Copa America 2024: ಕೋಪಾ ಅಮೆರಿಕ ಫುಟ್​ಬಾಲ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

|

Updated on: Jun 20, 2024 | 1:01 PM

Copa America 2024: ಅಮೆರಿಕ ಖಂಡದ ದೇಶಗಳ ನಡುವಣ ಫುಟ್​ಬಾಲ್ ಟೂರ್ನಿ ಕೋಪಾ ಅಮೆರಿಕ ಪಂದ್ಯಾವಳಿಗೆ ಗುರುವಾರ (ಜೂ.20) ಚಾಲನೆ ದೊರೆಯಲಿದೆ. ಈ ಬಾರಿ ಒಟ್ಟು 16 ತಂಡಗಳು ಕಣಕ್ಕಿಳಿಯುತ್ತಿದ್ದು, ಎಂದಿನಂತೆ ಬಲಿಷ್ಠ ಪಡೆಗಳಾಗಿ ಬ್ರೆಝಿಲ್, ಅರ್ಜೆಂಟೀನಾ, ಉರುಗ್ವೆ ಮತ್ತು ಮೆಕ್ಸಿಕೊ ತಂಡಗಳು ಮುಂಚೂಣಿಯಲ್ಲಿದೆ.

Copa America 2024: ಕೋಪಾ ಅಮೆರಿಕ ಫುಟ್​ಬಾಲ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
Copa America 2024
Follow us on

Copa America 2024: ಪ್ರತಿಷ್ಠಿತ ಕೋಪಾ ಅಮೆರಿಕ ಫುಟ್​ಬಾಲ್ ಟೂರ್ನಿಯು ಇಂದಿನಿಂದ (ಜೂ.20) ಶುರುವಾಗಲಿದೆ. 16 ತಂಡಗಳ ನಡುವಣ ಕಾಲ್ಚೆಂಡು ಕಾದಾಟದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿದೆ. ಅಟ್ಲಾಂಟಾದ ಮರ್ಸಿಡಿಸ್-ಬೆನ್ಝ್​ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಕೋಪಾ ಅಮೆರಿಕ ಟೂರ್ನಿಗೆ ಚಾಲನೆ ಸಿಗಲಿದೆ.

ಯುಎಸ್​ಎ ಆತಿಥ್ಯ:

ಕೋಪಾ ಅಮೆರಿಕ ಟೂರ್ನಿಯ ಇತಿಹಾಸದಲ್ಲೇ ಯುಎಸ್​ಎ 2ನೇ ಬಾರಿಗೆ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಹಾಗೆಯೇ 48ನೇ ಆವೃತ್ತಿಯಲ್ಲಿ ಉತ್ತರ ಅಮೆರಿಕದ ಆರು ತಂಡಗಳು ಕೂಡ ಕಣಕ್ಕಿಳಿಯಲಿದೆ.

ಆದರೆ ಈ ಬಾರಿ ಬ್ರೆಝಿಲ್ ಪರ ಖ್ಯಾತ ಆಟಗಾರ ನೇಮರ್ ಕಣಕ್ಕಿಳಿಯುತ್ತಿಲ್ಲ. ಗಾಯದ ಕಾರಣ ನೇಮರ್ ಟೂರ್ನಿಯಿಂದ ಹೊರಗುಳಿದಿದ್ದು, ಹೀಗಾಗಿ ಬ್ರೆಝಿಲ್ ತಂಡವನ್ನು ವಿನಿಶಿಯಸ್ ಜೂನಿಯರ್ ಮುನ್ನಡೆಸಲಿದ್ದಾರೆ.

ದಾಖಲೆಯ ಸನಿಹದಲ್ಲಿ ಮೆಸ್ಸಿ:

ಈ ಬಾರಿಯ ಟೂರ್ನಿಯಲ್ಲಿ ಅರ್ಜೆಂಟೀನಾ ತಾರೆ ಲಿಯೋನೆಲ್ ಮೆಸ್ಸಿ 5 ಗೋಲು ದಾಖಲಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಕೋಪಾ ಅಮೆರಿಕ ಟೂರ್ನಿಯಲ್ಲಿ ಅತ್ಯಧಿಕ ಗೋಲು ದಾಖಲಿಸಿದ ದಾಖಲೆ ನಾರ್ಬರ್ಟೊ ಮೆಂಡೆಜ್ (ಅರ್ಜೆಂಟೀನಾ-17 ಗೋಲು) ಮತ್ತು ಜಿಜಿನ್ಹೋ (ಬ್ರೆಝಿಲ್-17 ಗೋಲು) ಹೆಸರಿನಲ್ಲಿದ್ದು, ಈ ದಾಖಲೆಯನ್ನು ಮೀರಿಸಲು ಮೆಸ್ಸಿಗೆ ಕೇವಲ ಐದು ಗೋಲುಗಳ ಅಗತ್ಯವಿದೆ.

ಕೋಪಾ ಅಮೆರಿಕ ಟೂರ್ನಿಯ ಸ್ವರೂಪ:

ಈ ಟೂರ್ನಿಯಲ್ಲಿ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ದೇಶಗಳು ಕಣಕ್ಕಿಳಿಯಲಿವೆ. ಅದರಂತೆ ಉತ್ತರ ಅಮೆರಿಕದ 6 ತಂಡಗಳು ಮತ್ತು ದಕ್ಷಿಣ ಅಮೆರಿಕದ 10 ತಂಡಗಳು ಕೋಪಾ ಅಮೆರಿಕ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದೆ.

ಇಲ್ಲಿ 16 ತಂಡಗಳನ್ನು ಒಟ್ಟು 4 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಪ್ರತಿ ಗ್ರೂಪ್​ನಲ್ಲಿರುವ ತಂಡ ಆಯಾ ಗ್ರೂಪ್​ನಲ್ಲಿನ ಇತರೆ ತಂಡಗಳ ವಿರುದ್ಧ 3 ಪಂದ್ಯಗಳನ್ನಾಡಲಿದೆ.

ಈ ಗುಂಪುಗಳಲ್ಲಿ ಪಾಯಿಂಟ್ಸ್ ಟೇಬಲ್​ ಇರಲಿದ್ದು, ಈ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ನಾಕೌಟ್ ಹಂತಕ್ಕೇರಲಿದೆ. ಆ ಬಳಿಕ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ನಡೆಯಲಿದೆ.

16 ತಂಡಗಳ ಗ್ರೂಪ್​:

A B C D
ಅರ್ಜೆಂಟೀನಾ ಮೆಕ್ಸಿಕೋ ಯುಎಸ್ಎ ಬ್ರೆಝಿಲ್
ಪೆರು ಈಕ್ವೆಡಾರ್ ಉರುಗ್ವೆ ಕೊಲಂಬಿಯಾ
ಚಿಲಿ ವೆನೆಜುವೆಲಾ ಪನಾಮ ಪರಾಗ್ವೆ
ಕೆನಡಾ ಜಮೈಕಾ ಬೊಲಿವಿಯಾ ಕೋಸ್ಟರಿಕಾ

 

ಇದನ್ನೂ ಓದಿ: EURO 2024: ಕ್ರಿಸ್ಟಿಯಾನೊ ರೊನಾಲ್ಡೊ ರೆಕಾರ್ಡ್​ ಬ್ರೇಕ್ ಮಾಡಿದ ಗುಲರ್

ಕೋಪಾ ಅಮೆರಿಕ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ:

ದಿನಾಂಕ ಪಂದ್ಯದ ಸಂಖ್ಯೆ ಮುಖಾಮುಖಿ ಪಂದ್ಯ ಶುರು (ಸ್ಥಳೀಯ ಸಮಯ) ಪಂದ್ಯದ ಸಮಯ (ಭಾರತದಲ್ಲಿ) ಸ್ಥಳ
ಜೂನ್ 20 1 ಅರ್ಜೆಂಟೀನಾ vs ಕೆನಡಾ ರಾತ್ರಿ 8:00 ಬೆಳಗ್ಗೆ 5:30 (ಜೂನ್ 21) ಅಟ್ಲಾಂಟಾ
ಜೂನ್ 21 2 ಪೆರು vs ಚಿಲಿ ಸಂಜೆ 7:00 ಬೆಳಗ್ಗೆ 5:30 (ಜೂನ್ 22) ಆರ್ಲಿಂಗ್ಟನ್
ಜೂನ್ 22 3 ಮೆಕ್ಸಿಕೋ vs ಜಮೈಕಾ ರಾತ್ರಿ 8:00 ಬೆಳಗ್ಗೆ 6:30 (ಜೂನ್ 23) ಹೂಸ್ಟನ್
ಜೂನ್ 22 4 ಈಕ್ವೆಡಾರ್ vs ವೆನೆಜುವೆಲಾ ಮಧ್ಯಾಹ್ನ 3:00 ಬೆಳಗ್ಗೆ 3:30 (ಜೂನ್ 23) ಸಾಂಟಾ ಕ್ಲಾರಾ
ಜೂನ್ 23 5 ಯುಎಸ್​ಎ vs ಬೊಲಿವಿಯಾ ಸಂಜೆ 5:00 ಬೆಳಗ್ಗೆ 3:30 (ಜೂನ್ 24) ಆರ್ಲಿಂಗ್ಟನ್
ಜೂನ್ 23 6 ಉರುಗ್ವೆ vs ಪನಾಮ ರಾತ್ರಿ 9:00 ಬೆಳಗ್ಗೆ 6:30 (ಜೂನ್ 24) ಮಿಯಾಮಿ
ಜೂನ್ 24 7 ಬ್ರೆಝಿಲ್ vs ಕ್ರೊಯೇಷಿಯಾ ಸಂಜೆ 6:00 ಬೆಳಗ್ಗೆ 6:30 (ಜೂನ್ 25) ಇಂಗ್ಲೆವುಡ್
ಜೂನ್ 24 8 ಕೊಲಂಬಿಯಾ vs ಪರಾಗ್ವೆ ಸಂಜೆ 5:00 ಬೆಳಗ್ಗೆ 3:30 (ಜೂನ್ 25) ಹೂಸ್ಟನ್
ಜೂನ್ 25 9 ಚಿಲಿ vs ಅರ್ಜೆಂಟೀನಾ ರಾತ್ರಿ 9:00 ಬೆಳಗ್ಗೆ 6:30 (ಜೂನ್ 26)  ರುದರ್‌ಫೋರ್ಡ್
ಜೂನ್ 25 10 ಪೆರು vs ಕೆನಡಾ ಸಂಜೆ 5:00 ಬೆಳಗ್ಗೆ 3:30 (ಜೂನ್ 26) ಕಾನ್ಸಾಸ್ ನಗರ
ಜೂನ್ 26 11 ವೆನೆಜುವೆಲಾ vs ಮೆಕ್ಸಿಕೋ ಸಂಜೆ 6:00 ಬೆಳಗ್ಗೆ 6:30 (ಜೂನ್ 27) ಇಂಗ್ಲೆವುಡ್
ಜೂನ್ 26 12 ಈಕ್ವೆಡಾರ್ vs ಜಮೈಕಾ ಮಧ್ಯಾಹ್ನ 3:00 ಬೆಳಗ್ಗೆ 3:30 (ಜೂನ್ 27) ಲಾಸ್ ವೇಗಾಸ್
ಜೂನ್ 27 13 ಪನಾಮ vs ಯುಎಸ್​ಎ ಸಂಜೆ 6:00 ಬೆಳಗ್ಗೆ 3:30 (ಜೂನ್ 28) ಅಟ್ಲಾಂಟಾ
ಜೂನ್ 27 14 ಉರುಗ್ವೆ vs ಬೊಲಿವಿಯಾ ರಾತ್ರಿ 9:00 ಬೆಳಗ್ಗೆ 6:30 (ಜೂನ್ 28) ರುದರ್‌ಫೋರ್ಡ್
ಜೂನ್ 28 15 ಪರಾಗ್ವೆ vs ಬ್ರೆಝಿಲ್ ಸಂಜೆ 6:00 ಬೆಳಗ್ಗೆ 6:30 (ಜೂನ್ 29) ಲಾಸ್ ವೇಗಾಸ್
ಜೂನ್ 28 16 ಕೊಲಂಬಿಯಾ vs ಕೋಸ್ಟರಿಕಾ ಮಧ್ಯಾಹ್ನ 3:00 ಬೆಳಗ್ಗೆ 3:30 (ಜೂನ್ 29) ಗ್ಲೆಂಡೇಲ್
ಜೂನ್ 29 17 ಅರ್ಜೆಂಟೀನಾ vs ಪೆರು ರಾತ್ರಿ 8:00 ಬೆಳಗ್ಗೆ 5:30 (ಜೂನ್ 30) ಮಿಯಾಮಿ
ಜೂನ್ 29 18 ಕೆನಡಾ vs ಚಿಲಿ ರಾತ್ರಿ 8:00 ಬೆಳಗ್ಗೆ 5:30 (ಜೂನ್ 30) ಒರ್ಲ್ಯಾಂಡೊ
ಜೂನ್ 30 19 ಮೆಕ್ಸಿಕೋ vs ಈಕ್ವೆಡಾರ್ ಸಂಜೆ 5:00 ಬೆಳಗ್ಗೆ 5:30 (ಜುಲೈ 1) ಗ್ಲೆಂಡೇಲ್
ಜೂನ್ 30 20 ಜಮೈಕಾ vs ವೆನೆಜುವೆಲಾ ಸಂಜೆ 7:00 ಬೆಳಗ್ಗೆ 5:30 (ಜುಲೈ 1) ಆಸ್ಟಿನ್
ಜುಲೈ 1 21 ಯುಎಸ್ಎ vs ಉರುಗ್ವೆ ರಾತ್ರಿ 8:00 ಬೆಳಗ್ಗೆ 6:30 (ಜುಲೈ 2) ಕಾನ್ಸಾಸ್ ನಗರ
ಜುಲೈ 1 22 ಬೊಲಿವಿಯಾ vs ಪನಾಮ ರಾತ್ರಿ 9:00 ಬೆಳಗ್ಗೆ 6:30 (ಜುಲೈ 2) ಒರ್ಲ್ಯಾಂಡೊ
ಜುಲೈ 2 23 ಬ್ರೆಝಿಲ್ vs ಕೊಲಂಬಿಯಾ ಸಂಜೆ 6:00 ಬೆಳಗ್ಗೆ 6:30 (ಜುಲೈ 3) ಸಾಂಟಾ ಕ್ಲಾರಾ
ಜುಲೈ 2 24 ಕೋಸ್ಟರಿಕಾ vs ಪರಾಗ್ವೆ ರಾತ್ರಿ 8:00 ಬೆಳಗ್ಗೆ 6:30 (ಜುಲೈ 3) ಆಸ್ಟಿನ್
ಕ್ವಾರ್ಟರ್ ಫೈನಲ್
ಜುಲೈ 4 25 1A vs 2B ರಾತ್ರಿ 8:00 ಬೆಳಗ್ಗೆ 6:30 (ಜುಲೈ 5) ಹೂಸ್ಟನ್
ಜುಲೈ 5 26 1B vs 2A ರಾತ್ರಿ 8:00 ಬೆಳಗ್ಗೆ 6:30 (ಜುಲೈ 6) ಆರ್ಲಿಂಗ್ಟನ್
ಜುಲೈ 6 27 1C vs 2D ಸಂಜೆ 6:00 ಬೆಳಗ್ಗೆ 6:30 (ಜುಲೈ 7) ಲಾಸ್ ವೇಗಾಸ್
ಜುಲೈ 6 28 1D vs 2C ಮಧ್ಯಾಹ್ನ 3:00 ಬೆಳಗ್ಗೆ 3:30 (ಜುಲೈ 7) ಗ್ಲೆಂಡೇಲ್
ಸೆಮಿಫೈನಲ್ ಪಂದ್ಯಗಳು
ಜುಲೈ 9 29 W25 vs W26 ರಾತ್ರಿ 8:00 ಬೆಳಿಗ್ಗೆ 5:30 (ಜುಲೈ 10) ರುದರ್‌ಫೋರ್ಡ್
ಜುಲೈ 10 30 W27 vs W28 ರಾತ್ರಿ 8:00 ಬೆಳಗ್ಗೆ 5:30 (ಜುಲೈ 11) ಷಾರ್ಲೆಟ್
3ನೇ ಸ್ಥಾನದ ಪಂದ್ಯ
ಜುಲೈ 13 31 L29 vs L30 ರಾತ್ರಿ 8:00 ಬೆಳಗ್ಗೆ 5:30 (ಜುಲೈ 14) ಷಾರ್ಲೆಟ್
ಫೈನಲ್​ ಪಂದ್ಯ
ಜುಲೈ 14 32 W29 vs W30 ರಾತ್ರಿ 8:00 ಬೆಳಿಗ್ಗೆ 5:30 (ಜುಲೈ 15) ಮಿಯಾಮಿ

 

Published On - 12:56 pm, Thu, 20 June 24