿಲ್ಲ.
ಪೀಟರ್ ಸಿಡಲ್ ನಿವೃತ್ತಿ:
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಆರಂಭಕ್ಕೂ ಮುನ್ನ ಆಸಿಸ್ ವೇಗಿ, ಪೀಟಲ್ ಸಿಡಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 2008ರಲ್ಲಿ ಭಾರತ ವಿರುದ್ಧದ ಟೆಸ್ಟ್ ಮೂಲಕ ಪೀಟರ್, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಂಟ್ರಿಕೊಟ್ಟಿದ್ರು. ಆದ್ರೆ, ಸಿಡಲ್ ದೇಸಿ ಕ್ರಿಕೆಟ್ನಲ್ಲಿ ಮುಂದುವರೆಯೋದಾಗಿ ತಿಳಿಸಿದ್ದಾರೆ.
ಟೀಕೆಗೆ ಗುರಿಯಾದ ಶಿವಂ-ಐಯ್ಯರ್:
ಮುಂಬೈ ತಂಡದ ಶಿವಂ ದುಬೆ ಹಾಗೂ ಶ್ರೇಯಸ್ ಐಯ್ಯರ್, ದಿಗ್ಗಜ ಕ್ರಿಕೆಟಿಗ ಟೀಕೆಗೆ ಗುರಿಯಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ 5-6ದಿನ ಸಮಯ ಇತ್ತು. ಆದ್ರೂ ದುಬೆ-ಐಯ್ಯರ್ ಮುಂಬೈ ತಂಡವನ್ನ ಸೇರಿಕೊಂಡಿದ್ದಿಲ್ಲ. ಇಬ್ಬರು ತಂಡದಲ್ಲಿ ಆಡಿದ್ರೆ, ರೈಲ್ವೇಸ್ ವಿರುದ್ಧ ಮುಂಬೈ ಸೋಲುಕಾಣ್ತಿರಲಿಲ್ಲ ಅಂತ ಆರೋಪಿಸಲಾಗ್ತಿದೆ.
ಆಸ್ಟ್ರೇಲಿಯಾಗೆ ಗೆಲುವು:
ಮೆಲ್ಬರ್ನ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲೂ ಆಸ್ಟ್ರೇಲಿಯಾ 247ರನ್ಗಳ ಗೆಲುವು ಸಾಧಿಸಿದೆ. 487ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಕಿವೀಸ್, 240ರನ್ಗೆ ಆಲೌಟ್ ಆಯ್ತು. ನ್ಯೂಜಿಲೆಂಡ್ ಪರ ಟಾಮ್ ಬ್ಲೆಂಡೆಲ್ 121ರನ್ ಗಳಿಸಿದ್ರು. ನಾಥನ್ ಲಿಯಾನ್ 4ವಿಕೆಟ್ ಪಡೆದು ಮಿಂಚಿದ್ರು.