ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವುದು ನನ್ನ ಗುರಿ; ಟಿವಿ9 ಜೊತೆ ಯುವ ಟೆನಿಸ್ ಆಟಗಾರ್ತಿ ಸೃಷ್ಟಿ ಕಿರಣ್ ಮಾತು

Updated on: Jun 12, 2026 | 6:18 PM

Shristi Kiran: ಬೆಂಗಳೂರಿನ 13 ವರ್ಷದ ಸೃಷ್ಟಿ ಕಿರಣ್, 13 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕ ಗಳಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಭಾರತೀಯ ಟೆನಿಸ್ ತಾರೆ ಸತತ ಐದು ಐಟಿಎಫ್ ಜೂನಿಯರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆಲ್ಲುವುದು ಮತ್ತು ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತರುವುದು ತಮ್ಮ ಗುರಿ ಎಂದು ಸೃಷ್ಟಿ ಕಿರಣ್ ಹೇಳಿದ್ದಾರೆ.

ಭಾರತಕ್ಕೆ ಹೊಸ ಟೆನಿಸ್ ತಾರೆ ಸಿಕ್ಕಿದ್ದು, ಬೆಂಗಳೂರಿನ 13 ವರ್ಷದ ಸೃಷ್ಟಿ ಕಿರಣ್ 13 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕವನ್ನು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಸೃಷ್ಟಿ ಭಾರತೀಯ ಟೆನಿಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಅಂತರರಾಷ್ಟ್ರೀಯ ಜೂನಿಯರ್ ಟೆನಿಸ್ ಸರ್ಕ್ಯೂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸೃಷ್ಟಿ, ಸತತ ಐದು ಐಟಿಎಫ್ ಜೂನಿಯರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಗ್ವಾಟೆಮಾಲಾದಲ್ಲಿ ನಡೆದ ಐಟಿಎಫ್ ವರ್ಲ್ಡ್ ಟೆನಿಸ್ ಟೂರ್ ಜೂನಿಯರ್ಸ್ ಜೆ 100 ಪಂದ್ಯಾವಳಿಯ ಫೈನಲ್ ಕೂಡ ತಲುಪಿದ್ದರು.

ಇದೀಗ ಟಿವಿ9 ನ ಅಂಗಸಂಸ್ಥೆಯಾದ ನ್ಯೂಸ್ 9 ಜೊತೆಗೆ ಮಾತನಾಡಿರುವ ಸೃಷ್ಟಿ ಕಿರಣ್ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮನದಾಳ ತೆರೆದಿಟ್ಟಿದ್ದಾರೆ. ಮುಂದೆ ಯುರೋಪಿನಲ್ಲಿ ನಡೆಯುವ ಗ್ರಾಸ್ ಕೋರ್ಟ್​ ಪಂದ್ಯಾವಳಿ ಮೇಲೆ ಸೃಷ್ಟಿ ಕಣ್ಣಿಟ್ಟಿದ್ದಾರೆ. ಹಾಗೆಯೇ ಭವಿಷ್ಯದಲ್ಲಿ ದೇಶಕ್ಕಾಗಿ ಎಲ್ಲಾ ಗ್ರ್ಯಾಂಡ್​ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆಲ್ಲುವುದು ಮತ್ತು ಒಲಿಂಪಿಕ್ಸ್​ನಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಡುವುದು ನನ್ನ ಗುರಿ ಎಂದಿದ್ದಾರೆ.

Published on: Jun 12, 2026 06:15 PM
Follow Us
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More